

ಬೆಂಗಳೂರು: ಪದಾರ್ಪಣಾ ಪಂದ್ಯದಲ್ಲಿ ತಿಪ್ಪಾ ರೆಡ್ಡಿ (82 ರನ್, 47 ಎಸೆತ, 11 ಬೌಂಡರಿ, 2 ಸಿಕ್ಸರ್) ತೋರಿದ ಭರ್ಜರಿ ಬ್ಯಾಟಿಂಗ್ ನೆರವಿನಿಂದ ಮಂಗಳೂರು ಡ್ರ್ಯಾಗನ್ಸ್ ತಂಡ 2ನೇ ಆವೃತ್ತಿಯ ಮಹಾರಾಜ ಟ್ರೋಫಿ ಕೆಎಸ್‌ಸಿಎ ಟಿ20ಟೂರ್ನಿಯಲ್ಲಿ ಶಿವಮೊಗ್ಗ ಲಯನ್ಸ್ ತಂಡದ ಎದುರು 15 ರನ್‌ಗಳ ಗೆಲುವು ದಾಖಲಿಸಿದೆ. ಇದರೊಂದಿಗೆ ಕೆ. ಗೌತಮ್ ಪಡೆ ಅಂಕಪಟ್ಟಿಯಲ್ಲಿ 4ನೇ ಸ್ಥಾನಕ್ಕೇರಿದೆ.
ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಗುರುವಾರ ನಡೆದ ಮೊದಲ ಪಂದ್ಯದಲ್ಲಿ ಟಾಸ್ ಗೆದ್ದ ಶಿವಮೊಗ್ಗ ನಾಯಕ ಶ್ರೇಯಸ್ ಗೋಪಾಲ್ ಬೌಲಿಂಗ್ ಆಯ್ಕೆ ಮಾಡಿಕೊಂಡರು. ಮೊದಲು ಬ್ಯಾಟಿಂಗ್ ನಡೆಸಿದ ಮಂಗಳೂರು ಡ್ರ್ಯಾಗನ್ಸ್ 7 ವಿಕೆಟ್‌ಗೆ 191 ರನ್‌ಗಳ ಸವಾಲಿನ ಮೊತ್ತ ಕಲೆಹಾಕಿತು. ಪ್ರತಿಯಾಗಿ ಮಂಗಳೂರು ತಂಡದ ಸಂಘಟಿತ ಬೌಲಿಂಗ್ ದಾಳಿಗೆ ಸಿಲುಕಿದ ಶಿವಮೊಗ್ಗ ಲಯನ್ಸ್ 9 ವಿಕೆಟ್‌ಗೆ 176 ರನ್‌ಗಳಿಸಲಷ್ಟೇ ಶಕ್ತವಾಯಿತು.
ಮಂಗಳೂರು ಡ್ರ್ಯಾಗನ್ಸ್: 7 ವಿಕೆಟ್‌ಗೆ 191 (ಬಿಆರ್ ಶರತ್ 1, ರೋಹನ್ 7, ಕೆ. ಸಿದ್ದಾರ್ಥ್ 17, ತಿಪ್ಪಾ ರೆಡ್ಡಿ 82, ಅನಿರುದ್ಧ ಜೋಷಿ 34, ಕೆ. ಗೌತಮ್ 16, ಆದಿತ್ಯ ಸೋಮಣ್ಣ 38ಕ್ಕೆ3, ಶ್ರೇಯಸ್ ಗೋಪಾಲ್ 35ಕ್ಕೆ 2).
ಶಿವಮೊಗ್ಗ ಲಯನ್ಸ್: 9 ವಿಕೆಟ್‌ಗೆ 191 (ರೋಹನ್ ಕದಂ 25, ನಿಹಾಲ್ 7, ರೋಹಿತ್ 23, ಶ್ರೇಯಸ್ 4, ಅಭಿನವ್ 25, ಪ್ರಣವ್ 39, ಕ್ರಾಂತಿ 21, ಪರಸ್ 29ಕ್ಕೆ2, ಆನಂದ್ 31ಕ್ಕೆ2, ಸಂಕಲ್ಪ 37ಕ್ಕೆ2).
ನಾಳೆಯ ಪಂದ್ಯಗಳು
ಮೈಸೂರು ವಾರಿಯರ್ಸ್-ಬೆಂಗಳೂರು ಬ್ಲಾಸ್ಟರ್ಸ್
ಆರಂಭ: ಮಧ್ಯಾಹ್ನ 1
ಶಿವಮೊಗ್ಗ ಲಯನ್ಸ್-ಹುಬ್ಬಳ್ಳಿ ಟೈಗರ್ಸ್
ಆರಂಭ: ಸಂಜೆ 5.30
ನೇರ ಪ್ರಸಾರ: ಸ್ಟಾರ್ ಸ್ಪೋರ್ಟ್ಸ್ ಕನ್ನಡ/2.