ವಿಶ್ವಕಪ್ ಅರ್ಹತೆ ಪಡೆದ ಲಂಕಾ: ಜಿಂಬಾಬ್ವೆ ಎದುರು 9 ವಿಕೆಟ್ ಜಯ

lankakk
Published on

ಹರಾರೆ: ಆರಂಭಿಕ ಪಥುಮ್ ನಿಸ್ಸಂಕಾ (101* ರನ್, 102 ಎಸೆತ,14 ಬೌಂಡರಿ) ಭರ್ಜರಿ ಶತಕ ಹಾಗೂ ಸ್ಪಿನ್ನರ್ ಮಹೀಶ್ ತೀಕ್ಷಣ (25ಕ್ಕೆ 4) ಮಾರಕ ಬೌಲಿಂಗ್ ದಾಳಿಯ ನೆರವಿನಿಂದ ಶ್ರೀಲಂಕಾ ತಂಡ ಏಕದಿನ ವಿಶ್ವಕಪ್ ಅರ್ಹತಾ ಟೂರ್ನಿ ಸೂಪರ್ ಸಿಕ್ಸ್ ಪಂದ್ಯದಲ್ಲಿ ಆತಿಥೇಯ ಜಿಂಬಾಬ್ವೆ ತಂಡವನ್ನು 9 ವಿಕೆಟ್‌ಗಳಿಂದ ಮಣಿಸಿದೆ. ಇದರೊಂದಿಗೆ ಭಾರತದಲ್ಲಿ ನಡೆಯಲಿರುವ ವಿಶ್ವಕಪ್ ಟೂರ್ನಿಗೆ ಅರ್ಹತಾ ಟೂರ್ನಿಯ ಎರಡನೇ ತಂಡವಾಗಿ ಅರ್ಹತೆ ಪಡೆದುಕೊಂಡಿದೆ. ಈ ಮೂಲಕ ಟೂರ್ನಿಯ 9 ತಂಡಗಳು ಖಚಿತಗೊಂಡಿದ್ದು, ಇನ್ನೊಂದು ಸ್ಥಾನಕ್ಕೆ ಜಿಂಬಾಬ್ವೆ, ಸ್ಕಾಟ್ಲೆಂಡ್ ಹಾಗೂ ನೆದರ್ಲೆಂಡ್ ನಡುವೆ ಪೈಪೋಟಿ ಏರ್ಪಟ್ಟಿದೆ.

ಭಾನುವಾರ ನಡೆದ ಪಂದ್ಯದಲ್ಲಿ ಟಾಸ್ ಸೋತು ಬ್ಯಾಟಿಂಗ್ ಇಳಿದ ಜಿಂಬಾಬ್ವೆ ಸೀನ್ ವಿಲಿಯಮ್ಸ್ (56) ಅರ್ಧಶತಕದ ನಡುವೆಯೂ 32.2 ಓವರ್‌ಗಳಲ್ಲಿ 165 ರನ್‌ಗಳಿಗೆ ಸರ್ವಪತನ ಕಂಡಿತು. ಪ್ರತಿಯಾಗಿ ಶ್ರೀಲಂಕಾ 33.1 ಓವರ್‌ಗಳಲ್ಲಿ 1 ವಿಕೆಟ್‌ಗೆ 169 ರನ್‌ಗಳಿಸಿ ಸುಲಭ ಜಯ ಕಂಡಿತು.

ಜಿಂಬಾಬ್ವೆ: 32.2 ಓವರ್‌ಗಳಲ್ಲಿ 165 (ಎರ್ವಿನ್ 14, ವಿಲಿಯಮ್ಸ್ 56, ಸಿಕಂದರ್ 31, ಬರ್ಲ್ 16, ಮಧುಶಂಕ 15ಕ್ಕೆ3, ತೀಕ್ಷಣ 25ಕ್ಕೆ4). ಶ್ರಿಲಂಕಾ: 33.1 ಓವರ್‌ಗಳಲ್ಲಿ 1 ವಿಕೆಟ್‌ಗೆ 169 (ಪಥುಮ್ 101*, ಕರುಣರತ್ನೆ 30, ಕುಸಲ್ 25*, ಎನ್‌ಗರವ 35ಕ್ಕೆ1).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net