ವಿಶೇಷ ಒಲಿಂಪಿಕ್ಸ್ ಭಾರತ್ ಅಧ್ಯಕ್ಷೆಯಾಗಿ ಮಾಜಿ ಸಚಿವೆ ಶಶಿಕಲಾ ಜೊಲ್ಲೆ ಆಯ್ಕೆ

New Project (4)
Published on

ಬೆಂಗಳೂರು: ಕರ್ನಾಟಕ ವಿಶೇಷ ಒಲಿಂಪಿಕ್ಸ್ ಭಾರತ್ ಅಧ್ಯಕ್ಷೆಯಾಗಿ ಮಾಜಿ ಸಚಿವೆ ಶಶಿಕಲಾ ಜೊಲ್ಲೆ ಆಯ್ಕೆಯಾಗಿದ್ದಾರೆ. ಗುರುವಾರ ನಡೆದ ಚುನಾವಣಾ ಪ್ರಕ್ರಿಯೆಯಲ್ಲಿ ಅಧ್ಯಕ್ಷೆಯಾಗಿ ಶಶಿಕಲಾ ಜೊಲ್ಲೆ, ಉಪಾಧ್ಯಕ್ಷ ರೂಪಸಿಂಗ್ ಜನರಲ್, ಕಾರ್ಯದರ್ಶಿ ಅಮರೇಂದ್ರ ಎ., ಕ್ರೀಡಾ ನಿರ್ದೇಶಕರಾಗಿ ಐ.ಡಿ. ನಾರಾಯಣ, ಶಕುಂತಲಾ ಎಸ್. ಭಟ್, ಹಾಲಪ್ಪ ಎಸ್. ಹಿರೇಮಠ್ ಆಯ್ಕೆಯಾಗಿದ್ದಾರೆ.

ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾ ನಡ್ಡಾ ಅವರ ನೇತೃತ್ವದಲ್ಲಿ ದೇಶದ ವಿಶೇಷ ಚೇತನ ಮಕ್ಕಳಿಗೆ ಹಲವಾರು ವಿಶೇಷ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ಅವರ ನಾಯಕತ್ವದಲ್ಲಿ ಕರ್ನಾಟಕದಾದ್ಯಂತ ವಿಶೇಷ ಚೇತನ ಮಕ್ಕಳಿಗೆ ಅವಕಾಶ ಕಲ್ಪಿಸಿ ವಿಶೇಷ ಒಲಿಂಪಿಕ್ಸ್‌ಗೆ ಅವರನ್ನು ಸಿದ್ಧಗೊಳಿಸುವ ಮೂಲಕ ಸಮಾಜದ ಮುಖ್ಯವಾಹಿನಿಗೆ ತರುವುದು ಮತ್ತು ನೊಂದವರ ವಿಶೇಷ ಮಕ್ಕಳ ಪಾಲಕರಿಗೆ ಧೈರ್ಯ ತುಂಬುವ ಜವಾಬ್ದಾರಿ ನಮ್ಮದಾಗಿದೆ ಎಂದು ನೂತನ ಅಧ್ಯಕ್ಷೆ ಶಶಿಕಲಾ ಜೊಲ್ಲೆ ಹೇಳಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net