ಶೇಷ ಭಾರತಕ್ಕೆ ಆಸರೆಯಾದ ಸುದರ್ಶನ್ ಅರ್ಧಶತಕ

New-Project-53
Published on

ರಾಜ್‌ಕೋಟ್: ಆರಂಭಿಕ ಸಾಯಿ ಸುದರ್ಶನ್ (72 ರನ್, 164 ಎಸೆತ, 7 ಬೌಂಡರಿ) ಸಮಯೋಚಿತ ಬ್ಯಾಟಿಂಗ್ ನೆರವಿನಿಂದ ಶೇಷ ಭಾರತ ತಂಡ ಇರಾನಿ ಕಪ್ ಪಂದ್ಯದಲ್ಲಿ ರಣಜಿ ಚಾಂಪಿಯನ್ ಹಾಗೂ ಆತಿಥೇಯ ಸೌರಾಷ್ಟ್ರ ಎದುರು ಮೊದಲ ದಿನದ ಗೌರವ ಸಂಪಾದಿಸಿದೆ.

ಸೌರಾಷ್ಟ್ರ ಕ್ರಿಕೆಟ್ ಸಂಸ್ಥೆ ಕ್ರೀಡಾಂಗಣದಲ್ಲಿ ಭಾನುವಾರ ಆರಂಭಗೊಂಡ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ನಡೆಸಿದ ಶೇಷ ಭಾರತ 90 ಓವರ್‌ಗಳಲ್ಲಿ 8 ವಿಕೆಟ್‌ಗೆ 298 ರನ್ ಪೇರಿಸಿದೆ. ಕನ್ನಡಿತ ಮಯಾಂಕ್ ಅಗರ್ವಾಲ್ (32) ಹಾಗೂ ಸಾಯಿ ಸುದರ್ಶನ್ ಮೊದಲ ವಿಕೆಟ್‌ಗೆ 69 ರನ್‌ಗಳಿಸಿ ಉತ್ತಮ ಆರಂಭ ಒದಗಿಸಿದರು. ನಂತರ ಸುದರ್ಶನ್ ಹಾಗೂ ನಾಯಕ ಹನುಮ ವಿಹಾರಿ (33) 2ನೇ ವಿಕೆಟ್‌ಗೆ 69 ಸೇರಿಸಿದರು. ಬಳಿಕ ರ್ಸ್ರಾಜ್ ಖಾನ್ (17), ಯಶ್ ಧುಲ್ (10) ವಿಕೆಟ್ ಕಳೆದುಕೊಂಡು ಕುಸಿತ ಕಂಡ ಶೇಷ ಭಾರತಕ್ಕೆ ವಿಕೆಟ್ ಕೀಪರ್- ಬ್ಯಾಟರ್ ಶ್ರೀಕರ್ ಭರತ್ (36) ಹಾಗೂ ಶಮ್ಸ್ ಮುಲಾನಿ (32) ಆಸರೆಯಾದರು. ದಿನದಂತ್ಯಕ್ಕೆ ಸೌರಭ್ ಕುಮಾರ್ (30*) ಜತೆಯಾಗಿ ನವದೀಪ್ ಸೈನಿ (8) ಕ್ರೀಸ್‌ನಲ್ಲಿದ್ದಾರೆ. ಸೌರಾಷ್ಟ್ರ ಪರ ಪಾರ್ಥ್ ಭುತ್ 4 ವಿಕೆಟ್ ಕಬಳಿಸಿದರು.

ಶೇಷ ಭಾರತ: 90 ಓವರ್‌ಗಳಲ್ಲಿ 8 ವಿಕೆಟ್‌ಗೆ 298 (ಮಯಾಂಕ್ 32, ಸುದರ್ಶನ್ 72, ಹನುಮ ವಿಹಾರಿ 33, ಭರತ್ 36, ಮುಲಾನಿ 32, ಸೌರಭ್ 30*, ಪಾರ್ಥ್ ಭುತ್ 85ಕ್ಕೆ4, ಯುವರಾಜ್ ಸಿನ್ಹಾ 74ಕ್ಕೆ2).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net