

ಸೆಂಚುರಿಯನ್: ಆರಂಭಿಕರಾದ ಡೀನ್ ಎಲ್ಗರ್ (95ರನ್, 130 ಎಸೆತ, 16 ಬೌಂಡರಿ) ಹಾಗೂ ಏಡನ್ ಮಾರ್ಕ್ರಮ್ (68 ರನ್, 94 ಎಸೆತ, 14 ಬೌಂಡರಿ) ಜೋಡಿಯ ಪ್ರತಿಹೋರಾಟದ ನೆರವಿನಿಂದ ಆತಿಥೇಯ ದಕ್ಷಿಣ ಆಫ್ರಿಕಾ ತಂಡ ಮೊದಲ ಟೆಸ್ಟ್ ಪಂದ್ಯದಲ್ಲಿ ಪ್ರವಾಸಿ ಶ್ರೀಲಂಕಾ ತಂಡದ ಎದುರು ಇನಿಂಗ್ಸ್ ಮುನ್ನಡೆಯತ್ತ ಸಾಗಿದೆ. ಸೂಪರ್‌ಸ್ಪೋರ್ಟ್ ಪಾರ್ಕ್ ಮೈದಾನದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ 6 ವಿಕೆಟ್‌ಗೆ 340 ರನ್‌ಗಳಿಂದ 2ನೇ ದಿನದಾಟ ಆರಂಭಿಸಿದ ಶ್ರೀಲಂಕಾ ತಂಡ 396 ರನ್ ಗಳಿಗೆ ಸರ್ವಪತನ ಕಂಡಿತು. ಬಳಿಕ ದಕ್ಷಿಣ ಆಫ್ರಿಕಾ ತಂಡ ದಿನದಂತ್ಯಕ್ಕೆ 4 ವಿಕೆಟ್‌ಗೆ 317 ರನ್‌ಗಳಿಸಿದ್ದು, ಇನಿಂಗ್ಸ್ ಮುನ್ನಡೆ ಸಾಧಿಸಲು ಇನ್ನೂ 79 ರನ್ ಪೇರಿಸಬೇಕಿದೆ. ಫಾಫ್ ಡು ಪ್ಲೆಸಿಸ್ (55*ರನ್, 81 ಎಸೆತ, 9 ಬೌಂಡರಿ) ಹಾಗೂ ತೆಂಬಾ ಬವುಮಾ (41*ರನ್, 79 ಎಸೆತ, 4 ಬೌಂಡರಿ) ಮುರಿಯದ 5ನೇ ವಿಕೆಟ್‌ಗೆ 97 ರನ್ ಕಲೆಹಾಕಿದ್ದಾರೆ.
ಶ್ರೀಲಂಕಾ: 396 (ಲುಥೋ ಸಿಪ್ಲಾಲಾ 76ಕ್ಕೆ 4, ವಿಯಾನ್ ಮುಲ್ಡೆರ್ 69ಕ್ಕೆ 3), ದಕ್ಷಿಣ ಆಫ್ರಿಕಾ: 72 ಓವರ್‌ಗಳಲ್ಲಿ 4 ವಿಕೆಟ್‌ಗೆ 317 (ಡೀನ್ ಎಲ್ಗರ್ 95, ಮಾರ್ಕ್ರಮ್ 68, ಪ್ಲೆಸಿಸ್ 55*, ತೆಂಬಾ ಬವುಮಾ 41*, ವಿಶ್ವ ಫೆರ್ನಾಂಡೊ 59ಕ್ಕೆ 1, ದಸುನ್ ಶನಕ 56ಕ್ಕೆ 1, ಲಹಿರು ಕುಮಾರ 73ಕ್ಕೆ 1).