ಡಬ್ಲ್ಯುಎ ಪಾರಂಪರಿಕ ಸಂಗ್ರಹಾಲಯದಲ್ಲಿ ನೀರಜ್ ಟೀ ಶರ್ಟ್!: 3ಡಿ ಮಾದರಿಯಲ್ಲಿ ಪ್ರದರ್ಶನ

New Project (2)
Published on

ಮೊನಾಕ್ಕೊ: ಅವಳಿ ಒಲಿಂಪಿಕ್ಸ್ ಪದಕ ವಿಜೇತ ಜಾವೆಲಿನ್ ಥ್ರೋ ಪಟು ನೀರಜ್ ಚೋಪ್ರಾ ನೀಡಿದ ಟೀ ಶರ್ಟ್ (ಜೆರ್ಸಿ) ಅನ್ನು ಸ್ಪರ್ಧಾತ್ಮಕ ಕಲಾಕೃತಿಗಳ ವಿಶ್ವ ಅಥ್ಲೆಟಿಕ್ಸ್ ಪಾರಂಪರಿಕ ಸಂಗ್ರಹಾಲಯದಲ್ಲಿ ಪ್ರದರ್ಶನಕ್ಕಿರಿಸಲಾಗಿದ್ದು, ಈ ವಿಶೇಷ ಗೌರವಕ್ಕೆ ಪಾತ್ರರಾದ ವಿಶ್ವದ 23 ಅಥ್ಲೀಟ್‌ಗಳಲ್ಲಿ ನೀರಜ್ ಚೋಪ್ರಾ ಒಬ್ಬರೆನಿಸಿದ್ದಾರೆ. ಒಲಿಂಪಿಕ್ಸ್‌ನ ಅಥ್ಲೆಟಿಕ್ಸ್‌ನಲ್ಲಿ ಭಾರತಕ್ಕೆ ಮೊಟ್ಟ ಮೊದಲ ಚಿನ್ನದ ಪದಕ ಗೆದ್ದುಕೊಟ್ಟ ಜಾವೆಲಿನ್ ಎಸೆತಗಾರ ನೀರಜ್ ಚೋಪ್ರಾ ಅವರ ಜೆರ್ಸಿಯನ್ನು ಪ್ರಸ್ತುತ ಮ್ಯೂಸಿಯಂ ಆಫ್ ವರ್ಲ್ಡ್ ಅಥ್ಲೆಟಿಕ್ಸ್‌ನ (ಎಂಒಡಬ್ಲುೃಎ) ಸಾಮಾಜಿಕ ಜಾಲತಾಣದಲ್ಲಿ 3ಡಿ ಮಾದರಿಯಲ್ಲಿ ಪ್ರದರ್ಶಿಸಲಾಗಿದೆ.

2021ರ ಟೋಕಿಯೋ ಗೇಮ್‌ನಲ್ಲಿ ಚಿನ್ನದ ಪದಕ ಜಯಿಸಿದ್ದ ನೀರಜ್, ಹಾಲಿ ವರ್ಷ ಪ್ಯಾರಿಸ್ ಗೇಮ್ಸ್‌ನ ಬಳಿಕ ಧರಿಸಿದ್ದ ಟೀ ಶರ್ಟ್ ಅನ್ನು ಎಂಒಡಬ್ಲುೃಎಗೆ ಕೊಡುಗೆಯಾಗಿ ನೀಡಿದ್ದರು. ಇದನ್ನು ವಿಶ್ವ ಅಥ್ಲೆಟಿಕ್ಸ್ ಪಾರಂಪರಿಕ ಸಂಗ್ರಹಾಲಯದಲ್ಲಿ ಇಡಲಾಗಿದೆ.

ಚೋಪ್ರಾ ಜತೆಗೆ ಯೂಕ್ರೇನ್‌ನ ಹೈಜಂಪ್ ಪಟು ಯಾರೋಸ್ಲಾವಾ ಮಹುಚಿಖ್, ವರ್ಷದ ಮಹಿಳಾ ಫೀಲ್ಡ್ ಅಥ್ಲೀಟ್ ಮತ್ತು ಪ್ಯಾರಿಸ್ ಒಲಿಂಪಿಕ್ಸ್ ಪದಕ ವಿಜೇತ ಟ್ರಿಪಲ್ ಜಂಪರ್ ಥಿಯಾ ಲಾಫೊಂಡ್ ಅವರು ನೀಡಿರುವ ವಸ್ತುಗಳನ್ನು ಪಾರಂಪರಿಕ ಸಂಗ್ರಹಾಲದಲ್ಲಿ ಪ್ರದರ್ಶನಕ್ಕಿಡಲಾಗಿದೆ. ಇದರ ಜತೆಗೆ 1960ರ ಒಲಿಂಪಿಕ್ಸ್‌ನ ಪದಕ ವಿಜೇತರಾದ ವ್ರೋಮಿಯಾ ಟೈಯುಸ್ ಮತ್ತು ಬಿಲ್ಲಿ ಮಿಲ್ಸ್ ಮತ್ತು 1980ರ 100 ಮೀ ಚಾಂಪಿಯನ್ ಅಲನ್ ವೆಲ್ಸ್, 2000 ಮತ್ತು 2008ರ ಒಲಿಂಪಿಕ್ಸ್ ಹೆಪ್ಟಾಥ್ಲಾನ್ ಚಿನ್ನದ ಪದಕ ವಿಜೇತರಾದ ಡೆನಿಸ್ ಲೆವಿಸ್, ನತಾಟಿಯಾ ಡೊಬ್ರಯಾನ್‌ಸ್ಕ ತಾವೂ ಗೆದ್ದಿರುವ ಪದಕಗಳನ್ನು ದಾನವಾಗಿ ನೀಡಿದ್ದಾರೆ ಎಂದು ವಿಶ್ವ ಅಥ್ಲೆಟಿಕ್ಸ್ ಅಧ್ಯಕ್ಷ ಸೆಬಾಸ್ಟಿಯನ್ ಕೋ ಹರ್ಷ ವ್ಯಕ್ತಪಡಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net