ದ.ಆಫ್ರಿಕಾ ತಂಡಕ್ಕೆ ಹ್ಯಾಟ್ರಿಕ್ ಜಯ, ಸೆಮೀಸ್ ಹಂತಕ್ಕೆ ಮತ್ತಷ್ಟು ಸನಿಹ

sa and bang for web
Published on

ಅಬುಧಾಬಿ: ವೇಗಿಗಳಾದ ಅನ್ರಿಚ್ ನೋಕಿಯ (8ಕ್ಕೆ 3) ಹಾಗೂ ಕಗಿಸೊ ರಬಾಡ (20ಕ್ಕೆ 3) ಜೋಡಿಯ ಮಾರಕ ದಾಳಿ ನೆರವಿನಿಂದ ದಕ್ಷಿಣ ಆಫ್ರಿಕಾ ತಂಡ ಟಿ20 ವಿಶ್ವಕಪ್ ಟೂರ್ನಿಯ ಪಂದ್ಯದಲ್ಲಿ ಬಾಂಗ್ಲಾದೇಶ ತಂಡವನ್ನು 6 ವಿಕೆಟ್‌ಗಳಿಂದ ಮಣಿಸಿತು. ಇದರಿಂದ ಹ್ಯಾಟ್ರಿಕ್ ಗೆಲುವಿನ ನಗೆ ಬೀರಿದ ದ.ಆಫ್ರಿಕಾ ತಂಡ ಸೆಮೀಸ್ ಹಂತಕ್ಕೆ ಮತ್ತಷ್ಟು ಸನಿಹವಾಯಿತು.

ಟಾಸ್ ಜಯಿಸಿ ಫೀಲ್ಡಿಂಗ್ ಆಯ್ದುಕೊಂಡ ದ.ಆಫ್ರಿಕಾ ತಂಡ, ಬಾಂಗ್ಲಾದೇಶ ತಂಡವನ್ನು 18.2 ಓವರ್‌ಗಳಲ್ಲಿ 84 ರನ್‌ಗಳಿಗೆ ಕಟ್ಟಿಹಾಕಿತು. ಬಳಿಕ ತೆಂಬ ಬವುಮಾ (31*ರನ್, 28 ಎಸೆತ, 3 ಬೌಂಡರಿ, 1 ಸಿಕ್ಸರ್) ಬಿರುಸಿನ ಬ್ಯಾಟಿಂಗ್ ನೆರವಿನಿಂದ 13.3 ಓವರ್‌ಗಳಲ್ಲಿ 4 ವಿಕೆಟ್‌ಗೆ 86 ರನ್‌ಗಳಿಸಿ ಜಯದ ನಗೆ ಬೀರಿತು.

ಬಾಂಗ್ಲಾದೇಶ: 18.2 ಓವರ್‌ಗಳಲ್ಲಿ 84 (ಲಿಟನ್ ದಾಸ್ 24, ಮಹೆದಿ ಹಸನ್ 27, ಕಗಿಸೊ ರಬಾಡ 20ಕ್ಕೆ 3, ಅನ್ರಿಚ್ ನೋಕಿಯ 8ಕ್ಕೆ 3, ತಬರೇಜ್ ಶಮ್ಸಿ 21ಕ್ಕೆ 2), ದ.ಆಫ್ರಿಕಾ: 13.3 ಓವರ್‌ಗಳಲ್ಲಿ 4 ವಿಕೆಟ್‌ಗೆ 86 (ತೆಂಬಾ ಬವುಮಾ 31*, ರಾಸಿ ಡರ್ ಡುಸೆನ್ 22, ಟಸ್ಕಿನ್ ಅಹಮದ್ 18ಕ್ಕೆ 2).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net