ಟೆಸ್ಟ್​ ವಿಶ್ವ ಚಾಂಪಿಯನ್​ ದಕ್ಷಿಣ ಆಫ್ರಿಕಾಕ್ಕೆ ಅದ್ದೂರಿ ಸ್ವಾಗತ

New Project (1)
Published on

ಜೊಹಾನ್ಸ್​ರ್ಬಗ್​: ಐಸಿಸಿ ವಿಶ್ವ ಟೆಸ್ಟ್​ ಚಾಂಪಿಯನ್​ಷಿಪ್​ ಗೆದ್ದು ನಾಲ್ಕು ದಿನಗಳ ಬಳಿಕ ತವರಿಗೆ ಮರಳಿದ ಟೆಂಬಾ ಬವುಮಾ ಸಾರಥ್ಯದ ದಣ ಆಫ್ರಿಕಾ ತಂಡಕ್ಕೆ ಬುಧವಾರ ಅದ್ದೂರಿ ಸ್ವಾಗತ ನೀಡಲಾಯಿತು. ಜೊಹಾನ್ಸ್​ರ್ಬಗ್​ ವಿಮಾನ ನಿಲ್ದಾಣದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಅಭಿಮಾನಿಗಳು, ಹೂಗುಚ್ಛ ಮತ್ತು ರಾಷ್ಟ್ರೀಯ ಧ್ವಜದೊಂದಿಗೆ ಸೇರಿದ್ದರು.

27 ವರ್ಷಗಳ ಬಳಿಕ ಐಸಿಸಿ ಟ್ರೋಫಿ ಎತ್ತಿರುವ ದಕ್ಷಿಣ ಆಫ್ರಿಕಾ ಚೋಕರ್ಸ್​ ಹಣೆಪಟ್ಟಿಯನ್ನು ಕಳಚಿದೆ. ಡಬ್ಲ್ಯುಟಿಸಿ ಟ್ರೋಫಿಯಾಗಿರುವ ಚಿನ್ನದ ಗದೆಯೊಂದಿಗೆ ಬವುಮಾ ಹೆಮ್ಮೆಯಿಂದ ವಿಮಾನ ನಿಲ್ದಾಣದಿಂದ ಹೊರಬಂದರು. ಅದರ ಬೆನ್ನಲ್ಲೇ ಜನರು ಉದ್ಘೋಷ, ಹಾಡಿನೊಂದಿಗೆ ಸಂಭ್ರಮಿಸಿದರು. ಎಲ್ಲ ಆಟಗಾರರು ಜತೆಯಾಗಿ ನಿಂತು ಪೋಸ್​ ನೀಡಿದರು ಮತ್ತು ಅಭಿಮಾನಿಗಳತ್ತ ಕೈಬೀಸಿ ಧನ್ಯವಾದ ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net