

ಕೌಲಾಲಂಪುರ: ಉದಯೋನ್ಮುಖ ಸ್ಪಿನ್ನರ್ ಸೋನಮ್ ಯಾದವ್ (6ಕ್ಕೆ 4) ಮಾರಕ ದಾಳಿ ಹಾಗೂ ಆರಂಭಿಕ ಬ್ಯಾಟುಗಾರ್ತಿ ಜಿ.ಕಮಿಲಿನಿ (44*ರನ್, 29 ಎಸೆತ, 4 ಬೌಂಡರಿ, 3 ಸಿಕ್ಸರ್) ಬಿರುಸಿನಾಟದ ನೆರವಿನಿಂದ ಭಾರತ ತಂಡ 19 ವಯೋಮಿತಿ ಮಹಿಳಾ ಏಷ್ಯಾಕಪ್ ಟಿ20 ಟೂರ್ನಿಯಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ಎದುರು 9 ವಿಕೆಟ್‌ಗಳಿಂದ ಶುಭಾರಂಭ ಕಂಡಿದೆ.
ಬೇಯುಮಾಸ್ ಓವಲ್‌ನಲ್ಲಿ ಭಾನುವಾರ ನಡೆದ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್‌ಗೆ ಇಳಿದ ಪಾಕಿಸ್ತಾನ ತಂಡ, ಸೋನಮ್ ದಾಳಿಗೆ ನಲುಗಿ 7 ವಿಕೆಟ್‌ಗೆ 67 ರನ್‌ಗಳ ಸಾಧಾರಣ ಮೊತ್ತ ಕಲೆಹಾಕಿತು. ಕನ್ನಡತಿ ಮಿಥಿಲಾ ವಿನೋದ್ 3 ಓವರ್‌ನಲ್ಲಿ 15 ರನ್ ನೀಡಿ 1 ವಿಕೆಟ್ ಪಡೆದರು. ಸುಲಭ ಮೊತ್ತದ ಚೇಸಿಂಗ್‌ನಲ್ಲಿ ಗೊಂಗಡಿ ತ್ರಿಷಾ (0) ವಿಕೆಟ್ ಕಳೆದುಕೊಂಡ ಭಾರತ ಆರಂಭಿಕ ಆಘಾತ ಕಂಡಿತು. ಆಗ ಜಿ.ಕಮಲಿನಿ ಹಾಗೂ ಸನಿಕಾ ಚಲ್ಕೆ (19*ರನ್, 17 ಎಸೆತ, 3 ಬೌಂಡರಿ) ಜತೆಯಾಟದ ನೆರವಿನಿಂದ 7.5 ಓವರ್‌ಗಳಲ್ಲಿ 1 ವಿಕೆಟ್‌ಗೆ 68 ರನ್‌ಗಳಿಸಿದ ಭಾರತ ಇನ್ನೂ 12.1 ಓವರ್ ಬಾಕಿ ಇರುವಂತೆಯೇ ಗೆದ್ದು ಬೀಗಿತು. ಭಾರತ ತಂಡ ಮಂಗಳವಾರ ನೇಪಾಳ ವಿರುದ್ಧ ಆಡಲಿದೆ.
ಪಾಕಿಸ್ತಾನ: 7 ವಿಕೆಟ್‌ಗೆ 67 (ಕೋಮಲ್ ಖಾನ್ 24, ಫಿಜ್ಜಾ 5, ರೊಫಿಶನ್ 4, ಾತಿಮಾ 11, ಕುರಾತುಲೈನ್ 9*, ಸೋನಮ್ 6ಕ್ಕೆ 4,ಜೋಶಿತಾ 13ಕ್ಕೆ 1, ಮಿಥಿಲಾ 15ಕ್ಕೆ 1). ಭಾರತ: 7.5 ಓವರ್‌ಗಳಲ್ಲಿ 1 ವಿಕೆಟ್‌ಗೆ 68 (ಜಿ.ಕಮಲಿನಿ 44*, ಸನಿಕ 19*, ಾತಿಮಾ 22ಕ್ಕೆ 1).
ಭಾರತಕ್ಕೆ ಮುಂದಿನ ಪಂದ್ಯ
ಎದುರಾಳಿ: ನೇಪಾಳ
ಯಾವಾಗ: ಮಂಗಳವಾರ
ಆರಂಭ: ಬೆಳಗ್ಗೆ 11.30
ನೇರಪ್ರಸಾರ: ಸೋನಿ ಸ್ಪೋರ್ಟ್ಸ್