ರಾಹುಲ್ ಶತಕಕ್ಕೆ ಬಾಲಿವುಡ್ ಸ್ಟಾರ್ ಸುನೀಲ್ ಶೆಟ್ಟಿ ಹೇಳಿದ್ದೇನು?

kl rahul and suniel shetty for web
Published on

ಬೆಂಗಳೂರು: ಕನ್ನಡಿಗ ಕೆಎಲ್ ರಾಹುಲ್ ಲಾರ್ಡ್ಸ್ ಅಂಗಳದಲ್ಲಿ ಶತಕ ಸಿಡಿಸಿದ ಬೆನ್ನಲ್ಲೇ ಅಭಿನಂದನೆಗಳ ಮಹಾಪೂರವೇ ಹರಿದು ಬರುತ್ತಿದೆ. ಪ್ರತಿಷ್ಠಿತ ಲಾರ್ಡ್ಸ್‌ನಲ್ಲಿ ಈ ಸಾಧನೆ ಮಾಡಿದ ಭಾರತದ 10ನೇ ಹಾಗೂ ಕರ್ನಾಟಕದ 3ನೇ ಬ್ಯಾಟ್ಸ್‌ಮನ್ ಎನಿಸಿಕೊಂಡಿದ್ದಾರೆ. ಅಚ್ಚರಿಯ ವಿಷಯ ಏನೆಂದರೆ ಬಾಲಿವುಡ್ ನಟ ಸುನೀಲ್ ಶೆಟ್ಟಿ ರಾಹುಲ್ ಅವರನ್ನು ಅಭಿನಂದಿಸಿದ್ದು, ನನ್ನ ಹುಟ್ಟಹಬ್ಬಕ್ಕೆ ಭರ್ಜರಿ ಗಿಫ್ಟ್ ನೀಡಿದ್ದೀರಿ ಎಂದು ಹೇಳಿದ್ದಾರೆ. ಸುನೀಲ್ ಶೆಟ್ಟಿ ಪುತ್ರಿ ಅಥಿಯಾ ಶೆಟ್ಟಿ ಜತೆ ರಾಹುಲ್ ಡೇಟಿಂಗ್ ಮಾಡುತ್ತಿದ್ದಾರೆ. ಸುನೀಲ್ ಶೆಟ್ಟಿ ಟ್ವೀಟ್‌ನಿಂದ ರಾಹುಲ್-ಆಥಿಯಾ ಪ್ರೀತಿಗೆ ಮತ್ತಷ್ಟು ಬಲಬಂದಿದೆ.

ಸುನೀಲ್ ಶೆಟ್ಟಿ ಪುತ್ರಿ ಆಥಿಯಾ ಕೂಡ ರಾಹುಲ್ ಜತೆ ಇಂಗ್ಲೆಂಡ್‌ಗೆ ತೆರಳಿದ್ದಾರೆ. ಆಗಸ್ಟ್ 11 ರಂದು ಸುನೀಲ್ ಶೆಟ್ಟಿ 60 ವರ್ಷ ಆಚರಿಸಿಕೊಂಡರು. ಇದೀಗ ನೆಲ್ಮೆಯ ಹುಡುಗ ಲಾರ್ಡ್ಸ್‌ನಲ್ಲಿ ಶತಕ ಸಿಡಿಸಿರುವುದು ಸುನೀಲ್ ಶೆಟ್ಟಿ ಅವರ ಸಂಭ್ರಮವನ್ನು ಹೆಚ್ಚಿಸಿದೆ. ಇನ್‌ಸ್ಟಾಗ್ರಾಂನಲ್ಲಿ ರಾಹುಲ್ ಶತಕದ ವಿಡಿಯೋ ಪ್ರಕಟಿಸಿರುವ ಸುನೀಲ್ ಶೆಟ್ಟಿ, ಕ್ರಿಕೆಟ್‌ನ ಮೆಕ್ಕಾದಲ್ಲಿ ಸೆಂಚುರಿ, ಕಂಗ್ರಾರ್ಟ್ಸ್ ಹಾಗೂ ಗಾಡ್ ಬ್ಲೆಸ್ ಬಾಬಾ ಎಂದು ಬರೆದುಕೊಂಡಿದ್ದಾರೆ. ಇದಕ್ಕೆ ಹಾರ್ಟ್ ಎಮೋಜಿ ಮೂಲಕ ರಾಹುಲ್ ಪ್ರತಿಕ್ರಿಯಿಸಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net