ಹಾರ್ದಿಕ್ ಬಳಗಕ್ಕೆ ತವರಿನಲ್ಲಿ ಗೆಲುವಿನ ಹಳಿ ಏರುವ ತವಕ: ಇಂದು ರಾಜಸ್ಥಾನ ರಾಯಲ್ಸ್ ಸವಾಲು

New-Project-2-10
Published on

ಮುಂಬೈ: ನಾಯಕತ್ವ ಬದಲಾವಣೆಯ ವಿವಾದದ ನಡುವೆ ಆರಂಭಿಕ ಎರಡೂ ಪಂದ್ಯಗಳಲ್ಲಿ ಸೋತು ಒತ್ತಡಕ್ಕೆ ಸಿಲುಕಿರುವ ಐದು ಬಾರಿಯ ಚಾಂಪಿಯನ್ ಮುಂಬೈ ಇಂಡಿಯನ್ಸ್ ತಂಡ ಐಪಿಎಲ್-17ರಲ್ಲಿ ಸೋಮವಾರ, ವಾಂಖೆಡೆ ಕ್ರೀಡಾಂಗಣದಲ್ಲಿ ನಡೆಯಲಿರುವ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್ ತಂಡವನ್ನು ಎದುರಿಸಲಿದೆ. ಹಾಲಿ ಆವೃತ್ತಿಯಲ್ಲಿ ತವರಿನಲ್ಲಿ ಮೊದಲ ಬಾರಿಗೆ ಆಡಲಿರುವ ಮುಂಬೈ, ನೂತನ ನಾಯಕ ಹಾರ್ದಿಕ್ ಪಾಂಡ್ಯ ಸಾರಥ್ಯದಲ್ಲಿ ಗೆಲುವಿನ ಖಾತೆ ತೆರೆಯುವ ನಿರೀಕ್ಷೆಯಲ್ಲಿದೆ. ಅತ್ತ ರಾಜಸ್ಥಾನ ರಾಯಲ್ಸ್ ಹ್ಯಾಟ್ರಿಕ್ ಗೆಲುವಿನ ಹಂಬಲದಲ್ಲಿದೆ.

ರೋಹಿತ್ ಶರ್ಮ ನಾಯಕತ್ವ ಕಸಿದು ಹಾರ್ದಿಕ್‌ಗೆ ನೀಡಿದ್ದರಿಂದ ಸಾಕಷ್ಟು ಟೀಕೆ ಎದುರಿಸಿರುವ ಮುಂಬೈಗೆ ಸತತ 2 ಪಂದ್ಯಗಳ ಸೋಲು ಮತ್ತಷ್ಟು ಹಿನ್ನಡೆ ತಂದಿದೆ. ಆದರೆ ರಾಜಸ್ಥಾನದ ಎದುರು ಹಿಂದಿನ 5 ಮುಖಾಮುಖಿಯಲ್ಲಿ 4-1 ರಿಂದ ಮುಂಬೈ ಮೇಲುಗೈ ಸಾಧಿಸಿದೆ. ಸನ್‌ರೈಸರ್ಸ್‌ ಎದುರು ರನ್‌ಪ್ರವಾಹದಲ್ಲಿ ಮುಳುಗಿದ ಮುಂಬೈ ಅಂಕಪಟ್ಟಿಯಲ್ಲಿ ಕೊನೇ ಸ್ಥಾನದಲ್ಲಿದೆ. ವಿಶ್ವ ನಂ.1 ಟಿ20 ಬ್ಯಾಟರ್ ಸೂರ್ಯಕುಮಾರ್ ಗೈರು ಕೂಡ ಮುಂಬೈಗೆ ಹಿನ್ನಡೆಯಾಗಿದೆ. ಆದರೆ ಟೂರ್ನಿಯಲ್ಲಿ ಆತಿಥೇಯ ತಂಡಗಳೇ ಗೆಲುವು ಸಾಧಿಸುತ್ತಿರುವುದು ಮುಂಬೈಗೆ ಸ್ಫೂರ್ತಿದಾಯಕವೆನಿಸಿದೆ. ಅಲ್ಲದೆ, ಮುಂಬೈ ತನ್ನ ಮುಂದಿನ 4 ಪಂದ್ಯಗಳನ್ನು ತವರಿನಲ್ಲೇ ಆಡಲಿರುವುದು ಆತ್ಮವಿಶ್ವಾಸ ಹೆಚ್ಚಿಸಿದೆ.

ಆರ್‌ಆರ್‌ಗೆ ಹ್ಯಾಟಿಕ್ ಜಯದ ನಿರೀಕ್ಷೆ: ಆರಂಭಿಕ 2 ಪಂದ್ಯಗಳಲ್ಲಿ ಲಖನೌ ಹಾಗೂ ಡೆಲ್ಲಿ ಎದುರು ಸುಲಭ ಗೆಲುವು ಒಲಿಸಿಕೊಂಡಿರುವ ರಾಜಸ್ಥಾನ ಭರ್ಜರಿ ಾರ್ಮ್‌ನಲ್ಲಿದೆ. ಎರಡೂ ಪಂದ್ಯಗಳಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ರಾಜಸ್ಥಾನ ಮೊತ್ತವನ್ನು ರಕ್ಷಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ. ಬಟ್ಲರ್, ಜೈಸ್ವಾಲ್ ಮಿಂಚಲು ವಿಲರಾಗಿರುವ ನಡುವೆಯೂ ರಾಜಸ್ಥಾನ ಆಲ್ರೌಂಡ್ ನಿರ್ವಹಣೆಯೊಂದಿಗೆ 4 ಅಂಕ ಕಲೆಹಾಕಿದೆ. ನಾಯಕ ಸಂಜು ಸ್ಯಾಮ್ಸನ್, ರಿಯಾನ್ ಪರಾಗ್ ಾರ್ಮ್‌ನಲ್ಲಿರುವುದು ತಂಡಕ್ಕೆ ಪ್ಲಸ್ ಪಾಯಿಂಟ್.

ಬೌಲಿಂಗ್ ವಿಭಾಗಕ್ಕೆ ಚಾಲೆಂಜ್: ಸನ್‌ರೈಸರ್ಸ್‌ಗೆ ದಾಖಲೆಯ ರನ್ ಬಿಟ್ಟುಕೊಟ್ಟ ಬಳಿಕ ರಾಜಸ್ಥಾನ ಬ್ಯಾಟಿಂಗ್ ವಿಭಾಗವೂ ಮುಂಬೈ ಬೌಲರ್‌ಗಳಿಗೆ ಸವಾಲೆನಿಸಿದೆ. ವೇಗಿ ಜಸ್‌ಪ್ರೀತ್ ಬುಮ್ರಾ ಹೊರತುಪಡಿಸಿ ಯುವ ವೇಗಿಗಳು ದುಬಾರಿ ಎನಿಸಿದ್ದಾರೆ. 277 ಬೃಹತ್ ಚೇಸಿಂಗ್‌ನಲ್ಲಿ ಕೊನೆಯವರೆಗೂ ಹೋರಾಟ ನಡೆಸುವ ಮೂಲಕ ಬ್ಯಾಟಿಂಗ್ ಲೈನ್ ಆ್ನ ಶಕ್ತಿ ಪ್ರದರ್ಶಿಸಿದೆ ಮುಂಬೈ. ರೋಹಿತ್ ಶರ್ಮ, ತಿಲಕ್ ವರ್ಮ, ಟಿಮ ಡೇವಿಡ್ ಉತ್ತಮ ಲಯದಲ್ಲಿರುವುದು ಪಾಂಡ್ಯಗೆ ಶಕ್ತಿ ತುಂಬಿದೆ

ಮುಖಾಮುಖಿ: 28

ಮುಂಬೈ: 15

ರಾಜಸ್ಥಾನ: 12

ರದ್ದು: 1

ಆರಂಭ: ರಾತ್ರಿ 7.30

ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್, ಜಿಯೋ ಸಿನಿಮಾ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net