ಸೌರವ್ ಗಂಗೂಲಿಗೆ ಟೀಮ್ ಇಂಡಿಯಾ ನಾಯಕತ್ವ ದಕ್ಕಿದ್ದು ಹೇಗೆ..!

gangully for web
Published on

ನವದೆಹಲಿ: ಸೌರವ್ ಗಂಗೂಲಿ ಟೀಮ್ ಇಂಡಿಯಾದಲ್ಲಿ ದಾದಾ ಎಂದೇ ಪ್ರಸಿದ್ಧಿ ಪಡೆದ ಆಟಗಾರ. ನಾಯಕತ್ವ ಗುಣಗಳಿಂದ ಇಡೀ ವಿಶ್ವ ಕ್ರಿಕೆಟ್ ಗಮನಸೆಳೆದ ಸೌರವ್ ಗಂಗೂಲಿ ಇಂದಿಗೂ ಅದೇ ಚಾರ್ಮ್ ಉಳಿಸಿಕೊಂಡಿದ್ದಾರೆ. ಇದೀಗ ಕ್ರಿಕೆಟ್ ಆಡಳಿತಕ್ಕೂ ಲಗ್ಗೆ ಇಟ್ಟಿದ್ದಾರೆ. ಆದರೆ, ಬಂಗಾಳದ ಸೌರವ್ ಗಂಗೂಲಿಗೆ ಟೀಮ್ ಇಂಡಿಯಾ ನಾಯಕತ್ವ ದಕ್ಕಿದ ಕುರಿತು ಅಂದಿನ ಆಯ್ಕೆ ಸಮಿತಿ ಅಧ್ಯಕ್ಷ ಚಂದು ಬೋರ್ಡೆ ಬಹಿರಂಗಪಡಿಸಿದ್ದಾರೆ.

ಸಚಿನ್ ತೆಂಡುಲ್ಕರ್ ಭಾರತದ ಬ್ಯಾಟಿಂಗ್ ಮಾಂತ್ರಿಕ ಎಂಬುದರಲ್ಲಿ ಎರಡು ಮಾತಿಲ್ಲ. ಜತೆಗೆ ಹಲವು ದಾಖಲೆಗಳ ಒಡೆಯನಾದರೂ ನಾಯಕತ್ವದಲ್ಲಿ ಸಂಪೂರ್ಣ ವೈಫಲ್ಯ ಅನುಭವಿಸಿದರು. 2000ರಲ್ಲಿ ಸಚಿನ್ ನಾಯಕತ್ವದಲ್ಲಿ ಭಾರತ ಆಸ್ಟ್ರೇಲಿಯಾ ಪ್ರವಾಸ ಕೈಗೊಂಡಿತ್ತು. ಆದರೆ, ಟೆಸ್ಟ್ ಸರಣಿಯಲ್ಲಿ 0-3 ರಿಂದ ಸೋತರೆ, ತ್ರಿಕೋನ ಏಕದಿನ ಸರಣಿಯಲ್ಲಿ ಆಡಿದ 14 ಪಂದ್ಯಗಳಲ್ಲಿ ಕೇವಲ ಒಂದು ಗೆಲುವು ಕಂಡಿತ್ತು. ಬಳಿಕ ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿಯಲ್ಲೂ ಭಾರತ ಸೋಲು ಕಂಡಿತ್ತು. ಇದರಿಂದ ಬೇಸರಗೊಂಡ ಸಚಿನ್, ಬ್ಯಾಟಿಂಗ್ ಮೇಲೆ ನಿಗಾವಹಿಸುವ ಸಲುವಾಗಿ ನಾಯಕತ್ವ ತ್ಯಜಿಸುವುದಾಗಿ ಹೇಳಿದ್ದರಂತೆ. ಇದಕ್ಕೆ ಆಯ್ಕೆ ಸಮಿತಿ ಒಪ್ಪಿಕೊಳ್ಳದಿದ್ದರೂ ಸಚಿನ್ ಮಾತ್ರ ತಮ್ಮನಿಲುವು ಬದಲಿಸಲಿಲ್ಲವಂತೆ. ಈ ವೇಳೆ ತಂಡದ ಆಡಳಿತ ಮಂಡಳಿಗೆ ಸೌರವ್ ಗಂಗೂಲಿ ಪಟ್ಟ ನೀಡಿತು.

ದೀರ್ಘಕಾಲದವರೆಗೆ ತಂಡ ಮುನ್ನಡೆಬಲ್ಲ ಶಕ್ತಿ ಗಂಗೂಲಿಗೆ ಇದೆ ಎಂದು ಭಾವಿಸಿ ನಾಯಕತ್ವ ವಹಿಸಲಾಯಿತು. ಬಳಿಕ ನಡೆದಿದೆಲ್ಲಾ ಇತಿಹಾಸ. ಸೌರವ್ ಗಂಗೂಲಿ ನಾಯಕನಾಗಿ ಹೆಚ್ಚು ಯುವಕರಿಗೆ ಆದ್ಯತೆ ನೀಡಿದಲ್ಲದೆ, ಕೆಲವೊಂದು ಕಠಿಣ ಬದಲಾವಣೆಯನ್ನು ತಂಡದಲ್ಲಿ ತಂದರು. ಗಂಗೂಲಿ ನಾಯಕತ್ವದಲ್ಲಿಯೇ ಭಾರತ 2003ರ ಏಕದಿನ ವಿಶ್ವಕಪ್‌ನಲ್ಲಿ ಫೈನಲ್ ಪ್ರವೇಶಿಸಿತ್ತು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net