

ಹೈದರಾಬಾದ್: ಸನ್‌ರೈಸರ್ಸ್ ಹೈದರಾಬಾದ್ (ಎಸ್‌ಆರ್‌ಎಚ್) ತಂಡದ ಮಾಲಕಿ ಕಾವ್ಯಾ ಮಾರನ್ ಅವರನ್ನು ಕ್ರೀಡಾಭಿಮಾನಿಗಳಿಗೆ ವಿಶೇಷವಾಗಿ ಪರಿಚಯಿಸುವ ಅಗತ್ಯವಿಲ್ಲ. ಐಪಿಎಲ್ ನೋಡುವವರಿಗೆ ಆಕೆ ಚಿರಪರಿಚಿತೆ. ಕ್ರಿಕೆಟ್ ನೋಡದವರು ಕೂಡ ಸಾಮಾಜಿಕ ಜಾಲತಾಣಗಳಲ್ಲಿ ಕಾವ್ಯಾ ಮಾರನ್ ಸೌಂದರ್ಯಕ್ಕೆ ಫಿದಾ ಆಗುತ್ತಾರೆ.
ಇದುವರೆಗೂ ಸ್ಟಾರ್ ನಟ-ನಟಿಯರನ್ನೂ ಕಾಡಿದ್ದ ಡೀಪ್ ಫೇಕ್ ವಿಡಿಯೋ ಇದೀಗ ಕಾವ್ಯಾ ಮಾರನ್ ಅವರನ್ನೂ ಕಾಡುತ್ತಿದೆ. ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣಾ ಈಗಾಗಲೇ ಈ ಡೀಪ್ ಫೇಕ್ನಿಂದ ಸಂಕಷ್ಟಕ್ಕೆ ಸಿಲುಕಿದ್ದು ಎಲ್ಲರಿಗೂ ಗೊತ್ತೇ ಇದೆ. ಇದರ ವಿರುದ್ಧ ಪ್ರಕರಣ ಸಹ ದಾಖಲಿಸಿದ್ದರು. ಆರೋಪಿಗಳ ಬಂಧನವೂ ಆಗಿದೆ. ರಶ್ಮಿಕಾ ಅವರ ಡೀಪ್ ಫೇಕ್ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದಾಗ, ಅನೇಕ ಸೆಲೆಬ್ರಿಟಿಗಳು ರಶ್ಮಿಕಾ ಅವರ ಬೆಂಬಲಕ್ಕೆ ಬಂದರು. ಇಂತಹ ವಿಡಿಯೋ ಮಾಡುವವರಿಗೆ ಕಠಿಣ ಶಿಕ್ಷೆ ನೀಡಬೇಕು ಎಂದು ಆಗ್ರಹಿಸಿದರು. ಅಪರಾಧಿಗಳನ್ನು ಹಿಡಿಯಲು ಪೊಲೀಸರು ಕ್ರಮ ಕೈಗೊಂಡರು. ಪೊಲೀಸರ ಕಟ್ಟುನಿಟ್ಟಿನ ಕ್ರಮ ಮತ್ತು ಕೇಂದ್ರ ಸರ್ಕಾರ ಖಡಕ್ ಎಚ್ಚರಿಕೆ ನೀಡಿದ್ದರೂ ಈ ಡೀಪ್ ಫೇಕ್ ದಂಧೆ ಮಾತ್ರ ಇನ್ನೂ ನಿಂತಿಲ್ಲ.
ಕಾವ್ಯಾ ಅವರ ಮುಖವನ್ನು ಎಡಿಟ್ ಮಾಡಿರುವ ಡೀಪ್ ಫೇಕ್ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಇಡೀ ಭಾರತವೇ ಐಪಿಎಲ್ ಫೀವರ್ನಲ್ಲಿ ಮುಳುಗಿದೆ. ಕಾವ್ಯಾ ಅವರು ಎಸ್‌ಆರ್‌ಎಚ್ ಆಡುವ ಪ್ರತಿಯೊಂದು ಪಂದ್ಯಕ್ಕೂ ಹಾಜರಾಗುವುದಲ್ಲದೆ, ತಮ್ಮ ಹಾವಭಾವದಿಂದಲೇ ಸಾಮಾಜಿಕ ಜಾಲತಾಣಗಳಲ್ಲಿ ಟ್ರೆಂಡಿಂಗ್ ಆಗುತ್ತಿರುವುದು ನಿಮಗೆಲ್ಲರಿಗೂ ಗೊತ್ತೇ ಇದೆ.
ಈ ಐಪಿಎಲ್ ಸೀಸಸ್ನಲ್ಲಿ ಎಸ್‌ಆರ್‌ಎಚ್ ತಂಡ ಕೂಡ ನಿರೀಕ್ಷೆಗಿಂತ ಉತ್ತಮ ಪ್ರದರ್ಶನ ನೀಡುತ್ತಿರುವುದರಿಂದ ಈ ಡೀಪ್ ಫೇಕ್ ವಿಡಿಯೋ ಹೆಚ್ಚಿನ ಗಮನ ಸೆಳೆದಿದ್ದು, ಕಾವ್ಯ ಮಾರನ್ ಕಣ್ಣಿಗೂ ಬಿದ್ದಿದೆ. ಈ ಹಿಂದೆ ಎಸ್‌ಆರ್‌ಎಚ್ ತಂಡದ ಆಟಗಾರ ಐಡೆನ್ ಮಾರ್ಕ್ರಾಮ್ ಜತೆ ಕಾವ್ಯಾ ಲಿಪ್ಲಾಕ್ ಮಾಡುತ್ತಿರುವ ಫೋಟೋವನ್ನು ಎಡಿಟ್ ಮಾಡಲಾಗಿತ್ತು. ಈಗ ಕೆಲ ಕಿಡಿಗೇಡಿಗಳು ಕಾವ್ಯಾ ಮಾರನ್ ಅವರ ದೇಹವನ್ನು ಪೋರ್ನ್ ಸ್ಟಾರ್ ದೇಹಕ್ಕೆ ಮಾರ್ಫಿಂಗ್ ಮಾಡಿದ್ದಾರೆ ಎನ್ನಲಾಗಿದೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
ಅಂದಹಾಗೆ ಕಾವ್ಯಾ ಮಾರನ್ ಅವರು ಎಸ್‌ಆರ್‌ಎಚ್ ಆಡುವ ಪ್ರತಿಯೊಂದು ಪಂದ್ಯಕ್ಕೂ ಹಾಜರಾಗುವ ಮೂಲಕ ತಂಡವನ್ನು ಯಾವ ರೀತಿಯಲ್ಲಿ ಬೆಂಬಲಿಸುತ್ತಾರೆ ಎಂಬುದು ಎಲ್ಲರಿಗೂ ತಿಳಿದಿದೆ. ಪಂದ್ಯದ ಪರಿಸ್ಥಿತಿಗೆ ಅನುಗುಣವಾಗಿ ಕಾವ್ಯಾ ಮಾರನ್ ಅವರ ಅಭಿವ್ಯಕ್ತಿಗಳು ಬದಲಾಗುತ್ತವೆ. ಸಂಪೂರ್ಣವಾಗಿ ಆಟದಲ್ಲಿ ಮುಳುಗುವ ಕಾವ್ಯಾ, ತಮ್ಮ ಎಕ್ಸ್ಪ್ರೆಶನ್ಗಳಿಗೆ ಪ್ರತ್ಯೇಕ ಅಭಿಮಾನಿ ಬಳಗವನ್ನೇ ಸಂಪಾದಿಸಿದ್ದಾರೆ. ಇದೇ ಎಕ್ಸ್ಪ್ರೆಶನ್ಸ್ ಆಕೆಗೆ ಜನಪ್ರಿಯತೆಯನ್ನು ತಂದುಕೊಟಿದ್ದೆ. ಆದರೆ, ಇದೀಗ ಅದೇ ಆಕೆಗೆ ಶಾಪವಾಗಿದೆ. ಸಾಮಾಜಿಕ ಜಾಲತಾಣದಲ್ಲಿ ಕಾವ್ಯಾ ಅವರಿಗೆ ಇರುವ ಕ್ರೇಜ್ ಅನ್ನು ಬಂಡವಾಳ ಮಾಡಿಕೊಂಡಿರುವ ಪುಂಡ ಪೋಕರಿಗಳು ಡೀಪ್ ಫೇಕ್ ವಿಡಿಯೋಗಳನ್ನು ಸೃಷ್ಟಿ ಮಾಡಿ ಹರಿಬಿಡುತ್ತಿದ್ದಾರೆ. (ಏಜೆನ್ಸೀಸ್)