

ಲಖನೌ: ಐಪಿಎಲ್ 18ನೇ ಆವೃತ್ತಿಯಲ್ಲಿ ರನ್‌ಬರ ಎದುರಿಸುತ್ತಿರುವ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮ ಹಾಗೂ ವಿಕೆಟ್ ಕೀಪರ್-ಬ್ಯಾಟರ್ ರಿಷಭ್ ಪಂತ್ ಲಯಕ್ಕೆ ಮರಳುವ ನಿರೀಕ್ಷೆಯಲ್ಲಿರುವ ನಡುವೆ, ಐದು ಬಾರಿಯ ಚಾಂಪಿಯನ್ ಮುಂಬೈ ಇಂಡಿಯನ್ಸ್ ಮತ್ತು ಆತಿಥೇಯ ಲಖನೌ ಸೂಪರ್‌ಜೈಂಟ್ಸ್ ತಂಡಗಳು ಶುಕ್ರವಾರ ಮುಖಾಮುಖಿ ಆಗಲಿವೆ. ಹಿಂದಿನ ಪಂದ್ಯದಲ್ಲಿ ಗೆಲುವಿನ ಹಾದಿಗೆ ಮರಳಿರುವ ಹಾರ್ದಿಕ್ ಪಾಂಡ್ಯ ಬಳಗ ಲಯ ಕಾಯ್ದುಕೊಳ್ಳುವ ತವಕದಲ್ಲಿದೆ.
ಹಾಲಿ ಆವೃತ್ತಿಯಲ್ಲಿ ತಲಾ 3 ಪಂದ್ಯಗಳನ್ನಾಡಿರುವ ಮುಂಬೈ ಹಾಗೂ ಲಖನೌ ತಂಡಗಳು 1 ಗೆಲುವು, 2 ಸೋಲಿನೊಂದಿಗೆ ಅಸ್ಥಿರ ನಿರ್ವಹಣೆ ತೋರಿವೆ. ಆದರೆ ಕೆಕೆಆರ್ ಎದುರು ಹಿಂದಿನ ಪಂದ್ಯದಲ್ಲಿ ಮುಂಬೈ ಗೆಲುವು ದಾಖಲಿಸಿ ಆತ್ಮವಿಶ್ವಾಸ ವೃದ್ಧಿಸಿಕೊಂಡರೆ, ಪಂಜಾಬ್ ಕಿಂಗ್ಸ್ ವಿರುದ್ಧ ಸೋಲಿನಿಂದ ಲಖನೌ ಪುಟಿದೇಳುವ ಹಂಬಲದಲ್ಲಿದೆ. ಉಭಯ ತಂಡಗಳಿಗೆ ಬೌಲರ್‌ಗಳ ನಿರ್ವಹಣೆಯೇ ನಿರ್ಣಾಯಕ ಎನಿಸಿದೆ. ಸ್ಟಾರ್ ವೇಗಿ ಜಸ್‌ಪ್ರೀತ್ ಬುಮ್ರಾ ಗೈರಿನಲ್ಲಿ ಮುಂಬೈ ಹೊಸ ಪ್ರತಿಭೆಗಳಿಗೆ ಮಣೆ ಹಾಕಿದ್ದು, ಲ ನೀಡಿದೆ. ಕೆಕೆಆರ್ ಎದುರು 4 ವಿಕೆಟ್ ಪಡೆದ ಅಶ್ವನಿ ಕುಮಾರ್ ಬೌಲಿಂಗ್ ವಿಭಾಗಕ್ಕೆ ಹೆಚ್ಚಿನ ಬಲ ನೀಡಿದ್ದು, ಲಖನೌ ಎದುರು ನೈಜ ಪರೀಕ್ಷೆ ಎದುರಾಗುವ ಸಾಧ್ಯತೆಗಳಿವೆ.
ರೋಹಿತ್ ಹೊರತುಪಡಿಸಿ ಇತರ ಬ್ಯಾಟರ್‌ಗಳು ಲಯಕ್ಕೆ ಮರಳಿರುವುದು ಮುಂಬೈ ಬಲ ಹೆಚ್ಚಿಸಿದೆ. ರ‌್ಯಾನ್ ರಿಕೆಲ್‌ಟನ್, ಸೂರ್ಯಕುಮಾರ್ ಹಾಗೂ ತಿಲಕ್ ವರ್ಮ ಉತ್ತಮ ಾರ್ಮ್‌ನಲ್ಲಿದ್ದಾರೆ. ನಾಯಕ ಹಾರ್ದಿಕ್ ಪಾಂಡ್ಯ ಬೌಲಿಂಗ್‌ನಲ್ಲಿ ಪರಿಣಾಮಕಾರಿ ಎನಿಸಿದರೂ, ಬ್ಯಾಟಿಂಗ್‌ನಲ್ಲಿ ಮಿಂಚುವಲ್ಲಿ ಹಿಂದೆ ಉಳಿದಿದ್ದಾರೆ.
ಆರೆಂಜ್ ಕ್ಯಾಪ್ (ಗರಿಷ್ಠ ರನ್ ಸ್ಕೋರರ್) ರೇಸ್‌ನಲ್ಲಿರುವ ನಿಕೋಲಸ್ ಪೂರನ್, ಲಖನೌತಂಡ ದುಬಾರಿ ₹21 ಕೋಟಿ ನೀಡಿ ರಿಟೇನ್ ಮಾಡಿಕೊಂಡಿರುವುದಕ್ಕೆ ನ್ಯಾಯ ಒದಗಿಸಿದ್ದಾರೆ. ರಿಷಭ್ ಪಂತ್‌ಗೆ ದುಬಾರಿ ಮೊತ್ತ ಹೆಚ್ಚಿನ ಒತ್ತಡ ಹೇರಿದ್ದು, ಬ್ಯಾಟಿಂಗ್ ಮರೆಸಿದೆ ಎನ್ನಲಾಗಿದೆ. ಕಳೆದ 3 ಇನಿಂಗ್ಸ್‌ಗಳಲ್ಲಿ 0, 15, 12 ರನ್ ಮಾತ್ರ ಕಲೆಹಾಕಿದ್ದಾರೆ. ಒಂದು ದೊಡ್ಡ ಇನಿಂಗ್ಸ್ ಪಂತ್ ಆತ್ಮವಿಶ್ವಾಸ ವೃದ್ಧಿಗೆ ನೆರವಾಗಲಿದೆ.
ರೋಹಿತ್ ಾರ್ಮ್ ಹಿನ್ನಡೆ!
ಜಸ್‌ಪ್ರೀತ್ ಬುಮ್ರಾ ಮುಂದಿನ ಎರಡು ವಾರ ಐಪಿಎಲ್‌ಗೆ ಲಭ್ಯವಾಗುವುದು ಅನುಮಾನ ಎಂಬ ವರದಿಗಳ ನಡುವೆ ಯಶಸ್ವಿ ನಾಯಕ ರೋಹಿತ್ ಶರ್ಮ ಕಳಪೆ ಾರ್ಮ್ ಮುಂಬೈ ಮ್ಯಾನೇಜ್‌ಮೆಂಟ್‌ಗೆ ದೊಡ್ಡ ತಲೆನೋವಾಗಿದೆ. ಅವರ ಬದಲಿಗೆ ಬೇರೆ ಆಟಗಾರರಿಗೆ ಅವಕಾಶ ನೀಡಿದರೆ ಟೀಕೆಗೆ ಗುರಿಯಾಗುವ ಭೀತಿ ಕಾಡುತ್ತಿದೆ. ಐದು ಬಾರಿ ಚಾಂಪಿಯನ್ ಪಟ್ಟಕ್ಕೇರಿಸಿದ ನಾಯಕ, ಇಂಪ್ಯಾಕ್ಟ್ ಪ್ಲೇಯರ್ ಆಗಿ ಮಾತ್ರ ಆಡುತ್ತಿರುವುದು ಅಭಿಮಾನಿಗಳಲ್ಲಿ ಬೇಸರ ಮೂಡಿಸಿದೆ. ಹಿಂದಿನ ಆವೃತ್ತಿಯಲ್ಲಿ ಮುಂಬೈನ ಗರಿಷ್ಠ ರನ್ ಸ್ಕೋರರ್ ಆಗಿದ್ದ ರೋಹಿತ್, ಈ ಬಾರಿ ಆಡಿರುವ 3 ಇನಿಂಗ್ಸ್‌ಗಳಲ್ಲಿ ಕ್ರಮವಾಗಿ 0, 8, 12 ರನ್‌ಗಳಿಗೆ ವಿಕೆಟ್ ಒಪ್ಪಿಸಿದ್ದಾರೆ. ಈಗಾಗಲೆ ಅಂತಾರಾಷ್ಟ್ರೀಯ ಚುಟುಕು ಕ್ರಿಕೆಟ್‌ನಿಂದ ನಿವೃತ್ತಿ ಹೊಂದಿರುವ 37 ವರ್ಷದ ರೋಹಿತ್ ಶರ್ಮ ಾರ್ಮ್‌ಗೆ ಮರಳಿದರೆ ಮುಂಬೈ ತಂಡವನ್ನು ಕಟ್ಟಿಹಾಕುವುದು ಲಖನೌ ಬೌಲರ್‌ಗಳಿಗೆ ಸವಾಲೆನಿಸಲಿದೆ.
ಆಕಾಶ್‌ದೀಪ್ ಸೇರ್ಪಡೆ
ಮುಂಬೈ ವಿರುದ್ಧದ ಪಂದ್ಯಕ್ಕೂ ಮುನ್ನ ಲಖನೌ ತಂಡ ಬೌಲಿಂಗ್ ವಿಭಾಗದ ಬಲ ವೃದ್ಧಿಸಿಕೊಂಡಿದೆ. ಭಾರತ ಟೆಸ್ಟ್ ತಂಡದ ವೇಗಿ ಆಕಾಶ್ ದೀಪ್ ಸಿಂಗ್ ಲಖನೌ ತಂಡ ಕೂಡಿಕೊಂಡಿದ್ದು, ಮುಂಬೈ ವಿರುದ್ಧ ಕಣಕ್ಕಿಳಿಯುವ ಸಾಧ್ಯತೆಗಳಿವೆ. ಹರಾಜಿನಲ್ಲಿ ₹8 ಕೋಟಿಗೆ ಲಖನೌ ಸೇರಿರುವ ಆಕಾಶ್ 17ನೇ ಆವೃತ್ತಿಯ ಐಪಿಎಲ್‌ನಲ್ಲಿ ಕೊನೆಯದಾಗಿ ಆರ್‌ಸಿಬಿ ಪರ ಟಿ20 ಪಂದ್ಯ ಆಡಿದ್ದರು. ಬಾರ್ಡರ್-ಗಾವಸ್ಕರ್ ಟ್ರೋಫಿ ಟೆಸ್ಟ್ ಸರಣಿ ವೇಳೆ ಆಕಾಶ್ ಬೆನ್ನು ನೋವಿನ ಸಮಸ್ಯೆಗೆ ತುತ್ತಾಗಿದ್ದರು. ಮತ್ತೋರ್ವ ವೇಗಿ ಮಯಾಂಕ್ ಯಾದವ್ ಕಣಕ್ಕಿಳಿಯುವುದು ಇನ್ನಷ್ಟು ವಿಳಂಬಗೊಂಡಿದೆ.
ಮುಖಾಮುಖಿ:6
ಮುಂಬೈ:1
ಲಖನೌ:5
ಆರಂಭ: ರಾತ್ರಿ 7.30
ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್, ಜಿಯೋಹಾಟ್‌ಸ್ಟಾರ್