ಮೇ 3ರವರೆಗೆ ಕ್ರೀಡೆಯೂ ಬಂದ್ ...! ಎಲ್ಲ ಕ್ರೀಡಾ ಶಿಬಿರಗಳನ್ನು ಅಮಾನತಿನಲ್ಲಿಡಲು ಸಾಯ್ ಸೂಚನೆ

Sports 15 April 20
Published on

ನವದೆಹಲಿ: ಪ್ರಧಾನ ಮಂತ್ರಿ ನರೇಂದ್ರ ಮೋದಿ ಎರಡನೇ ಹಂತದ ಲಾಕ್​ಡೌನ್  ಘೋಷಿಸಿದ ಬೆನ್ನಲ್ಲೇ ದೇಶದಲ್ಲಿ ಮೇ 3ರವರೆಗೆ ಎಲ್ಲ ಕ್ರೀಡಾ ಚಟುವಟಿಕೆಗಳೂ ಬಂದ್ ಆಗುವುದು ಖಚಿತಗೊಂಡಿದೆ. ಎಲ್ಲ ತರಬೇತಿ ಶಿಬಿರಗಳನ್ನು ಮೇ 3ರವರೆಗೆ ಅಮಾನತಿನಲ್ಲಿಡಲು ಭಾರತೀಯ ಕ್ರೀಡಾ ಪ್ರಾಧಿಕಾರ (ಸಾಯ್) ತನ್ನ ಎಲ್ಲ ಕೇಂದ್ರಗಳಿಗೆ ಸೂಚಿಸಿದೆ.

ಇದುವರೆಗೆ ಎಲ್ಲ ಸಾಯ್ ಕೇಂದ್ರಗಳು ಏಪ್ರಿಲ್ 14ರವರೆಗೆ ಬಂದ್ ಮಾಡಲಾಗಿತ್ತು. ಪ್ರಧಾನಿ ಮೋದಿ 2ನೇ ಹಂತದ ಲಾಕ್​ಡೌನ್ ಘೊಷಿಸಿದ ಬೆನ್ನಲ್ಲೇ ಅದನ್ನು ಮೇ 3ರವರೆಗೆ ವಿಸ್ತರಿಸಲಾಗಿದೆ ಎಂದು ಸಾಯ್ ಮೂಲಗಳು ತಿಳಿಸಿವೆ. ಕೇಂದ್ರ ಕ್ರೀಡಾ ಸಚಿವ ಕಿರಣ್ ರಿಜಿಜು ಆದೇಶದ ಮೇರೆಗೆ ಉನ್ನತ ಮಟ್ಟದ ಅಧಿಕಾರಿಗಳು ಸೋಮವಾರ ಸಾಯ್ ಮುಖ್ಯ ಕಚೇರಿಗೆ ಹಾಜರಾಗಿದ್ದರು. ಸಚಿವರೂ ಸಾಯ್ ಕೇಂದ್ರಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು.

ಬೆಂಗಳೂರು ಕೇಂದ್ರದಲ್ಲಿ ಹಾಕಿ ತಂಡಗಳು ಲಾಕ್: ಬೆಂಗಳೂರಿನ ಪ್ರಾದೇಶಿಕ ಸಾಯ್ ಕೇಂದ್ರದಲ್ಲಿರುವ ಭಾರತದ ಪುರುಷರ ಹಾಗೂ ಮಹಿಳಾ ಹಾಕಿ ತಂಡಗಳು, ಏಪ್ರಿಲ್ 14 ರಂದು ರಾಷ್ಟ್ರೀಯ ಶಿಬಿರ ಮುಕ್ತಾಯಗೊಂಡರೂ ಲಾಕ್​ಡೌನ್ ವಿಸ್ತರಣೆ ಹಿನ್ನೆಲೆಯಲ್ಲಿ ಇಲ್ಲೇ ಉಳಿಯಲಿವೆ. ಅಭ್ಯಾಸದ ಬದಲಿಗೆ ಕೆಲವೊಂದು ದೈಹಿಕ ಕಸರತ್ತು, ಯೋಗ, ಜಿಮ್ಲ್ಲಿ ಹೆಚ್ಚಾಗಿ ಆಟಗಾರರು ಕಾಲ ಕಳೆಯುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net