Sourav Ganguly : ಗಂಗೂಲಿ ಪುತ್ರಿ ಸನಾ ಕಾರು ಅಪಘಾತ; ಕಾರ್​ಗೆ ಡಿಕ್ಕಿ ಹೊಡೆದ ಬಸ್

Sourav Ganguly
Published on

Sourav Ganguly :  ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ಮತ್ತು ಬಿಸಿಸಿಐ ಮಾಜಿ ಅಧ್ಯಕ್ಷ ಸೌರವ್ ಗಂಗೂಲಿ ಪುತ್ರಿ ಸನಾ ಅಪಘಾತಕ್ಕೀಡಾಗಿದ್ದಾರೆ.

ಗಂಗೂಲಿ ಪುತ್ರಿ ಸನಾ ಅವರು ಪ್ರಯಾಣಿಸುತ್ತಿದ್ದ ಕಾರಿಗೆ ಬಸ್ ಡಿಕ್ಕಿ ಹೊಡೆದಿದೆ. ಶುಕ್ರವಾರ ರಾತ್ರಿ ಕೋಲ್ಕತ್ತಾದ ಡೈಮಂಡ್ ಹಾರ್ಬರ್​ನಲ್ಲಿ ಈ ದುರ್ಘನೆ ನಡೆದಿದೆ.

ಸನಾ ಅವರು ಕಾರು ಚಲಾಯಿಸುತ್ತಿರಲಿಲ್ಲ. ಬದಲಾಗಿ ಡ್ರೈವರ್ ಕಾರು ಚಲಾಯಿಸುತ್ತಿದ್ದರು. ಕೊನೆಗೆ ಕಾರು ಡ್ರೈವರ್​, ಬಸ್ ಚೇಸ್ ಮಾಡಿ ಬಸ್ ನಿಲ್ಲಿಸಿದ್ದಾನೆ. ನಾ ಗಂಗೂಲಿ ಕಾರಿಗೆ ಸ್ವಲ್ಪ ಹಾನಿಯಾಗಿದೆ ಎಂದು ಪೊಲೀಸರು ಹೇಳಿದ್ದಾರೆ. ಅವರಿಗೆ ಯಾವುದೇ ಗಾಯವಾಗಿಲ್ಲ ಎನ್ನಲಾಗಿದೆ.

ಕೋಲ್ಕತ್ತಾದಿಂದ ರಾಯಚಕ್‌ಗೆ ಹೋಗುತ್ತಿದ್ದಾಗ ಅಪಘಾತ ಸಂಭವಿಸಿದೆ. ಸನಾ ಪ್ರಯಾಣಿಸುತ್ತಿದ್ದ ಕಾರಿಗೆ ಹಿಂದಿನಿಂದ ಬಸ್ ಗುದ್ದಿಕೊಂಡು ಹೋಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net