ಇನ್ನೂ ಫಿಟ್ ಆಗಿಲ್ಲ…ಊಹಾಪೋಹಗಳ ಬಗ್ಗೆ ಮೌನ ಮುರಿದ ರಿಷಭ್ ಪಂತ್

rishab
Published on

ಮಂಬೈ: ಟೀಮ್ ಇಂಡಿಯಾದ ವಿಕೆಟ್‌ಕೀಪರ್, ಬ್ಯಾಟ್ಸ್‌ಮನ್ ರಿಷಭ್ ಪಂತ್ ಇನ್ನೂ ಸಂಪೂರ್ಣವಾಗಿ ಫಿಟ್ ಆಗಿಲ್ಲ. ಇದನ್ನು ಅವರೇ ಹೇಳಿದ್ದಾರೆ. ಐಪಿಎಲ್ ಹರಾಜಿಗೂ ಮುನ್ನ ಡೆಲ್ಲಿ ಕ್ಯಾಪಿಟಲ್ಸ್ ರಿಷಬ್ ಪಂತ್ ಅವರ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದೆ. ಈ ವಿಡಿಯೋದಲ್ಲಿ ರಿಷಬ್ ಪಂತ್ ಅವರು ತಮ್ಮ ಚೇತರಿಕೆಯ ಪಯಣ, ಮೈದಾನಕ್ಕೆ ಮರಳುವುದು ಮತ್ತು ಐಪಿಎಲ್ ಹರಾಜಿನಲ್ಲಿ ಭಾಗವಹಿಸುವ ಕುರಿತು ಹಲವು ಪ್ರಶ್ನೆಗಳಿಗೆ ಉತ್ತರಿಸುತ್ತಿರುವುದು ನೋಡಬಹುದು.

ಪಂತ್ , ನಾನು ಇನ್ನೂ ಚೇತರಿಕೆಯ ಹಾದಿಯಲ್ಲಿದ್ದೇನೆ. ಕೆಲವು ತಿಂಗಳುಗಳಲ್ಲಿ ನಾನು ಹಿಂತಿರುಗುತ್ತೇನೆ ಎಂದು ಭಾವಿಸುತ್ತೇವೆ ಎಂದು ತಿಳಿಸಿದ್ದಾರೆ.

ಕಳೆದ ವಾರ, ಡೆಲ್ಲಿ ಕ್ಯಾಪಿಟಲ್ಸ್ ಕುರಿತು ಉಲ್ಲೇಖಿಸಿದ ವರದಿಯಲ್ಲಿ, ರಿಷಬ್ ಪಂತ್ ಐಪಿಎಲ್ 2024 ರಿಂದ ಕ್ರಿಕೆಟ್ ಕ್ಷೇತ್ರಕ್ಕೆ ಮರಳುತ್ತಾರೆ ಎಂದು ಹೇಳಲಾಗಿದೆ. ಫೆಬ್ರವರಿ ಕೊನೆಯ ವಾರದ ವೇಳೆಗೆ ರಿಷಭ್ ಪಂದ್ಯದ ಫಿಟ್‌ನೆಸ್ ಅನ್ನು ಮರಳಿ ಪಡೆಯಲಿದ್ದಾರೆ ಮತ್ತು ಅವರು ಐಪಿಎಲ್‌ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್‌ನ ಜವಾಬ್ದಾರಿಯನ್ನು ವಹಿಸಿಕೊಳ್ಳಲಿದ್ದಾರೆ ಎಂದು ಹೇಳಲಾಗಿದೆ.

ತನ್ನ ಚೇತರಿಕೆಯ ಪ್ರಯಾಣವನ್ನು ನೆನಪಿಸಿಕೊಳ್ಳುತ್ತಾ, ಪಂತ್, 'ಇದು ಅದ್ಭುತ, ನಾವು ಕ್ರಿಕೆಟ್ ಆಡುವಾಗ, ಯಾರೂ ನಮ್ಮನ್ನು ಪ್ರೀತಿಸುವುದಿಲ್ಲ ಎಂದು ನಮಗೆ ಅನಿಸುತ್ತದೆ. ಇದು (ಅಪಘಾತ ಮತ್ತು ಚೇತರಿಕೆ) ಬಹಳ ಕಷ್ಟಕರ ಸಮಯ. ಆದರೆ ಜನರು ನನ್ನನ್ನು ಪ್ರೀತಿಸುತ್ತಾರೆ ಮತ್ತು ನನ್ನನ್ನು ಗೌರವಿಸುತ್ತಾರೆ ಎಂದು ನಾನು ತಿಳಿದುಕೊಂಡೆ. ಅವರು ನನ್ನ ಬಗ್ಗೆ ಚಿಂತಿತರಾಗಿದ್ದಾರೆ. ಇದು ನನಗೆ ಬಹಳಷ್ಟು ಅರ್ಥವಾಗಿದೆ ಮತ್ತು ನನ್ನ ಚೇತರಿಕೆಯಲ್ಲಿ ನನಗೆ ಬಹಳಷ್ಟು ಸಹಾಯ ಮಾಡಿದೆ' ಎಂದು ಹೇಳಿದರು.

ಕಳೆದ ವರ್ಷ ನಡೆದ ಅಪಘಾತ

ರಿಷಭ್ ಪಂತ್ ಕಳೆದ ವರ್ಷ ಕಾರು ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡಿದ್ದರು. ಅವರು ಸ್ವಲ್ಪದರಲ್ಲೇ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಅಂದಿನಿಂದ ಅವರು ಕ್ರಿಕೆಟ್ ಕ್ಷೇತ್ರದಿಂದ ಅಂತರ ಕಾಯ್ದುಕೊಂಡಿದ್ದಾರೆ. ಈ ವರ್ಷದ ಆರಂಭದಲ್ಲಿ ಅವರು ಕೆಲವು ಶಸ್ತ್ರಚಿಕಿತ್ಸೆ ಮಾಡಿಸಿಕೊಂಡರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net