

ಲಖನೌ: ಯುವ ಕುಸ್ತಿಪಟು ಸೋನಂ ಮಲಿಕ್ ಬುಧವಾರ ಒಲಿಂಪಿಕ್ ಅರ್ಹತಾ ಸುತ್ತಿಗಾಗಿ ನಡೆದ ಭಾರತ ತಂಡದ ಆಯ್ಕೆ ಟ್ರಯಲ್ಸ್ ನಲ್ಲಿ ರಿಯೋ ಒಲಿಂಪಿಕ್ಸ್ ಪದಕ ವಿಜೇತೆ ಸಾಕ್ಷಿ ಮಲಿಕ್ ಅವರನ್ನು ಸೋಲಿಸಿದರು. ಇದರೊಂದಿಗೆ ಸತತ 2ನೇ ಬಾರಿಗೆ ಅನುಭವಿ ಪೈಲ್ವಾನ್ ಎದುರು ಸೋನಂ ಗೆಲುವು ದಾಖಲಿಸಿದರು.
ಸೆಮೀಸ್ನಲ್ಲಿ ಸರಿತಾ ಮೋರ್ರನ್ನು ಮಣಿಸಿದ 18 ವರ್ಷದ ಸೋನಂ ಫೈನಲ್ ಪಂದ್ಯದಲ್ಲಿ ಸಾಕ್ಷಿ ಸವಾಲನ್ನು ಬಗ್ಗುಬಡಿದರು.