ದ.ಆಫ್ರಿಕಾ-ಇಂಗ್ಲೆಂಡ್ ಏಕದಿನ ಸರಣಿ ರದ್ದುಗೊಂಡಿದ್ದೇಕೆ..?

england and sa players
Published on

ಕೇಪ್‌ಟೌನ್: ಕೋವಿಡ್-19 ಪ್ರಕರಣ ಪದೆ ಪದೆ ಪತ್ತೆಯಾದ ಹಿನ್ನೆಲೆಯಲ್ಲಿ ಇಂಗ್ಲೆಂಡ್ ಹಾಗೂ ದಕ್ಷಿಣ ಆಫ್ರಿಕಾ ನಡುವಿನ ಏಕದಿನ ಸರಣಿಯನ್ನು ಮುನ್ನೆಚ್ಚರಿಕೆ ದೃಷ್ಟಿಯಿಂದ ಮುಂದೂಡಲಾಗಿದೆ. ಇಂಗ್ಲೆಂಡ್ ಕ್ರಿಕೆಟ್ ಮಂಡಳಿ ಹಾಗೂ ಕ್ರಿಕೆಟ್ ದಕ್ಷಿಣ ಆಫ್ರಿಕಾ ಜಂಟಿಯಾಗಿ ಈ ತೀರ್ಮಾನ ಕೈಗೊಂಡಿವೆ. ಎರಡು ತಂಡಗಳ ಆಟಗಾರರ ದೈಹಿಕ ಹಾಗೂ ಮಾನಸಿಕ ಹಿತದೃಷ್ಟಿಯಿಂದ ಈ ತೀರ್ಮಾನ ಕೈಗೊಳ್ಳಲಾಗಿದೆ ಎಂದು ಇಸಿಬಿ ತಿಳಿಸಿದೆ. ಉಭಯ ತಂಡಗಳು ಬಯೋ ಬಬಲ್ ವಾತಾವರಣ ಉಲ್ಲಂಸಿದ್ದೆ ಕೋವಿಡ್-19 ಪತ್ತೆಗೆ ಕಾರಣ ಎಂದು ತಿಳಿದು ಬಂದಿದೆ. ಕರೊನಾ ಕಾಲದಲ್ಲಿ ನಡೆಯುತ್ತಿರುವ ಕ್ರಿಕೆಟ್ ಸರಣಿಗಳು ಯಶಸ್ವಿಯಾಗುತ್ತಿದ್ದರೂ ಇದೇ ಮೊದಲ ಬಾರಿಗೆ ಸರಣಿಯೊಂದು ರದ್ದುಗೊಂಡಂತಾಗಿದೆ.

ಕಳೆದ ಶುಕ್ರವಾರ ಕೇಪ್‌ಟೌನ್‌ನಲ್ಲಿ ನಿಗದಿಯಾಗಿದ್ದ ಮೊದಲ ಏಕದಿನ ಪಂದ್ಯವನ್ನು ಭಾನುವಾರಕ್ಕೆ ಮುಂದೂಡಲಾಗಿತ್ತು. ದಕ್ಷಿಣ ಆಫ್ರಿಕಾದ ಓರ್ವ ಆಟಗಾರನಿಗೆ ಕೋವಿಡ್ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿತ್ತು. ಬಳಿಕ ಪ್ರವಾಸಿ ತಂಡದ ಇಬ್ಬರಿಗೆ, ಆಟಗಾರರು ತಂಗಿದ್ದ ಹೋಟೆಲ್‌ನ ಇಬ್ಬರು ಸಿಬ್ಬಂದಿಗೂ ಕೋವಿಡ್ ದೃಢಪಟ್ಟಿತ್ತು. ಆಟಗಾರರ ಹಿತ ಮುಖ್ಯ. ಆರೋಗ್ಯದ ದೃಷ್ಟಿಯಿಂದ ಈ ತೀರ್ಮಾನ ಕೈಗೊಂಡಿದ್ದೇವೆ ಎಂದು ಇಸಿಬಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಟಾಮ್ ಹ್ಯಾರಿಸನ್ ಹೇಳಿದ್ದಾರೆ.

ಇದಕ್ಕೂ ಮೊದಲು ನಡೆದ 3 ಪಂದ್ಯಗಳ ಟಿ20 ಸರಣಿಯಲ್ಲಿ ಪ್ರವಾಸಿ ಇಂಗ್ಲೆಂಡ್ ತಂಡ ಕ್ಲೀನ್‌ಸ್ವೀಪ್ ಸಾಧನೆ ಮಾಡಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net