

ನವದೆಹಲಿ: ಕರೊನಾ ವೈರಸ್ ಭೀತಿಯಿಂದಾಗಿ ಜಾಗತಿಕ ಕ್ರೀಡಾ ಚಟುವಟಿಕೆಗಳೇ ಸಂಪೂರ್ಣ ಅಸ್ತವ್ಯಸ್ಥಗೊಂಡಿವೆ. ಎಲ್ಲವೂ ಅಂದುಕೊಂಡಂತೆ ಆಗಿದ್ದರೆ ಈ ವೇಳೆಗೆ ಜಪಾನ್ನ ಟೋಕಿಯೊ ನಗರದಲ್ಲಿ ಒಲಿಂಪಿಕ್ ಕ್ರೀಡಾಕೂಟಕ್ಕೆ ಕ್ಷಣಗಣನೆ ಆರಂಭಗೊಳ್ಳಬೇಕಿತ್ತು. ಪ್ರತಿಷ್ಠಿತ ಕ್ರೀಡಾಕೂಟ ಒಂದು ವರ್ಷ ಮುಂದಕ್ಕೆ ಹೋಗಿರುವ ಹಿನ್ನೆಲೆಯಲ್ಲಿ ಅಥ್ಲೀಟ್ಗಳ ಗಮನ ಇದೀಗ ಅರ್ಹತಾ ಸುತ್ತಿನತ್ತ ನೆಟ್ಟಿದೆ. ಆದರೆ, ಭಾರತದ ಯುವ ಓಟಗಾರ್ತಿ ಹಿಮದಾಸ್ ಮಾತ್ರ ಯಾವುದಕ್ಕೂ ತಲೆಕೆಡಿಸಿಕೊಂಡಿಲ್ಲ. ಪಟಿಯಾಲದ ಎನ್ಐಎಸ್ನಲ್ಲಿರುವ ಹಿಮಾದಾಸ್, ಸೈಕ್ಲಿಂಗ್ ಮಾಡುವುದು, ಕ್ರಿಕೆಟ್ ಆಡುವತ್ತ ಗಮನಹರಿಸಿದ್ದಾರೆ.
ಇದನ್ನೂ ಓದಿ: ನಾನು ಅಂದು ಅಮಿತಾಭ್ ಬಚ್ಚನ್ ಆಗಿದ್ದೆ!
ಕೋವಿಡ್-19ರಿಂದಾಗಿ ಸದ್ಯದಲ್ಲಿ ಯಾವುದೇ ಸ್ಪರ್ಧೆಗಳು ಇಲ್ಲ. ಇದಕ್ಕಾಗಿ ಈಗಲೇ ಕಠಿಣ ತರಬೇತಿ ಪಡೆಯುವ ಅವಶ್ಯಕತೆ ಇಲ್ಲ. ಇದಕ್ಕಾಗಿ ಸಾಧ್ಯವಾದಷ್ಟು ತರಬೇತಿ ಪಡೆಯುತ್ತಿದ್ದೇನೆ ಎನ್ನುತ್ತಾರೆ ಹಿಮಾ ದಾಸ್. ಬೆಳಗಿನ ವಾತಾವರಣ ಸಿಕ್ಕಾಪಟ್ಟೆ ಹೀಟ್ ಇರುವುದರಿಂದ ಸೈಕ್ಲಿಂಗ್ ಮಾಡುವುದು, ಕ್ರಿಕೆಟ್ ಚೆಂಡಿನಲ್ಲಿ ಬೌಲಿಂಗ್ ಮಾಡುವುದನ್ನು ರೂಡಿಸಿಕೊಂಡಿದ್ದೇನೆ. ಕೂಟದ ಬಗ್ಗೆ ಸ್ಪರ್ಧಾತ್ಮಕವಾಗಿ ಹಾಗೂ ಸಕರಾತ್ಮಕವಾಗಿ ಯೋಚಿಸುತ್ತೇನೆ. ಈಗಲೇ ಅವಸರದ ತರಬೇತಿ ಅವಶ್ಯಕತೆ ಇಲ್ಲ ಎನ್ನುತ್ತಾರೆ ಯುವ ಅಥ್ಲೀಟ್ ಹಿಮಾ ದಾಸ್. ಸಾಧ್ಯವಾದಷ್ಟು ಜೀವನವನ್ನು ಮನರಂಜನಾತ್ಮಕವಾಗಿ ಕಳೆಯಲು ಬಯಸುತ್ತೇನೆ ಎಂದು 400 ಮೀಟರ್ ಓಟದ ವಿಶ್ವ ಜೂನಿಯರ್ ಚಾಂಪಿಯನ್ ಹಿಮಾ ದಾಸ್ ಹೇಳುತ್ತಾರೆ.
ಟೋಕಿಯೊ ಒಲಿಂಪಿಕ್ಸ್ ಮುಂದೂಡಿಕೆಯಾಗಿರುವ ಹಿನ್ನೆಲೆಯಲ್ಲಿ ನವೆಂಬರ್ 30ರವರೆಗೆ ಅಂತಾರಾಷ್ಟ್ರೀಯ ಕ್ರೀಡಾಕೂಟಗಳನ್ನು ಅಮಾನತುಗೊಳಿಸಲಾಗಿದೆ. 2 ವರ್ಷಗಳ ಹಿಂದೆ ಫಿನ್ಲ್ಯಾಂಡ್ನಲ್ಲಿ ನಡೆದ ವಿಶ್ವ ಜೂನಿಯರ್ ಚಾಂಪಿಯನ್ಷಿಪ್ನ 400 ಮೀಟರ್ ಓಟದಲ್ಲಿ ಸ್ವರ್ಣ ಗೆದ್ದಿದ್ದರು. ಬಳಿಕ ಗಾಯದ ಸಮಸ್ಯೆ ಎದುರಿಸಿದ ಹಿಮಾ ದಾಸ್ 400 ಮೀಟರ್ ಬದಲಿಗೆ 200 ಮೀಟರ್ ಆಯ್ದುಕೊಂಡಿದ್ದಾರೆ. 2018ರ ಏಷ್ಯಾಡ್ ಗೇಮ್ಸ್ನಲ್ಲಿ 400 ಮೀಟರ್ ವಿಭಾಗದಲ್ಲಿ ಬೆಳ್ಳಿ ಪದಕ ಜಯಿಸಿದರೆ, ಮಹಿಳೆಯರ 4/400 ಮೀಟರ್ ರಿಲೇ ಹಾಗೂ 4/400 ಮಿಶ್ರ ರಿಲೇ ಓಟದಲ್ಲಿ ಸ್ವರ್ಣ ಗೆದ್ದ ತಂಡದ ಭಾಗವಾಗಿದ್ದರು.