

ಸೆಂಚುರಿಯನ್: ಆತಿಥೇಯ ದಕ್ಷಿಣ ಆಫ್ರಿಕಾ ತಂಡ ಐಸಿಸಿ ವಿಶ್ವ ಟೆಸ್ಟ್‌ಚಾಂಪಿಯನ್‌ಷಿಪ್ (ಡಬ್ಲುೃಟಿಸಿ) ಮೂರನೇ ಆವೃತ್ತಿಯಲ್ಲಿ ಮೊದಲ ತಂಡವಾಗಿ ಫೈನಲ್ ಸ್ಥಾನ ಖಾತ್ರಿಪಡಿಸಿಕೊಂಡಿದೆ. ಕಗಿಸೋ ರಬಾಡ (31* ರನ್, 26 ಎಸೆತ, 5 ಬೌಂಡರಿ) ಹಾಗೂ ಮಾರ್ಕೋ ಜಾನ್ಸೆನ್ (16*) ನಡೆಸಿದ ದಿಟ್ಟ ಜತೆಯಾಟದ ನೆರವಿನಿಂದ ದ.ಆಫ್ರಿಕಾ ತಂಡ ಮೊದಲ ಟೆಸ್ಟ್ ಪಂದ್ಯದಲ್ಲಿ ಪಾಕಿಸ್ತಾನ ಎದುರು 2 ವಿಕೆಟ್‌ಗಳ ರೋಚಕ ಗೆಲುವು ಒಲಿಸಿಕೊಂಡಿತು. ಇದರೊಂದಿಗೆ ಟೆಂಬಾ ಬವುಮಾ ಪಡೆ ಮೊದಲ ಬಾರಿಗೆ ಡಬ್ಲುೃಟಿಸಿ ಫೈನಲ್ ಪ್ರವೇಶಿಸಿದರೆ, ಇನ್ನೊಂದು ಸ್ಥಾನಕ್ಕೆ ತ್ರಿಕೋನ ಸ್ಪರ್ಧೆ (ಭಾರತ, ಆಸೀಸ್, ಶ್ರೀಲಂಕಾ) ಏರ್ಪಟ್ಟಿದೆ.
ಸೂಪರ್ ಸ್ಪೋರ್ಟ್ಸ್ ಕ್ರೀಡಾಂಗಣದಲ್ಲಿ ಭಾನುವಾರ ಮುಕ್ತಾಯಗೊಂಡ ಪಂದ್ಯದಲ್ಲಿ 148 ರನ್ ಗುರಿ ಪಡೆದಿದ್ದ ಹರಿಣಗಳ ಪಡೆ 3 ವಿಕೆಟ್‌ಗೆ 27 ರನ್‌ಗಳಿಂದ 4ನೇ ದಿನದ ಆಟ ಆರಂಭಿಸಿತು. ಪಾಕ್ ವೇಗಿ ಮೊಹಮದ್ ಅಬ್ಬಾಸ್ (54ಕ್ಕೆ 6) ದಾಳಿಗೆ ಕುಸಿದ ದ.ಆಫ್ರಿಕಾ 99 ರನ್‌ಗಳಿಗೆ 8 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ಆಗ ರಬಾಡ ಹಾಗೂ ಜಾನ್ಸೆನ್ ಮುರಿಯದ 9ನೇ ವಿಕೆಟ್‌ಗೆ ಸೇರಿಸಿದ 51 ರನ್‌ಗಳ ಬಲದಿಂದ ದ.ಆಫ್ರಿಕಾ ಅಂತಿಮವಾಗಿ 39.3 ಓವರ್‌ಗಳಲ್ಲಿ 8 ವಿಕೆಟ್‌ಗೆ 150 ರನ್‌ಗಳಿಸಿ ಜಯದ ಸಂಭ್ರಮ ಕಂಡಿತು. ಇದರೊಂದಿಗೆ ಟಿ20 ವಿಶ್ವಕಪ್ ಬಳಿಕ ಟೆಸ್ಟ್ ವಿಶ್ವ ಚಾಂಪಿಯನ್‌ಷಿಪ್‌ನಲ್ಲೂ ೈನಲ್‌ಗೇರಿದ ಸಾಧನೆ ಮಾಡಿತು.
ಪಾಕಿಸ್ತಾನ: 211 ಹಾಗೂ 237. ದ.ಆಫ್ರಿಕಾ: 301 ಹಾಗೂ 8 ವಿಕೆಟ್‌ಗೆ 150 (ಮಾರ್ಕ್ರಮ್ 37, ಬವುಮಾ 40, ಜಾನ್ಸೆನ್ 16*, ರಬಾಡ 31*, ಅಬ್ಬಾಸ್ 54ಕ್ಕೆ 6). ಪಂದ್ಯಶ್ರೇಷ್ಠ: ಏಡೆನ್ ಮಾರ್ಕ್ರಮ್.