ನನಗೆ ಆತ್ಮಹತ್ಯೆ ಯೋಚನೆ ಇತ್ತು: ವಿಚ್ಛೇದನ ಸಮಯದಲ್ಲಿ ಖಿನ್ನತೆಯೊಂದಿಗೆ ಹೋರಾಡಿದ ಬಗ್ಗೆ ಮೌನ ಮುರಿದ Yuzvendra Chahal​!

Untitled design - 2025-08-01T113233.532
Published on

Yuzvendra Chahal: ಭಾರತದ ಸ್ಪಿನ್ನರ್ ಯುಜ್ವೇಂದ್ರ ಚಾಹಲ್, ಧನುಶ್ರೀ ಜತೆಗಿನ ದಾಂಪತ್ಯ ಮುರಿದು ಇದಾಲೇ ವಿಚ್ಛೇದನ ಪಡೆದಿದ್ದಾರೆ. ಸುಮಾರು ಐದು ವರ್ಷಗಳ ಕಾಲ ದಾಂಪತ್ಯ ಜೀವನ ನಡೆಸಿದ್ದ ಈ ಜೋಡಿಗೆ ಇದೇ ವರ್ಷದ ಮಾರ್ಚ್ 20 ರಂದು ಬಾಂಬೆ ಹೈಕೋರ್ಟ್ ವಿಚ್ಛೇದನ ನೀಡಿತು.

ಇದೀಗ, ಚಾಹಲ್ ತನ್ನ ಮಾಜಿ ಪತ್ನಿಯೊಂದಿಗಿನ ಸಂಬಂಧದ ಬಗ್ಗೆ ಮಾತನಾಡುತ್ತಾ, ತಮ್ಮ ಮದುವೆಯ ಕೊನೆಯ ಕೆಲವು ತಿಂಗಳುಗಳಲ್ಲಿ ಆತ್ಮಹತ್ಯೆಯ ಆಲೋಚನೆಗಳು ಬರುತ್ತಿದ್ದವು ಎಂಬ ಆತಂಕಕಾರಿ ವಿಷಯದ ಬಗ್ಗೆ ಕೊನೆಗೂ ಮೌನ ಮುರಿದ್ದಾರೆ.

ಯಜ್ವೇಂದ್ರ ಚಾಹಲ್ ಹೇಳಿದ್ದೇನು?

ರಾಜ್ ಶಮಾನಿ ಪಾಡ್‌ಕ್ಯಾಸ್ಟ್‌ನಲ್ಲಿ ಮಾತನಾಡಿದ ಚಾಹಲ್, ''ಡಿಸೆಂಬರ್-ಜನವರಿ (2024-25) ತಿಂಗಳುಗಳಲ್ಲಿ ನಡೆದ ವಿಜಯ್ ಹಜಾರೆ ಟ್ರೋಫಿಯ ಸಮಯದಲ್ಲಿ ತನಗೆ ಖಿನ್ನತೆ ಉಂಟಾಗಿತ್ತು. ಹೀಗಾಗಿ, ತಮ್ಮ ರಾಜ್ಯ ಕ್ರಿಕೆಟ್ ತಂಡದಿಂದ ವಿರಾಮ ಕೇಳಿದ್ದೆ'' ಎಂದು ಹೇಳಿದರು.

"ನನಗೆ ಆತಂಕವಾಗುತ್ತಿತ್ತು. ನಾನು ಖಿನ್ನತೆಯಲ್ಲಿದ್ದೆ. ನನಗೆ ಆತ್ಮಹತ್ಯೆಯ ಆಲೋಚನೆಗಳು ಇದ್ದವು, ನಾನು ಸಾಮಾಜಿಕ ಮಾಧ್ಯಮದಲ್ಲಿ ನನ್ನ ಬಗ್ಗೆ ಹಲವು ವಿಷಯಗಳನ್ನು ನೋಡಿದೆ. ಆಗ ನಾನು ಕ್ರಿಕೆಟ್‌ನಿಂದ ವಿರಾಮ ಬಯಸಿದ್ದೆ. ಆತಂಕದಿಂದಾಗಿ ನಾನು ನಡುಗಲು ಪ್ರಾರಂಭಿಸಿದೆ, ಎಸಿ ಆನ್ ಆಗಿದ್ದರೂ ನಾನು ಬೆವರುತ್ತಿದ್ದೆ" ಎಂದು ಯುಜ್ವೇಂದ್ರ ಚಾಹಲ್ ಪಾಡ್‌ಕ್ಯಾಸ್ಟ್‌ನಲ್ಲಿ ಹೇಳಿದ್ದಾರೆ.

ವಿಚ್ಛೇದನಕ್ಕೆ ಕಾರಣ ಕೊಟ್ಟ ಚಾಹಲ್​

ಕೊನೆಗೆ ಇಬ್ಬರೂ ಹೊಂದಾಣಿಕೆಯಾಗಲಿಲ್ಲ. ಕ್ರಿಕೆಟ್ ಬದ್ಧತೆಗಳಿಂದಾಗಿ ತಮ್ಮ ಹೆಂಡತಿಗೆ ಹೆಚ್ಚಿನ ಸಮಯ ನೀಡಲು ಸಾಧ್ಯವಾಗದ ಕಾರಣ ದಾಂಪತ್ಯ ಜೀವನ ಹಾಳಾಗಿದೆ ಎಂದು ಚಾಹಲ್ ಹೇಳಿದರು.

"ಸಂಬಂಧವು ರಾಜಿಯಂತೆ, ಒಬ್ಬರು ಕೋಪಗೊಂಡರೆ, ಇನ್ನೊಬ್ಬರು ಕೇಳಬೇಕಾಗುತ್ತದೆ. ಕೆಲವೊಮ್ಮೆ ಇಬ್ಬರ ಸ್ವಭಾವ ಹೊಂದಿಕೆಯಾಗುವುದಿಲ್ಲ. ನಾನು ಭಾರತಕ್ಕಾಗಿ ಆಡುತ್ತಿದ್ದೆ, ಅವಳು ಕೂಡ ತನ್ನ ಕೆಲಸವನ್ನು ಮಾಡುತ್ತಿದ್ದಳು, ನಮಗೆ ಹೆಚ್ಚು ಭೇಟಿಯಾಗಲು ಸಾಧ್ಯವಾಗಲಿಲ್ಲ. ಇದು 1-2 ವರ್ಷಗಳಿಂದ ನಡೆಯುತ್ತಿತ್ತು" ಎಂದು ಚಾಹಲ್ ಹೇಳಿದರು.

"ನಾನು ವಿಚ್ಛೇದನ ಪಡೆದಾಗ ನನಗೆ ಸಂತೋಷವಾಯಿತು. ಕೆಲವು ಜನರು ಅದರ ಬಗ್ಗೆ ಅಸೂಯೆ ಪಟ್ಟಿರಬೇಕು ಎಂದು ನಾನು ಭಾವಿಸುತ್ತೇನೆ. ಅದಕ್ಕೆ 3-4 ತಿಂಗಳುಗಳ ಮೊದಲು ನಾನು ಅತ್ಯಂತ ಕೆಟ್ಟ ಹಂತವನ್ನು ಕಂಡಿದ್ದೆ ಮತ್ತು ನನ್ನ ಸ್ನೇಹಿತರು ಅದನ್ನು ದಾಟಲು ನನಗೆ ಸಹಾಯ ಮಾಡಿದರು" ಎಂದು ಚಾಹಲ್​ ಹೇಳಿದ್ದಾರೆ.(ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net