ವಿಶ್ವ ಚೆಸ್​ ಚಾಂಪಿಯನ್​ಷಿಪ್​ಗೆ ವೇದಿಕೆ ಸಜ್ಜು; ಚೀನಾದ ಡಿಂಗ್​ ಲಿರೆನ್​ಗೆ ಭಾರತದ ಗುಕೇಶ್​ ಸವಾಲು

web chess
Published on

ಸಿಂಗಾಪುರ: ಮುಂದಿನ ವಿಶ್ವ ಚದುರಂಗ ಚಾಂಪಿಯನ್​ ಆಟಗಾರನನ್ನು ನಿರ್ಧರಿಸುವ ವಿಶ್ವ ಚೆಸ್​ ಚಾಂಪಿಯನ್​ಷಿಪ್​ ಕಾದಾಟಕ್ಕೆ ಶನಿವಾರ ಸಿಂಗಾಪುರದ ರೆಸಾರ್ಟ್ಸ್​ ವರ್ಲ್ಡ್​ ಸೆಂಟೋಸಾದಲ್ಲಿ ಸಾಂಕೇತಿಕ ಚಾಲನೆ ನೀಡಲಾಗಿದೆ. ಹಾಲಿ ಚಾಂಪಿಯನ್​ ಚೀನಾದ ಡಿಂಗ್​ ಲಿರೆನ್​ ಮತ್ತು ಕ್ಯಾಂಡಿಡೇಟ್ಸ್​ ಟೂರ್ನಿಯ ವಿಜೇತ ಭಾರತದ ದೊಮ್ಮರಾಜು ಗುಕೇಶ್​ ನಡುವೆ ಸೋಮವಾರದಿಂದ ಡಿಸೆಂಬರ್​ 13ರವರೆಗೆ 14 ಕ್ಲಾಸಿಕ್​ ಚೆಸ್​ ಪಂದ್ಯಗಳು ನಡೆಯಲಿವೆ.

ಒಟ್ಟಾರೆ 21 ಕೋಟಿ ರೂ. ಬಹುಮಾನ ಮೊತ್ತವನ್ನು ವಿಜೇತರಿಗೆ ಶೇ. 60, ರನ್ನರ್​ಅಪ್​ಗೆ ಶೇ.40ರ ಅನುಪಾತದಲ್ಲಿ ಹಂಚಿಕೆ ಮಾಡಲಾಗುತ್ತದೆ. ಬೆಸ್ಟ್​ ಆ್​ 14 ಮಾದರಿಯ ಕಾದಾಟದಲ್ಲಿ ಸಮಬಲವಾದರೆ, ಡಿಸೆಂಬರ್​ 13ರಂದು ಟೈಬ್ರೇಕ್​ ಕಾದಾಟ ನಡೆಯಲಿದೆ. ಇಲ್ಲದಿದ್ದರೆ ಮೊದಲು 7.5 ಅಂಕ ಗಳಿಸಿದ ಆಟಗಾರ ಮುಂದಿನ ವಿಶ್ವ ಚಾಂಪಿಯನ್​ ಎಂದು ನಿರ್ಧರಿಸಲಾಗುತ್ತದೆ. ಭಾರತೀಯ ಕಾಲಮಾನ ಮಧ್ಯಾಹ್ನ 2.30ರಿಂದ ಎಲ್ಲ ಪಂದ್ಯಗಳು ನಡೆಯಲಿವೆ.

32 ವರ್ಷದ ಲಿರೆನ್​ ಪ್ರಸಕ್ತ ಕಳಪೆ ಫಾರ್ಮ್​ನಲ್ಲಿರುವುದರಿಂದ ತಮಿಳುನಾಡಿನ 18 ವರ್ಷದ ಚದುರಂಗ ಚತುರ ಡಿ. ಗುಕೇಶ್​ ಅವರೇ ಈ ಮುಖಾಮುಖಿಯ ಫೇವರಿಟ್​ ಎನಿಸಿದ್ದಾರೆ. ಗುಕೇಶ್​ ಗೆದ್ದರೆ ವಿಶ್ವನಾಥನ್​ ಆನಂದ್​ ಬಳಿಕ ವಿಶ್ವ ಚೆಸ್​ ಚಾಂಪಿಯನ್​ ಪಟ್ಟವೇರಿದ 2ನೇ ಭಾರತೀಯ ಎನಿಸಲಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net