

ಇಂದೋರ್: ಭಾರತ- ಶ್ರೀಲಂಕಾ ತಂಡಗಳ ಪಂದ್ಯದ ವೇಳೆ ಇಬ್ಬನಿಯ ಸಮಸ್ಯೆಯನ್ನು ತಡೆಯುವ ಸಲುವಾಗಿ ಮಧ್ಯಪ್ರದೇಶ ಕ್ರಿಕೆಟ್ ಸಂಸ್ಥೆ (ಎಂಪಿಸಿಎ) ಹೋಳ್ಕರ್ ಮೈದಾನಕ್ಕೆ ವಿಶೇಷ ರಾಸಾಯನಿಕವನ್ನು ಬಳಕೆ ಮಾಡುತ್ತಿದೆ.
‘ಕಳೆದ ಮೂರು ದಿನಗಳಿಂದ ವಿಶೇಷ ರಾಸಾಯನಿಕವನ್ನು ಮೈದಾನದ ಹೊರ ಆವರಣದಲ್ಲಿ ಸಿಂಪಡಣೆ ಮಾಡಲಾಗುತ್ತಿದೆ’ ಎಂದು ಮುಖ್ಯ ಕ್ಯುರೇಟರ್ ಸಮಂದರ್ ಸಿಂಗ್ ಚೌಹಾಣ್ ಹೇಳಿದ್ದಾರೆ.
ಅದರೊಂದಿಗೆ ಕಳೆದ ಮೂರು ದಿನಗಳಿಂದಲೂ ಹೊರ ಆವರಣಕ್ಕೆ ನೀರುಣಿಸಲಾಗಿಲ್ಲ ಎಂದಿದ್ದಾರೆ. ಇದರಿಂದಾಗಿ ಪಂದ್ಯದ ವೇಳೆ ಬೌಂಡರಿ, ಸಿಕ್ಸರ್ಗಳು ಹೆಚ್ಚಾಗಿ ಕಂಡುಬರುವ ಸಾಧ್ಯತೆ ಇದೆ.