ಡುರಾಂಡ್​ ಕಪ್​ಗೆ ಸೌತ್​ ಯುನೈಟೆಡ್​ ಎಫ್​ಸಿ; ಕರ್ನಾಟಕದ ಏಕೈಕ ಕ್ಲಬ್​ ಆಗಿ ಸ್ಪರ್ಧೆ

web sbfc
Published on

ಬೆಂಗಳೂರು: ಏಷ್ಯಾದ ಅತ್ಯಂತ ಹಳೆಯ ಫುಟ್​ಬಾಲ್​ ಟೂರ್ನಿಯಾಗಿರುವ ಡುರಾಂಡ್​ ಕಪ್​ನ 134ನೇ ಆವೃತ್ತಿಯಲ್ಲಿ ಬೆಂಗಳೂರಿನ ಸೌತ್​ ಯುನೈಟೆಡ್​ ಫುಟ್​ಬಾಲ್​ ಕ್ಲಬ್​ (ಎಸ್​ಯುಎಫ್​ಸಿ) ಭಾಗವಹಿಸಲಿದೆ. ಸೌತ್​ ಯುನೈಟೆಡ್​ ಟೂನಿರ್ಯಲ್ಲಿ ಸ್ಪಧಿರ್ಸಲಿರುವ ಕರ್ನಾಟಕದ ಏಕೈಕ ಫುಟ್​ಬಾಲ್​ ಕ್ಲಬ್​ ಎನಿಸಿದೆ.

ಜುಲೈ 23ರಿಂದ ಆಗಸ್ಟ್​ 27ರವರೆಗೆ 5 ರಾಜ್ಯಗಳಲ್ಲಿ ಟೂನಿರ್ಯ ಪಂದ್ಯಗಳು ನಡೆಯಲಿವೆ. "ಡುರಾಂಡ್​ ಕಪ್​ ಒಂದು ಟೂರ್ನಿ ಮಾತ್ರವಲ್ಲ, ಒಂದು ಪರಂಪರೆ. ಈ ಬಾರಿ ಕರ್ನಾಟಕದ ಏಕೈಕ ಕ್ಲಬ್​ ಆಗಿ ಟೂನಿರ್ಯಲ್ಲಿ ಪಾಲ್ಗೊಳ್ಳುತ್ತಿರುವುದು ನಮಗೆ ದೊಡ್ಡ ಗೌರವವೆನಿಸಿದೆ. ಯುವ ಭಾರತೀಯ ಪ್ರತಿಭೆಗಳನ್ನು ಬೆಳೆಸಲು ಮತ್ತು ರಾಜ್ಯದ ಫುಟ್​ಬಾಲ್​ ಕನಸುಗಳನ್ನು ಈಡೇರಿಸಲು ನಾವು ನಿರಂತರವಾಗಿ ಬದ್ಧರಾಗಿರುತ್ತೇವೆ' ಎಂದು ಎಸ್​ಯುಎಫ್​ಸಿ ಮಾಲೀಕ ಹಾಗೂ ನಿರ್ದೇಶಕ ಶರಣ್​ ಪಾರಿಖ್​ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net