ಹಾಕಿ ಇಂಡಿಯಾದಿಂದ ವರ್ಷದ ಗೌರವ ಪ್ರದಾನ: ಭಾರತ ತಂಡದ ಸ್ಟಾರ್ ಮಿಡ್ ಫೀಲ್ಡರ್ ಹಾರ್ದಿಕ್‌ಗೆ ಪ್ರಶಸ್ತಿ

New-Project-1-13
Published on

ನವದೆಹಲಿ: ಭಾರತ ಹಾಕಿ ತಂಡದ ಸ್ಟಾರ್ ಮಿಡ್ ಫೀಲ್ಡರ್ ಹಾರ್ದಿಕ್ ಸಿಂಗ್ ಹಾಗೂ ಸಲೀಮಾ ಟೆಟೆ, ಆರನೇ ಆವೃತ್ತಿಯ ಹಾಕಿ ಇಂಡಿಯಾ ವಾರ್ಷಿಕ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಕ್ರಮವಾಗಿ ಪುರುಷ ಹಾಗೂ ಮಹಿಳಾ ವಿಭಾಗದ ವರ್ಷದ ಆಟಗಾರ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ಭಾನುವಾರ ನಡೆದ ಪ್ರಶಸ್ತಿ ವಿತರಣಾ ಕಾರ್ಯಕ್ರಮದಲ್ಲಿ ಇಬ್ಬರೂ ಆಟಗಾರರಿಗೆ ದಿಗ್ಗಜ ಬಲ್ಬೀರ್ ಸಿಂಗ್ ಹೆಸರಿನಲ್ಲಿ ನೀಡಲಾಗುವ ಲಕದೊಂದಿಗೆ ತಲಾ ₹ 25 ಲಕ್ಷ ಬಹುಮಾನ ಮೊತ್ತ ನೀಡಲಾಯಿತು. ಜತೆಗೆ ಪುರುಷರ ತಂಡದ ಉಪನಾಯಕನಾಗಿರುವ ಹಾರ್ದಿಕ್ ಸಿಂಗ್ ಅಜಿತ್ ಪಾಲ್ ಸಿಂಗ್ ಪ್ರಶಸ್ತಿ ಹಾಗೂ ₹ 5 ಲಕ್ಷ ಪ್ರಶಸ್ತಿ ಮೊತ್ತ ತನ್ನದಾಗಿಸಿಕೊಂಡರು. ನಾಯಕ ಹರ್ಮಾನ್‌ಪ್ರೀತ್ ಸಿಂಗ್ ಅತ್ಯುತ್ತಮ ಡಿೆಂಡರ್‌ಗೆ ನೀಡಲಾಗುವ ಪರಗತ್ ಸಿಂಗ್ ಹಾಗೂ ಗೋಲು ಕೀಪರ್ ಪಿಆರ್ ಶ್ರೀಜೇಶ್ ಬಲ್ಜೀತ್ ಸಿಂಗ್ ಪ್ರಶಸ್ತಿ ಪಡೆದರು.

ಜೂನಿಯರ್ ಹಾಕಿ ವಿಶ್ವಕಪ್ ಗೆದ್ದ ಭಾರತ ತಂಡದ ಆಟಗಾರರನ್ನು ಸನ್ಮಾನಿಸಿ, ತಲಾ ₹ 5 ಲಕ್ಷ ಬಹುಮಾನ ಮೊತ್ತ ನೀಡಲಾಯಿತು. ಏಷ್ಯನ್ ಚಾಂಪಿಯನ್ಸ್ ಟ್ರೋಫಿ ಚಿನ್ನದ ಪದಕ ವಿಜೇತ ಪುರುಷ ಹಾಗೂ ಮಹಿಳಾ ತಂಡದ ಎಲ್ಲ ಆಟಗಾರರಿಗೆ ತಲಾ ₹ 3 ಲಕ್ಷ, ತರಬೇತಿ ಸಿಬ್ಬಂದಿಗೆ 1.5 ಲಕ್ಷ ರ.ವಿತರಿಸಲಾಯಿತು. ಏಷ್ಯನ್ ಗೇಮ್ಸ್‌ನಲ್ಲಿ ಚಿನ್ನ ಜಯಿಸಿದ್ದ ಪುರುಷರ ತಂಡ, ಕಂಚಿನ ಪದಕ ವಿಜೇತ ಮಹಿಳಾ ತಂಡಗಳಿಗೂ ಬಹುಮಾನ ಮೊತ್ತ ವಿತರಿಸಲಾಯಿತು.

ಇತರ ಪ್ರಶಸ್ತಿಗಳು: ಧನರಾಜ್ ಪಿಳೈ: ಅಭಿಷೇಕ್, ಉದಯೋನ್ಮುಖ ಆಟಗಾರ: ಆರೈಜೀತ್ ಸಿಂಗ್ ಹುಂಡಲ್ (ಪುರುಷ), ದೀಪಿಕಾ ಸೋರೆಂಗ್ (ಮಹಿಳಾ), ಮೇಜರ್ ಧ್ಯಾನ್‌ಚಂದ್ ಜೀವಮಾನ ಸಾಧನೆ: ಅಶೋಕ್ ಕುಮಾರ್.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net