ಏಕದಿನ ವಿಶ್ವಕಪ್‌ಗೆ ಬಲಿಷ್ಠ ತಂಡ ಪ್ರಕಟಿಸಿದ ದಕ್ಷಿಣ ಆಫ್ರಿಕಾ: ಆರ್‌ಸಿಬಿ ತಂಡದ ಬೌಲರ್‌ಗಿಲ್ಲ ಸ್ಥಾನ

New-Project-23
Published on

ಜೋಹಾನ್ಸ್‌ಬರ್ಗ್: ಮುಂಬರುವ ಏಕದಿನ ವಿಶ್ವಕಪ್ ಟೂರ್ನಿಗೆ ದಕ್ಷಿಣ ಆಫ್ರಿಕಾ ತಂಡ 15 ಆಟಗಾರರನ್ನು ಮಂಗಳವಾರ ಅಂತಿಮಗೊಳಿಸಲಾಗಿದ್ದು, ಆರಂಭಿಕ ಬ್ಯಾಟರ್ ಟೆಂಬಾ ಬವುಮಾ ತಂಡವನ್ನು ಮುನ್ನಡೆಸಲಿದ್ದಾರೆ. ಯುವ ಬ್ಯಾಟರ್‌ಗಳಾದ ಟ್ರಿಸ್ಟನ್ ಸ್ಟಬ್ಸ್, ಡೆವಿಲ್ಡ್ ಬ್ರೇವಿಸ್ ಹಾಗೂ ಎಡಗೈ ವೇಗಿ ವೇಯ್ನ ಪಾರ್ನೆಲ್ ಅವರನ್ನು ತಂಡದಿಂದ ಕೈ ಬಿಡಲಾಗಿದೆ. ಮೂವರು ಆಟಗಾರರು ಆಸ್ಟ್ರೇಲಿಯಾ ವಿರುದ್ಧ 5 ಪಂದ್ಯಗಳ ಏಕದಿನ ಸರಣಿಗೆ ಆಯ್ಕೆಯಾಗಿದ್ದರು.

ತಂಡದಲ್ಲಿ ಸ್ಥಾನ ಪಡೆದಿರುವ 15 ಆಟಗಾರರಲ್ಲಿ ನಾಯಕ ಟೆಂಬಾ ಬವುಮಾ ಸೇರಿ ಒಟ್ಟು 8 ಆಟಗಾರರಿಗೆ ಮೊದಲ ವಿಶ್ವಕಪ್ ಟೂರ್ನಿ ಎನಿಸಿದೆ. 30 ವರ್ಷದ, ವಿಕೆಟ್ ಕೀಪರ್- ಬ್ಯಾಟರ್ ಕ್ವಿಂಟನ್ ಡಿ ಕಾಕ್ ಐಸಿಸಿ ಟೂರ್ನಿಯ ಬಳಿಕ ಏಕದಿನ ಮಾದರಿ ಕ್ರಿಕೆಟ್‌ಗೆ ನಿವೃತ್ತಿ ಪ್ರಕಟಿಸಲಿದ್ದು, ಟಿ20 ಕ್ರಿಕೆಟ್ ಹಾಗೂ ್ರಾಂಚೈಸಿ ಲೀಗ್‌ಗಳಲ್ಲಿ ಹೆಚ್ಚಿನ ಗಮನ ಹರಿಸಲಿದ್ದಾರೆ ಎನ್ನಲಾಗಿದೆ. ಐಪಿಎಲ್-16 ಆವೃತ್ತಿಯಲ್ಲಿ ಆರ್‌ಸಿಬಿ ತಂಡದ ಪರ ಉತ್ತಮ ಪ್ರದರ್ಶನ ನೀಡಿದ್ದ ವೇಯ್ನ ಪಾರ್ನೆರ್ಲ್ ಗಾಯದ ಸಮಸ್ಯೆಯಿಂದ ಬಳಲುತ್ತಿದ್ದಾರೆ ಎನ್ನಲಾಗಿದೆ.

ತಂಡ: ಟೆಂಬಾ ಬವುಮಾ (ನಾಯಕ), ಗೆರಾಲ್ಡ್ ಕೊಯೆಟ್ಜಿ, ಕ್ವಿಂಟನ್ ಡಿ ಕಾಕ್ (ವಿ.ಕೀ), ರೀಜಾ ಹೆಂಡ್ರಿಕ್ಸ್, ಹೆನ್ರಿಚ್ ಕ್ಲಾಸೆನ್ (ವಿ.ಕೀ), ಡೇವಿಡ್ ಮಿಲ್ಲರ್, ಸಿಸಂಡ ಮಂಗಲಾ, ಕೇಶವ್ ಮಹಾರಾಜ್, ಏಡೆನ್ ಮಾರ್ಕ್ರಮ್, ಲುಂಗಿ ಎನ್‌ಗಿಡಿ, ಅನ್ರಿಚ್ ನೋಕಿ ಯಾ, ಕಗಿಸೋ ರಬಾಡ, ತಬ್ರೆಜ್ ಶಮ್ಸಿ, ರಾಸ್ಸಿ ವ್ಯಾನ್ ಡೆರ್ ಡುಸ್ಸೆನ್,

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net