ಎಂಟು ವರ್ಷ ಬಳಿಕ ಮಂಡ್ಯದಲ್ಲಿ ಐಟಿಎಫ್ ಟೂರ್ನಿ: ಕರ್ನಾಟಕದ ಪ್ರಜ್ವಲ್ ದೇವ್, ಶಶಿಕುಮಾರ್ ಮುಕುಂದ್ ಭಾಗಿ

New-Project-8
Published on

ಬೆಂಗಳೂರು: ಸಕ್ಕರೆ ನಾಡು ಮಂಡ್ಯದಲ್ಲಿ ಎಂಟು ವರ್ಷಗಳ ಬಳಿಕ ಐಟಿಎ್ ವರ್ಲ್ಡ್ ಟೆನಿಸ್ ಟೂರ್ ಟೂರ್ನಿ ಮಂಡ್ಯ ಓಪನ್ ಪುರುಷರ ಟೆನಿಸ್ ಟೂರ್ನಿ ಆಯೋಜಿಸಲಾಗಿದ್ದು, ಜನವರಿ 7ರಿಂದ 14ರವರೆಗೆ ನಡೆಯಲಿದೆ. ಕರ್ನಾಟಕದ ತಾರೆ ಪ್ರಜ್ವಲ್ ದೇವ್ ಸೇರಿ 18 ದೇಶದ ಒಟ್ಟು 32 ಆಟಗಾರರು ಆಡಲಿದ್ದಾರೆ. 2015ರಲ್ಲಿ ಕೊನೆಯದಾಗಿ ಮಂಡ್ಯದಲ್ಲಿ ಈ ಟೂರ್ನಿ ಆಯೋಜನೆಗೊಂಡಿತ್ತು.

ಭಾರತದ ಅಗ್ರ ತಾರೆ ಶಶಿಕುಮಾರ್ ಮುಕುಂದ್ ಸೇರಿ 20 ಆಟಗಾರರು ನೇರ ಅರ್ಹತೆ ಪಡೆದರೆ, ಆತಿಥೇಯರಾದ ರಿಶಿ ರೆಡ್ಡಿ, ಮನೀಷ್ ಜಿ. ಮನೀಶ್ ಸುರೇಶ್ ಕುಮಾರ್ ಹಾಗೂ ನೀರಜ್ ಯಶ್‌ಪಾಲ್ ನಾಲ್ವರಿಗೆ ವೈಲ್ಡ್ ಕಾರ್ಡ್ ಎಂಟ್ರಿ ಲಭಿಸಿದೆ. ಉಳಿದ 8 ಆಟಗಾರರು ಅರ್ಹತಾ ಸುತ್ತಿನ ಮೂಲಕ ಪ್ರಮುಖ ಸುತ್ತಿಗೆ ಅರ್ಹತೆ ಗಿಟ್ಟಿಸಿಕೊಳ್ಳಲಿದ್ದಾರೆ. 16 ಜೋಡಿಗಳು ಡಬಲ್ಸ್‌ನಲ್ಲಿ ಆಡಲಿವೆ. ಎರಿಕ್ ವಾನ್ಶೆಲ್ಬೋಯಿಮ್ (ಉಕ್ರೇನ್), ಕ್ರಿಸ್ ವ್ಯಾನ್ ವೈಕ್ (ದಕ್ಷಿಣ ಆಫ್ರಿಕಾ), ಗೈಲ್ಸ್ ಹಸ್ಸಿ ( ಇಂಗ್ಲೆಂಡ್) ಮತ್ತು ಥಾಮಸ್ ಫ್ಯಾನ್‌ಕಟ್ (ಆಸ್ಟ್ರೇಲಿಯಾ) ಟೂರ್ನಿಯಲ್ಲಿ ಭಾಗವಹಿಸಲಿರುವ ಇತರ ಪ್ರಮುಖ ಆಟಗಾರರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net