

ಡರ್ಬನ್: ಯುವ ಬ್ಯಾಟರ್ ಟ್ರಿಸ್ಟಾನ್ ಸ್ಟಬ್ಸ್ (122 ರನ್, 221 ಎಸೆತ, 9 ಬೌಂಡರಿ, 2 ಸಿಕ್ಸರ್) ಹಾಗೂ ನಾಯಕ ಟೆಂಬಾ ಬವುಮಾ (113 ರನ್, 228 ಎಸೆತ, 9 ಬೌಂಡರಿ) ಶತಕ ಮತ್ತು ಭರ್ಜರಿ ಜತೆಯಾಟದ ನೆರವಿನಿಂದ ಆತಿಥೇಯ ದಕ್ಷಿಣ ಆಫ್ರಿಕಾ ಮೊದಲ ಟೆಸ್ಟ್ ಪಂದ್ಯದಲ್ಲಿ ಶ್ರೀಲಂಕಾಗೆ ಬೃಹತ್ ಗುರಿ ನೀಡಿದೆ. ಪ್ರತಿಯಾಗಿ 5 ವಿಕೆಟ್ ಕಳೆದುಕೊಂಡಿರುವ ಲಂಕಾ ಸೋಲಿನ ಸುಳಿಯಲ್ಲಿ ಸಿಲುಕಿದೆ.
ಕಿಂಗ್ಸ್‌ಮೀಡ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ 3 ವಿಕೆಟ್‌ಗೆ 132 ರನ್‌ಗಳಿಂದ 3ನೇ ದಿನದಾಟ ಆರಂಭಿಸಿದ ದ.ಆಫ್ರಿಕಾ, ಬವುಮಾ-ಸ್ಟಬ್ಸ್ ಜೋಡಿ 4ನೇ ವಿಕೆಟ್‌ಗೆ ನಡೆಸಿದ 249 ರನ್ ಜತೆಯಾಟದ ಬಲದಿಂದ 100.4 ಓವರ್‌ಗಳಲ್ಲಿ 5 ವಿಕೆಟ್‌ಗೆ 366 ರನ್ ಗಳಿಸಿ ದ್ವಿತೀಯ ಇನಿಂಗ್ಸ್ ಡಿಕ್ಲೇರ್ ಮಾಡಿಕೊಂಡಿತು. ಇದರಿಂದ 516 ರನ್‌ಗಳ ಬೃಹತ್ ಗುರಿ ಪಡೆದ ಲಂಕಾ, ದಿನದಂತ್ಯಕ್ಕೆ 31 ಓವರ್‌ಗಳಲ್ಲಿ 5 ವಿಕೆಟ್‌ಗೆ 103 ರನ್ ಕಲೆಹಾಕಿದೆ. ಉಳಿದ 2 ದಿನಗಳಲ್ಲಿ ಇನ್ನೂ 413 ರನ್‌ಗಳಿಸಬೇಕಿದೆ.
ದ.ಆಫ್ರಿಕಾ:191 ಹಾಗೂ 5 ವಿಕೆಟ್‌ಗೆ 366 (ಸ್ಟಬ್ಸ್ 122, ಬವುಮಾ 113, ಬೆಡ್ಡಿಂಗ್‌ಹ್ಯಾಮ್ 21*, ವಿಶ್ವ 64ಕ್ಕೆ 2, ಪ್ರಭಾತ್ 132ಕ್ಕೆ 2).
ಶ್ರೀಲಂಕಾ: 42 ಹಾಗೂ 5 ವಿಕೆಟ್‌ಗೆ 103 (ಪಥುಮ್ 23, ಚಾಂಡಿಮಲ್ 29*, ಮ್ಯಾಥ್ಯೂಸ್ 25, ಕಮ್ಮಿಂದು 10, ಜಾನ್ಸೆನ್ 22ಕ್ಕೆ 2, ರಬಾಡ 34ಕ್ಕೆ 2).