ಪಾಕ್-ದಕ್ಷಿಣ ಆಫ್ರಿಕಾ ಪಂದ್ಯಕ್ಕೆ ಮಳೆ ಅಡ್ಡಿ

babar azam for web
Published on

ರಾವಲ್ಪಿಂಡಿ: ನಾಯಕ ಬಾಬರ್ ಅಜಮ್ (77*ರನ್, 125 ಎಸೆತ, 12 ಬೌಂಡರಿ) ಹಾಗೂ ಫವದ್ ಅಲಮ್ (42*ರನ್, 138 ಎಸೆತ, 5 ಬೌಂಡರಿ) ಜೋಡಿ ಜವಾಬ್ದಾರಿಯುತ ನಿರ್ವಹಣೆ ನೆರವಿನಿಂದ ಆತಿಥೇಯ ಪಾಕಿಸ್ತಾನ ತಂಡ 2ನೇ ಹಾಗೂ ಅಂತಿಮ ಟೆಸ್ಟ್ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ಎದುರು ಮೊದಲ ದಿನದಾಟದಲ್ಲಿ ಗೌರವ ಉಳಿಸಿಕೊಂಡಿತು. ಮಳೆಯಿಂದಾಗಿ ದಿನದಾಟದ ಅಂತಿಮ ಅವಧಿ ರದ್ದುಗೊಂಡಿತು.

ರಾವಲ್ಪಿಂಡಿ ಕ್ರಿಕೆಟ್ ಸ್ಟೇಡಿಯಂನಲ್ಲಿ ಗುರುವಾರ ಆರಂಭಗೊಂಡ ಪಂದ್ಯದಲ್ಲಿ ಟಾಸ್ ಜಯಿಸಿ ಮೊದಲು ಬ್ಯಾಟಿಂಗ್ ಮಾಡಿದ ಪಾಕಿಸ್ತಾನ ತಂಡ ಆರಂಭಿಕ ಆಘಾತದಿಂದ ತತ್ತರಿಸಿತು. ಇಮ್ರಾನ್ ಭಟ್ (15), ಅಬಿದ್ ಅಲಿ (6) ಹಾಗೂ ಅಜರ್ ಅಲಿ (0) ನಿರಾಸೆ ಕಂಡರು. ಬಳಿಕ ಜತೆಯಾದ ಬಾಬರ್ ಅಜಮ್ ಹಾಗೂ ಫವದ್ ಅಲಂ ಜೋಡಿ ಮುರಿಯದ 4 ವಿಕೆಟ್‌ಗೆ 123 ರನ್ ಪೇರಿಸಿದ ಲವಾಗಿ ಪಾಕಿಸ್ತಾನ 3 ವಿಕೆಟ್‌ಗೆ 145 ರನ್‌ಗಳಿಸಿತು. ಬಳಿಕ ಮಳೆಯಿಂದಾಗಿ ದಿನದಾಟ ಸ್ಥಗಿತಗೊಳಿಸಲಾಯಿತು.

ಪಾಕಿಸ್ತಾನ: 58 ಓವರ್‌ಗಳಲ್ಲಿ 3 ವಿಕೆಟ್‌ಗೆ 145 (ಬಾಬರ್ ಅಜಮ್ 77*, ವದ್ ಅಲಂ 42*, ಇಮ್ರಾನ್ ಭಟ್ 15, ಕೇಶವ್ ಮಹಾರಾಜ್ 51ಕ್ಕೆ 2).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net