ಎರಡನೇ ಟೆಸ್ಟ್ ಆರಂಭಕ್ಕೂ ಮುನ್ನ ದಕ್ಷಿಣ ಆಫ್ರಿಕಾಕ್ಕೆ ಡಬಲ್ ಆಘಾತ: ಸರಣಿಯಿಂದ ಹೊರಬಿದ್ದ ವೇಗಿ

New-Project-59
Published on

ಸೆಂಚುರಿಯನ್: ಪ್ರವಾಸಿ ಭಾರತ ವಿರುದ್ಧ ಮೊದಲ ಟೆಸ್ಟ್ ಪಂದ್ಯ ಗೆದ್ದು ಬೀಗುತ್ತಿರುವ ಆತಿಥೇಯ ತಂಡಕ್ಕೆ 2ನೇ ಆಘಾತ ಎದುರಾಗಿದೆ. ಮೊದಲ ಪಂದ್ಯದ ವೇಳೆ ಉರಿಯೂತ ಸಮಸ್ಯೆ ಎದುರಿಸಿದ ವೇಗಿ ಗೆರಾಲ್ಡ್ ಕೋಟ್‌ಜೀಗೆ ಮುನ್ನೆಚ್ಚರಿಕೆಯಾಗಿ ವಿಶ್ರಾಂತಿ ನೀಡಲಾಗಿದ್ದು, ಮುಂದಿನ ಪಂದ್ಯದಿಂದ ಹೊರಬಿದ್ದಿದ್ದಾರೆ.

ಭಾರತ ವಿರುದ್ಧ ಮೂರೇ ದಿನಗಳಲ್ಲಿ ಗೆಲುವು ದಾಖಲಿಸಿದ ದ.ಆಫ್ರಿಕಾ ತಂಡದಲ್ಲಿ ಗಾಯಾಳುಗಳ ಪಟ್ಟಿ ಬೆಳೆಯುತ್ತಲಿದೆ. ಮೊದಲ ಪಂದ್ಯದಲ್ಲಿ ಮೊದಲ ದಿನವೇ ಸ್ನಾಯು ಸೆಳೆತಕ್ಕೆ ತುತ್ತಾಗಿದ ನಾಯಕ ಟೆಂಬಾ ಬವುಮಾ, ಬಳಿಕ 23 ವರ್ಷದ ಕೋಟ್‌ಜೀ ಕೂಡ ಅಲಭ್ಯರಾಗಿದ್ದಾರೆ.

ಪಾದದಲ್ಲಿ ಉರಿಯೂತ ಕಂಡು ಬಂದ ಹಿನ್ನಲೆ 2ನೇ ಇನಿಂಗ್ಸ್‌ನಲ್ಲಿ ಕೋಟ್ ಜೀ ಕೇವಲ ಐದು ಓವರ್‌ಮಾತ್ರ ಬೌಲಿಂಗ್ ನಡೆಸಿದ್ದರು. ಯಾವುದೇ ಬದಲಿ ಆಗಾರನನ್ನು ಆಫ್ರಿಕಾ ತಂಡ ಹೆಸರಿಸಿಲ್ಲ, ಕೋಟ್ ಜೀ ಬದಲಿಗೆ ದಕ್ಷಿಣ ಆಫ್ರಿಕಾ ಪರ ವೇಗಿಗಳಾದ ಲುಂಗಿ ಎನ್‌ಗಿಡಿ ಅಥವಾ ವಿಯಾನ್ ಮುಲ್ಡರ್ ಸ್ಥಾನ ಪಡೆಯುವ ನಿರೀಕ್ಷೆ ಇದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net