

ನವದೆಹಲಿ: ಪ್ಯಾರಿಸ್ ಪ್ಯಾರಾಲಿಂಪಿಕ್ಸ್‌ನಲ್ಲಿ 29 ಪದಕಗಳ ಸರ್ವಶ್ರೇಷ್ಠ ನಿರ್ವಹಣೆಯೊಂದಿಗೆ ಭಾರತಕ್ಕೆ ಬಂದಿಳಿದ ಪ್ಯಾರಾ ಕ್ರೀಡಾಪಟುಗಳಿಗೆ ಮಂಗಳವಾರ ಭವ್ಯ ಸ್ವಾಗತ ದೊರೆಯಿತು. ಜತೆಗೆ ಪದಕ ವಿಜೇತರಿಗೆ ಆಯೋಜಿಸಿದ್ದ ಸನ್ಮಾನ ಸಮಾರಂಭದಲ್ಲಿ ಕೇಂದ್ರ ಕ್ರೀಡಾ ಸಚಿವ ಮಾನ್ಸುಖ್ ಮಾಂಡವೀಯ ಪದಕ ಸಾಧಕರಿಗೆ ನಗದು ಬಹುಮಾನ ೋಷಿಸಿದರು. ಚಿನ್ನ ಗೆದ್ದವರಿಗೆ ₹75 ಲಕ್ಷ, ರಜತ ವಿಜೇತರಿಗೆ ₹50 ಲಕ್ಷ ಹಾಗೂ ಕಂಚು ಜಯಿಸಿದವರಿಗೆ ₹30 ಲಕ್ಷ ಬಹುಮಾನ ಮೊತ್ತ ನೀಡುವುದಾಗಿ ಪ್ರಕಟಿಸಿದರು.
ಆರ್ಚರಿ ಮಿಶ್ರ ವಿಭಾಗದಲ್ಲಿ ಕಂಚು ಗೆದ್ದ ರಾಕೇಶ್ ಕುಮಾರ್ ಹಾಗೂ ಶೀತಲ್ ದೇವಿ ತಲಾ 22.5 ಲಕ್ಷ ರೂ. ಪಡೆಯಲಿದ್ದಾರೆ. ಕೂಟದಲ್ಲಿ ಭಾರತ 7 ಚಿನ್ನ, 9 ಬೆಳ್ಳಿ ಹಾಗೂ 11 ಕಂಚಿನ ಪದಕದೊಂದಿಗೆ 25ರ ಗಡಿ ದಾಟಿತು. ‘ಪ್ಯಾರಾ ಸ್ಪೋರ್ಟ್ಸ್ ಹಾಗೂ ಪ್ಯಾರಾಲಿಂಪಿಕ್ಸ್‌ನಲ್ಲಿ ಭಾರತ ಪ್ರಗತಿ ಸಾಧಿಸಿದ್ದು, 2016ರಲ್ಲಿ 4, 2019ರಲ್ಲಿ 19 ಪದಕ ಜಯಿಸಿದ್ದ ಭಾರತ ಪ್ಯಾರಿಸ್‌ನಲ್ಲಿ 18ನೇ ಸ್ಥಾನ ಪಡೆದಿರುವ ಇದಕ್ಕೆ ಸಾಕ್ಷಿಯಾಗಿದೆ. 2028 ಲಾಸ್ ಏಂಜಲಿಸ್ ಪ್ಯಾರಾಲಿಂಪಿಕ್ಸ್‌ನಲ್ಲಿ ಹೆಚ್ಚಿನ ಪದಕ ಮತ್ತು ಚಿನ್ನದ ಪದಕ ಗೆಲ್ಲುವ ನಿಟ್ಟಿನಲ್ಲಿ ಪ್ಯಾರಾ ಅಥ್ಲೀಟ್‌ಗಳಿಗೆ ಸಂಪೂರ್ಣ ಸಹಕಾರದ ಜತೆಗೆ ಸೌಲಭ್ಯಗಳನ್ನು ಒದಗಿಸುವುದಾಗಿ ಸಚಿವರು ಭರವಸೆ ನೀಡಿದರು.
ಪ್ಯಾರಾ ಸ್ವಾಗತ: ಪ್ಯಾರಿಸ್ ಪ್ಯಾರಾಲಿಂಪಿಕ್ಸ್‌ನಲ್ಲಿ ದಾಖಲೆಯ ಪದಕ ಗೆಲುವಿನೊಂದಿಗೆ ಅಮೋಘ ನಿರ್ವಹಣೆ ತೋರಿದ ಭಾರತದ ಕ್ರೀಡಾಪಟುಗಳು, ಸಮಾರೋಪ ಸಮಾರಂಭದಲ್ಲಿ ಪಾಲ್ಗೊಂಡು ಮಂಗಳವಾರ ತವರಿಗೆ ಮರಳಿದರು. ನವದೆಹಲಿಯ ಐಜಿಐ ವಿಮಾನ ನಿಲ್ದಾಣದಲ್ಲಿ ಭಾರತ ತಂಡದ ಸದಸ್ಯರಿಗೆ ಹಾರ್ದಿಕ ಸ್ವಾಗತ ನೀಡಲಾಯಿತು.