

ಚೆನ್ನೈ: ಮದ್ರಾಸ್ ಇಂಟರ್ನ್ಯಾಷನಲ್ ಸರ್ಕ್ಯೂಟ್ 1ನೇ ದಿನದ ಓಟ ಕೊಂಚ ಮೋಡ ತುಂಬಿದ್ದ ಆಗಸದ ವಾತಾವರಣದಲ್ಲಿ ನಡೆಯಿತು. ಆದರೆ 2ನೇ ದಿನ ಸೂರ್ಯನ ಬೆಳಕಿತ್ತು. ಟ್ರ್ಯಾಕ್ ಉಷ್ಣತೆ ಹೆಚ್ಚಾಗಿದ್ದರಿಂದ ಚಾಲಕರು ಅವರ ಟೈರ್ಗಳು ಬಿಸಿಯಾಗುತ್ತವೆ ಎಂದು ಆತಂಕಪಡಬೇಕಿರಲಿಲ್ಲ. ನಿಜವಾದ ಸವಾಲು ಅವುಗಳನ್ನು ಅತಿಯಾದ ಬಿಸಿಯಾಗುವಿಕೆಯಿಂದ ತಡೆಯುವುದಾಗಿತ್ತು. ಚೆನ್ನೈನ ರೇಸಿಂಗ್ ನ ಎರಡನೆಯ ದಿನದಲ್ಲಿ ಒಟ್ಟು ನಾಲ್ಕು ಕಾರ್ಯಕ್ರಮಗಳೂ ಸತತವಾಗಿ ನಡೆದವು: ಫಾರ್ಮುಲಾ 4 ಇಂಡಿಯನ್ ಚಾಂಪಿಯನ್ಷಿಪ್ ಮತ್ತು ಐ.ಆರ್.ಎಲ್.ಗ್ರೂಪ್ ಬಿ ಡ್ರೈವರ್ಸ್ ಗೆ ಒಂದು.
ವಾರಾಂತ್ಯದ ಅಂತಿಮ ಇಂಡಿಯನ್ ರೇಸಿಂಗ್ ಫೆಸ್ಟಿವಲ್ (ಐ.ಆರ್.ಎಲ್.) ರೇಸ್ನಲ್ಲಿ ಸೌರವ್ ಗಂಗೂಲಿ ಅವರ ಒಡೆತನದ ಕೋಲ್ಕತ ರಾಯಲ್ ಟೈಗರ್ಸ್ ತಂಡದ ಚಾಲಕ ಸೊಹಿಲ್ ಶಾ ಮಹತ್ತರ ಗೆಲುವು ಸಾಧಿಸಿದರು. ಅವರು ಅಕ್ಷಯ್ ಬೊಹ್ರಾ (ಹೈದರಾಬಾದ್ ಬ್ಲಾಕ್ ಬರ್ಡ್ಸ್) ಅವರಿಂದ ಪ್ರಾರಂಭಿಕ ಒತ್ತಡ ಎದುರಿಸಿದರು. ಹಲವು ಸೇಫ್ಟಿ ಕಾರುಗಳು ಮತ್ತು ಕೆಂಪು ಧ್ವಜದ ನಡುವೆಯೂ ಶಾ ತಮ್ಮ ಲಯ ಕಂಡುಕೊಂಡರು ಮತ್ತು ಗೆಲುವಿನ ನಗೆ ಬೀರಿದರು. ಬೊಹ್ರಾ ಅವರನ್ನು ಅನುಸರಿಸಿ ಎರಡನೇ ಸ್ಥಾನ ಪಡೆದುಕೊಂಡರು. ಜಾನ್ ಲಂಕಾಸ್ಟರ್ ಕೊಯಮತ್ತೂರಿನ ಕಠಿಣ ಓಪನಿಂಗ್ ಸುತ್ತಿನಿಂದ ಫೈನಲ್ ಪೋಡಿಯಂ ಸ್ಪಾಟ್ ಪಡೆಯಲು ಪ್ರಯತ್ನಿಸಿದರೂ ಹೈದರಾಬಾದ್ ಬ್ಲಾಕ್ ಬರ್ಡ್ಸ್ ಗೆ ಅದು 2-3 ಫಿನಿಷ್ ಆಯಿತು.
ಫಾರ್ಮುಲಾ 4 ಇಂಡಿಯನ್ ಚಾಂಪಿಯನ್ಷಿಪ್ (ಎಫ್.4 ಇಂಡಿಯನ್)
ಚೆನ್ನೈನಲ್ಲಿ 2ನೇ ಸುತ್ತಿನ 2ನೇ ರೇಸ್ ನಲ್ಲಿ ಇಶಾನ್ ಮಾದೇಶ್ (ಕೊಲ್ಕತಾ ರಾಯಲ್ ಟೈಗರ್ಸ್) ಕಠಿಣ ಹಣಾಹಣಿಯ ನಂತರ ಗೆಲುವಿನತ್ತ ಮುನ್ನುಗ್ಗಿದರು. 8ರಿಂದ ಪ್ರಾರಂಭಿಸಿದ ಇಶಾನ್ ಅತ್ಯುತ್ತಮ ಪ್ರಾರಂಭದೊಂದಿಗೆ ಮುನ್ನುಗ್ಗಿದ್ದು ಅವರಿಗೆ ಓಪನಿಂಗ್ ಲ್ಯಾಪ್ ನಲ್ಲಿ 2ನೇ ಸ್ಥಾನ ಮುಟ್ಟುವಂತೆ ಮಾಡಿತು. ಅಲ್ಲಿಂದ ಅವರ ವೇಗ ಬಹಳ ಬಲವಾಗಿತ್ತು ಮತ್ತು ಇದು ಕೋಲ್ಕತ ರಾಯಲ್ ಟೈಗರ್ಸ್ ಚಾಲಕರಿಗೆ ಮುಂಚೂಣಿಗೆ ಬರಲು ಹೆಚ್ಚಿನ ಸಮಯ ತೆಗೆದುಕೊಳ್ಳಲಿಲ್ಲ. ಆದರೆ ಹೋರಾಟ ಇನ್ನೂ ಇತ್ತು. ಹಿಂದಿನಿಂದ ಬಂದ ಗಾಝಿ ಮೊಟ್ಲೆಕರ್ (ಕೊಲ್ಕತಾ ರಾಯಲ್ ಟೈಗರ್ಸ್) ಮತ್ತು ಸಷೆಲ್ ರೊಟ್ಗೆ (ಕಿಚ್ಚಾಸ್ ಕಿಂಗ್ಸ್ ಬೆಂಗಳೂರು) ಪಿ2ಗೆ ಹಣಾಹಣಿ ನಡೆಸಿದರು. ಈ ಇಬ್ಬರ ತೀವ್ರ ಹೋರಾಟದಲ್ಲಿ ಇಬ್ಬರೂ ಚಾಲಕರು ಎರಡನೆಯ ಸ್ಥಾನಕ್ಕೆ ಪ್ರಯತ್ನಿಸಿದರು. ಅಂತಿಮವಾಗಿ ರೊಟ್ಗೆ ದಿಟ್ಟತನದಿಂದ ಮುನ್ನುಗ್ಗಿ, 2ನೇ ಸ್ಥಾನ ಪಡೆಯಲು ತಮ್ಮ ರೇಸ್ ಕಲೆಯನ್ನು ಬಳಸಿದರು, ಇದರಿಂದ ಕೋಲ್ಕತ ರಾಯಲ್ ಟೈಗರ್ರ್ಸ್ ಪ್ರಭಾವಿ 1-2 ಫಿನಿಷ್ ಪಡೆಯಿತು.
ರೇಸ್ 3ರಲ್ಲಿ ಚೆನ್ನೈ ಟರ್ಬೊ ರೈಡರ್ಸ್ ನ ಶೇನ್ ಚಂದಾರಿಯಾ ಪೋಲ್ ನಿಂದ ಪ್ರಭಾವಶಾಲಿ ಲೈಟ್ಸ್-ಟು-ಫ್ಲಾಗ್ ಗೆಲುವು ನೀಡಿದರು. ಅವರ ಹಿಂದೆ ಸಾಯಿಶಿವ ಸಂಕರನ್ (ಸ್ಪೀಡ್ ಡೆಮೊನ್ಸ್ ದೆಹಲಿ) ಇಶಾನ್ ಮಾದೇಶ್(ಕೋಲ್ಕತ ರಾಯಲ್ ಟೈಗರ್ಸ್) ಅವರಿಂದ ಅಪಾರ ಒತ್ತಡ ಅನುಭವಿಸಿದರೂ ಎರಡನೆ ಸ್ಥಾನ ಪಡೆದರು. ಇಶಾನ್ ದಿನದ ತನ್ನ ಎರಡನೆಯ ಪೋಡಿಯಂ ತೆಗೆದುಕೊಂಡು ಚಾಂಪಿಯನ್ಷಿಪ್ ನ ಎದ್ದು ಕಾಣುವ ಚಾಲಕರಲ್ಲಿ ಒಬ್ಬರಾಗಿ ತಮ್ಮ ಸ್ಥಾನ ಗಟ್ಟಿಗೊಳಿಸಿಕೊಂಡರು. ಪೋಡಿಯಂ ಹೊರಗಡೆ ಸಷೆಲ್ ರೊಟ್ಗೆ (ಕಿಚ್ಚಾಸ್ ಕಿಂಗ್ಸ್ ಬೆಂಗಳೂರು) ಮತ್ತೊಂದು ರೋಮಾಂಚಕ ಓವರ್ ಟೇಕ್ ತೆಗೆದುಕೊಂಡಿದ್ದು ಅವರ ಹಿಂದಿನ ರೇಸ್ ಅನ್ನು ನೆನಪಿಸಿದ್ದು ಝಕಾರಿಯಾ ಮೊಹಮ್ಮದ್ (ಗಾಡ್ ಸ್ಪೀಡ್ ಕೊಚ್ಚಿ) ಅವರಿಂದ ಪಿ4 ಕಿತ್ತುಕೊಂಡರು.
ವಾರಾಂತ್ಯದ ಅಂತಿಮ ಫಾರ್ಮುಲಾ 4 ರೇಸ್ ಮತ್ತೆ ಸಷೆಲ್ ರೊಟ್ಗೆ ಅವರಿಗೆ ಸೇರಿತ್ತು. ಈ ಫ್ರೆಂಚ್ ವ್ಯಕ್ತಿ ಇಡೀ ವಾರಾಂತ್ಯದಲ್ಲಿ ತನ್ನ ವೇಗ ಮತ್ತು ರೇಸ್ ಕಲೆಯನ್ನು ಪ್ರದರ್ಶಿಸಿದರು ಮತ್ತು ರೇಸ್ 4 ಅದಕ್ಕೆ ಹೊರತಾಗಿರಲಿಲ್ಲ. ಪಿ3ಯಿಂದ ಪ್ರಾರಂಭಿಸಿ ರೊಟ್ಗೆ ತ್ವರಿತವಾಗಿ ಎರಡು ಕಾರುಗಳನ್ನು ಹಿಂದಕ್ಕೆ ಹಾಕಿ ಗೆಲುವು ಸಾಧಿಸಿದರು. ಲುವಿವೆ ಸಂಬುಡ್ಲ ಬಲವಾದ ಹೋರಾಟ ನಡೆಸಿದ್ದು ರೊಟ್ಗೆ ಅವರನ್ನು ಹಿಂದುಳಿಯುವಂತೆ ಮಾಡಿದರೂ ಎರಡನೆಯ ಸ್ಥಾನಕ್ಕೆ ತೃಪ್ತಿಪಡಬೇಕಾಯಿತು. ಅವರ ಹಿಂದೆ ಸಾಯಿಶಿವ ಸಂಕರನ್ ಪೋಡಿಯಂನ ಅಂತಿ ಹೆಜ್ಜೆ ಇರಿಸಲು ಸಮತೋಲನದ ಚಾಲನೆ ನೀಡಿದರು.
ಮುಂದಿನ ಹಾದಿ: ಚೆನ್ನೈನಲ್ಲಿನ 2ನೇ ಸುತ್ತಿನ ಸಮಾರೋಪದಲ್ಲಿ ಗಮನವು ಈಗ ಕೊಯಮತ್ತೂರಿಗೆ ಮತ್ತು ಕರಿ ಮೋಟಾರ್ ಸ್ಪೀಡ್ವೇ 3ನೇ ಸುತ್ತಿಗೆ ಬದಲಾಗಿದೆ. ಸ್ಪೀಡ್ ಡೆಮೊನ್ಸ್ ದೆಹಲಿ ಇಂಡಿಯನ್ ರೇಸಿಂಗ್ ಲೀಗ್ ನಲ್ಲಿ ತ್ವರಿತವಾಗಿ ತನ್ನನ್ನು ಮುಂಚೂಣಿಯ ತಂಡವಾಗಿ ರೂಪಿಸಿಕೊಂಡಿದ್ದು ಪ್ರಾರಂಭದ ಸುತ್ತುಗಳಲ್ಲಿ ಎರಡು ವಿಜಯಗಳನ್ನು ಸಾಧಿಸಿತು. ಈ ಮಧ್ಯದಲ್ಲಿ ಗೋವಾ ಏಸಸ್ ಕೊಯಮತ್ತೂರಿನಲ್ಲಿ ಮತ್ತೆ ರೇಸ್ ಪ್ರಾರಂಭವಾದಾಗ ಕಠಿಣ ಸವಾಲು ಒಡ್ಡುವ ಗುರಿ ಹೊಂದಿದೆ.
ಫಾರ್ಮುಲಾ 4 ಚಾಂಪಿಯನ್ಷಿಪ್ ನಲ್ಲಿ ಸಷೆಲ್ ರೊಟ್ಗೆ ಕೊಯಮತ್ತೂರಿನಲ್ಲಿ ನಡೆದ ವಾರಾಂತ್ಯದಲ್ಲಿ ಮತ್ತೆ ಪುಟಿದೆದ್ದು ಚೆನ್ನೈನ ಪೋಡಿಯಂನಲ್ಲಿ ಪ್ರಥಮ ಸ್ಥಾನಕ್ಕೆ ಪ್ರಯತ್ನಿಸಿದರು. ಅವರು 3ನೇ ಸುತ್ತಿನಲ್ಲಿ ವೇಗವನ್ನು ಕಾಯ್ದುಕೊಳ್ಳಲು ಬಹಳ ಉತ್ಸುಕರಾಗಿದ್ದರು. ಇಶಾನ್ ಮಾದೇಶ್ ಈಗಾಗಲೇ 2025ರ ಎಫ್.4 ಇಂಡಿಯನ್ ಚಾಪಿಯನ್ಷಿಪ್ ನಲ್ಲಿ ಮೊದಲ 2 ಸುತ್ತುಗಳನ್ನು ಗೆದ್ದಿದ್ದಾರೆ. ಮೊದಲ 2 ಸುತ್ತುಗಳಲ್ಲಿ ನಾವೇನು ನೋಡಿದ್ದೇವೆ ಎಂದರೆ ಸಷೆಲ್ ರೊಟ್ಗೆ ಮತ್ತು ಇಶಾನ್ ಮಾದೇಶ್ ಈ ಋತುವಿನಲ್ಲಿ ಚಾಂಪಿಯನ್ಷಿಪ್ ಗೆ ಹೋರಾಟ ಮಾಡುವ ಚಾಲಕರಾಗಿದ್ದಾರೆ.