ದಿ ಹಂಡ್ರೆಡ್ ಮಹಿಳಾ ಕ್ರಿಕೆಟ್ ಟೂರ್ನಿಯಲ್ಲಿ ಸ್ಮೃತಿ ಮಂದನಾ ದಾಖಲೆ

mandhana
Published on

ಬೆಂಗಳೂರು: ಭಾರತ ಮಹಿಳಾ ಕ್ರಿಕೆಟ್ ತಂಡದ ಉಪನಾಯಕಿ ಸ್ಮೃತಿ ಮಂದನಾ ಇಂಗ್ಲೆಂಡ್‌ನ ದಿ ಹಂಡ್ರೆಡ್ ಟೂರ್ನಿಯಲ್ಲಿ ನೂತನ ದಾಖಲೆ ಬರೆದಿದ್ದಾರೆ. ಜತೆಗೆ ಟೂರ್ನಿಯಲ್ಲಿ ಈ ಸಾಧನೆ ಮಾಡಿದ ಮೊದಲ ಬ್ಯಾಟರ್ ಎನಿಸಿದ್ದಾರೆ.

ದಿ ಹಂಡ್ರೆಡ್ ಮಹಿಳಾ ಕ್ರಿಕೆಟ್ ಟೂರ್ನಿಯಲ್ಲಿ ಸದರ್ನ್ ಬ್ರೇವ್ ತಂಡದ ಆರಂಭಿಕ ಬ್ಯಾಟರ್ ಆಗಿರುವ ಸ್ಮೃತಿ ಮಂದನಾ ಟೂರ್ನಿಯಲ್ಲಿ 500 ರನ್ ಗಳಿಸಿದ ಮೊದಲ ಬ್ಯಾಟರ್ ಆಗಿದ್ದಾರೆ. ಟೂರ್ನಿಯ 5ನೇ ಪಂದ್ಯದಲ್ಲಿ ವೆಲ್ಷ್ ಫೈರ್ ತಂಡದ ವಿರುದ್ಧ ಭರ್ಜರಿ ಅರ್ಧಶತಕ ಸಿಡಿಸಿದ ಸ್ಮತಿ ಮಂದನಾ 500 ರನ್ ಬಾರಿಸಿದ ಮೊದಲ ಬ್ಯಾಟರ್ ಎನಿಸಿದರು. ಪ್ರಸ್ತುತ ಸರಣಿಯಲ್ಲಿ ಆಡಿದ ಎರಡು ಪಂದ್ಯಗಳಲ್ಲಿ 125 ರನ್ ಪೇರಿಸಿದ್ದು,160.25 ಸ್ಟ್ರೈಕ್ ರೇಟ್ ಹೊಂದಿದ್ದಾರೆ. ಟ್ರೆಂಟ್ ರಾಕೆಟ್ಸ್ ಮತ್ತು ವೆಲ್ಷ್ ಫೈರ್ ವಿರುದ್ಧ ಕ್ರಮವಾಗಿ 55 ಮತ್ತು ಅಜೇಯ 70 ರನ್ ಗಳಿಸಿದ್ದಾರೆ.

ಟೂರ್ನಿಯ ಮೊದಲ ಆವೃತ್ತಿಯ ಏಳು ಪಂದ್ಯಗಳಲ್ಲಿ 167 ರನ್‌ಗಳಿಸಿದ್ದ ಸ್ಮೃತಿ ಮಂದನಾ, 2022ರ ಆವೃತ್ತಿಯಲ್ಲಿ ಎಂಟು ಪಂದ್ಯಗಳಿಂದ 211 ರನ್ ಗಳಿಸಿದ್ದರು. ಈವರೆಗೆ 2023ರ ದಿ ಹಂಡ್ರೆಡ್ ಪಂದ್ಯಾವಳಿಯಲ್ಲಿ ಸದರ್ನ್ ಬ್ರೇವ್ ಜೆರ್ಸಿ ಧರಿಸಿ ಆಡಿದ ಸ್ಮೃತಿ ಮಂಧಾನ ಎರಡು ಅರ್ಧಶತಕಗಳನ್ನು ಬಾರಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net