ಕ್ರೀಡಾ ಪರಿಕರಗಳ ಬದಲು ಪಿಪಿಇ ಕಿಟ್! ಮೇರಠ್​​ನ ಕ್ರೀಡಾ ಸಾಮಗ್ರಿ ಕಂಪನಿಗಳಿಂದ ಕರೊನಾ ವಿರುದ್ಧ ಹೋರಾಟ

page 10 5
Published on

ನವದೆಹಲಿ: ಕರೊನಾದಿಂದಾಗಿ ಜಗತ್ತಿನೆಲ್ಲೆಡೆ ಕ್ರೀಡಾ ಚಟುವಟಿಕೆಗಳು ನಿಂತಿವೆ. ಇದರಿಂದ ಕ್ರೀಡಾ ಪರಿಕರಗಳನ್ನು ತಯಾರಿಸುವ ಕಂಪನಿಗಳೂ ಬಂದ್ ಆಗಿವೆ ಎಂದು ಕ್ರೀಡಾಪ್ರೇಮಿಗಳು ಭಾವಿಸಿದ್ದರೆ ಅದು ತಪು್ಪ. ಯಾಕೆಂದರೆ ಈ ಕಂಪನಿಗಳು ಈಗಲೂ ಕಾರ್ಯ ನಿರ್ವಹಿಸುತ್ತಿವೆ. ಆದರೆ ಬ್ಯಾಟ್, ಚೆಂಡು, ಜೆರ್ಸಿಗಳನ್ನು ಸಿದ್ಧಪಡಿಸುವ ಬದಲಾಗಿ ಗೌನ್, ಮಾಸ್ಕ್, ಶೂ ಮುಂತಾದ ವೈಯಕ್ತಿಕ ಸುರಕ್ಷಾ ಕವಚಗಳನ್ನು (ಪಿಪಿಇ ಕಿಟ್) ತಯಾರಿಸುತ್ತಿವೆ. ಈ ಮೂಲಕ ಕರೊನಾ ವಿರುದ್ಧದ ಹೋರಾಟದಲ್ಲಿ ಕೈಜೋಡಿಸಿವೆ.

ಉತ್ತರ ಪ್ರದೇಶದ ಮೀರತ್ ಕ್ರೀಡಾ ಸಾಮಗ್ರಿಗಳ ತಯಾರಿಯಲ್ಲಿ ದೇಶದಲ್ಲೇ ನಂ. 1 ನಗರವಾಗಿದೆ. ಇದನ್ನು ‘ಭಾರತದ ಕ್ರೀಡಾನಗರ’ ಎಂದೂ ಕರೆಯಲಾಗುತ್ತದೆ. ಕ್ರೀಡಾ ಪರಿಕರಗಳನ್ನು ತಯಾರಿಸುವ ಹಲವಾರು ಕಂಪನಿಗಳು ಇಲ್ಲಿವೆ. ಎಂಎಸ್ ಧೋನಿ, ವಿರಾಟ್ ಕೊಹ್ಲಿ ಸಹಿತ ಹಲವು ಕ್ರಿಕೆಟಿಗರು ಮೀರತ್​ನಲ್ಲಿ ತಯಾರಾಗುವ ಬ್ಯಾಟ್​ನಲ್ಲೇ ಆಡುತ್ತಾರೆ. ಆದರೆ ಈಗ ಕ್ರೀಡಾ ಚಟುವಟಿಕೆ ನಿಂತಿರುವುದರಿಂದ ಕ್ರೀಡಾ ಪರಿಕರಗಳಿಗೂ ಬೇಡಿಕೆ ಇಲ್ಲ. ಇದರಿಂದಾಗಿ ಮೀರತ್​ನ ಹಲವು ಕ್ರೀಡಾ ಸಾಮಗ್ರಿಗಳ ಕಂಪನಿಗಳು ಪಿಪಿಇ ಕಿಟ್ ಸಿದ್ಧಪಡಿಸುವುದರಲ್ಲಿ ತೊಡಗಿಕೊಂಡಿವೆ. ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಜತೆಜತೆಯಲ್ಲೇ ಸಂಸ್ಥೆಯ ಶೇ. 40 ಕಾರ್ವಿುಕರಷ್ಟೇ ಈ ಕೆಲಸದಲ್ಲಿ ತೊಡಗಿಕೊಂಡಿದ್ದಾರೆ. ಈ ಮೂಲಕ ಕರೊನಾ ವಿರುದ್ಧ ಹೋರಾಡು ತ್ತಿರುವ ವೈದ್ಯಕೀಯ ಸಿಬ್ಬಂದಿಗೆ ಸುರಕ್ಷತೆ ಒದಗಿಸಲು ಮುಂದಾಗಿದ್ದಾರೆ.

ಬಹುತೇಕ ಕ್ರೀಡಾ ಪರಿಕರಗಳ ತಯಾರಿಗೆ ಬಳಸುವ ಕಚ್ಚಾವಸ್ತುಗಳನ್ನೇ ಪಿಪಿಇ ಕಿಟ್​ಗಳಿಗೂ ಬಳಸುತ್ತಿದ್ದಾರೆ. ಸ್ಪೋರ್ಟ್ಸ್ ಕಿಟ್ ಬ್ಯಾಗ್​ಗಳ ಲೈನಿಂಗ್​ಗೆ ಬಳಸುವ ಬಟ್ಟೆಯನ್ನೇ ಪಿಪಿಇ ಕಿಟ್​ಗೂ ಬಳಸುತ್ತಿದ್ದು, ಇದಕ್ಕೆ ಸರ್ಕಾರದ ವೈದ್ಯಕೀಯ ಮಂಡಳಿಯಿಂದ ಅಂಗೀ ಕಾರವೂ ದೊರೆತಿದೆ. ಏಜೆನ್ಸೀಸ್

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net