ದೇಶೀಯ ಕ್ರಿಕೆಟ್‌ನಲ್ಲಿ ಮುಂದುವರಿದ ಮುಂಬೈ ಪ್ರಾಬಲ್ಯ: ಚಿನ್ನಸ್ವಾಮಿ ಕ್ರೀಡಾಂಗಣಕ್ಕೆ ಕ್ರೀಡಾಭಿಮಾನಿಗಳ ದೌಡು!

New Project
Published on

ಬೆಂಗಳೂರು ಹಾಲಿ ರಣಜಿ ಟ್ರೋಫಿ-ಇರಾನಿ ಕಪ್ ಚಾಂಪಿಯನ್ ಮುಂಬೈ ತಂಡ 2024-25ನೇ ಆವೃತ್ತಿಯ ಸಯ್ಯದ್ ಮುಷ್ತಾಕ್ ಅಲಿ ಟ್ರೋಫಿ ಟಿ20 ಟೂರ್ನಿಯ ಚಾಂಪಿಯನ್ ಎನಿಸಿದೆ. ಸರ್ವಾಂಗೀಣ ನಿರ್ವಹಣೆ ತೋರಿದ ಮುಂಬೈ ತಂಡ ಭಾನುವಾರ ನಡೆದ ೈನಲ್ ಪಂದ್ಯದಲ್ಲಿ ಮಧ್ಯಪ್ರದೇಶ ಎದುರು 5 ವಿಕೆಟ್‌ಗಳ ಗೆಲುವು ದಾಖಲಿಸಿತು. ಇದರೊಂದಿಗೆ 2022ರ ಬಳಿಕ ಮುಂಬೈ ಮತ್ತೊಮ್ಮೆ ದೇಶೀಯ ಟಿ20 ಪ್ರಶಸ್ತಿ ಜಯಿಸಿತು. ಇದು ಮುಂಬೈ ತಂಡದ 63ನೇ ದೇಶೀಯ ಕಿರೀಟ ಎನಿಸಿದೆ.

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಪ್ರಶಸ್ತಿ ಕಾದಾಟದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್‌ಗೆ ಇಳಿದ ಮಧ್ಯಪ್ರದೇಶ 86 ರನ್‌ಗಳಿಗೆ 5 ವಿಕೆಟ್ ಕಳೆದುಕೊಂಡು ಸಾಧಾರಣ ಮೊತ್ತದತ್ತ ಸಾಗಿತು. ಆಗ ನಾಯಕ ರಜತ್ ಪಾಟೀದಾರ್ (81* ರನ್, 40 ಎಸೆತ, 6 ಬೌಂಡರಿ, 6 ಸಿಕ್ಸರ್) ಸಾಹಸದಿಂದ 8 ವಿಕೆಟ್‌ಗೆ 174 ರನ್‌ಗಳ ಸವಾಲಿನ ಮೊತ್ತ ಕಲೆಹಾಕಿತು. ಪ್ರತಿಯಾಗಿ ಮುಂಬೈ ಆರಂಭಿಕ ಆಘಾತ ಎದುರಿಸಿತು. ಆಗ ಅನುಭವಿ ಅಜಿಂಕ್ಯ ರಹಾನೆ (37) ಹಾಗೂ ಸೂರ್ಯಕುಮಾರ್ ಯಾದವ್ (48 ರನ್, 35 ಎಸೆತ, 4 ಬೌಂಡರಿ, 3 ಸಿಕ್ಸರ್) ಚೇಸಿಂಗ್‌ಗೆ ಬಲ ತುಂಬಿದರು. ಕೊನೆಯಲ್ಲಿ 21 ವರ್ಷದ ಸೂರ್ಯಾಂಶ್ ಶೆಡ್ಗೆ (36* ರನ್, 15 ಎಸೆತ, 3 ಬೌಂಡರಿ, 3 ಸಿಕ್ಸರ್) ಸ್ಫೋಟಕ ಆಟದ ನೆರವಿನಿಂದ 17.5 ಓವರ್‌ಗಳಲ್ಲಿ 5 ವಿಕೆಟ್‌ಗೆ 180 ರನ್‌ಗಳಿಸಿದ ಮುಂಬೈ 2ನೇ ಬಾರಿಗೆ ಪ್ರಶಸ್ತಿ ಜಯಿಸಿತು. 13 ವರ್ಷಗಳ ಬಳಿಕ ೈನಲ್‌ಗೇರಿದ್ದ ಮಧ್ಯಪ್ರದೇಶ 2ನೇ ಬಾರಿಗೆ ರನ್ನರ್ ಅಪ್‌ಗೆ ತೃಪ್ತಿಪಟ್ಟಿತು.

ಮಧ್ಯಪ್ರದೇಶ: 8 ವಿಕೆಟ್‌ಗೆ 174 (ಅರ್ಪಿತ್ 3, ಸುಭ್ರಾಂಶು 23, ಹರ್‌ಪ್ರೀತ್ 15, ರಜತ್ 81*, ವೆಂಕಟೇಶ್ 17, ರಾಹುಲ್ 19, ರೋಯ್‌ಸ್ಟನ್ 32ಕ್ಕೆ 2, ಶಾರ್ದೂಲ್ 41ಕ್ಕೆ 2). ಮುಂಬೈ: 17.5 ಓವರ್‌ಗಳಲ್ಲಿ 5 ವಿಕೆಟ್‌ಗೆ 180 (ಪೃಥ್ವಿ 10, ರಹಾನೆ 37, ಶ್ರೇಯಸ್ 16, ಸೂರ್ಯ 48, ದುಬೆ 9, ಅಥರ್ವ 16*, ಸೂರ್ಯಾಂಶ್ 36*, ತ್ರಿಪುರೇಶ್ 34ಕ್ಕೆ 2). ಪಂದ್ಯಶ್ರೇಷ್ಠ: ಸೂರ್ಯಾಂಶ್ ಶೆಡ್ಗೆ, ಸರಣಿಶ್ರೇಷ್ಠ: ಅಂಜಿಕ್ಯ ರಹಾನೆ (469 ರನ್).

63: ಮುಂಬೈ ತಂಡ ದೇಶೀಯ ಕ್ರಿಕೆಟ್‌ನಲ್ಲಿ ಗೆದ್ದ 63ನೇ ಪ್ರಶಸ್ತಿ ಇದಾಗಿದೆ. ರಣಜಿ ಟ್ರೋಫಿ (42), ಇರಾನಿ ಕಪ್ (15), ವಿಜಯ್ ಹಜಾರೆ ಟ್ರೋಫಿ (4), ಸಯ್ಯದ್ ಮುಷ್ತಾಕ್ ಅಲಿ (2).

3. ಹಾಲಿ ವರ್ಷ ಮುಂಬೈ ಗೆದ್ದ ಮೂರನೇ ಟ್ರೋಫಿ ಇದಾಗಿದ್ದು, ಇದಕ್ಕೂ ಮುನ್ನ ರಣಜಿ ಟ್ರೋಫಿ, ಇರಾನಿ ಕಪ್ ಜಯಿಸಿತ್ತು.

3. ಶ್ರೇಯಸ್ ಅಯ್ಯರ್ ಒಂದೇ ವರ್ಷದಲ್ಲಿ ಸಯ್ಯದ್ ಮುಷ್ತಾಕ್ ಅಲಿ ಹಾಗೂ ಐಪಿಎಲ್ ಟ್ರೋಫಿ ಗೆದ್ದ ಮೂರನೇ ಆಟಗಾರ ಎನಿಸಿದರು. ವೃದ್ದಿಮಾನ್ ಸಾಹ (2011), ಯೂಸ್ು ಪಠಾಣ್ (2012) ಮೊದಲಿಗರು.

ಕ್ರೀಡಾಭಿಮಾನಿಗಳ ದೌಡು!

ಕರ್ನಾಟಕ ತಂಡ ಸಯ್ಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿ ನಾಕೌಟ್ ಹಂತಕ್ಕೇರುವಲ್ಲಿ ವಿಲವಾದರೂ, ಉದ್ಯಾನ ನಗರಿಯ ಕ್ರೀಡಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ೈನಲ್ ಪಂದ್ಯ ವೀಕ್ಷಿಸಿದರು. ಆರಂಭದಲ್ಲಿ 2 ಸ್ಟಾೃಂಡ್‌ಗಳ ದ್ವಾರವನ್ನು ಮಾತ್ರ ತೆರದಿದ್ದ ಆತಿಥೇಯ ಕೆಎಸ್‌ಸಿಎ, ಪ್ರೇಕ್ಷಕರ ಸಂಖ್ಯೆಯಲ್ಲಿ ಗಣನೀಯವಾಗಿ ಏರಿಕೆಯಾದಂತೆ ಇತರ ಸ್ಟಾೃಂಡ್‌ಗಳ ದ್ವಾರಗಳನ್ನು ತೆರೆಯಲಾರಂಭಿಸಿತು. ವಾರಾಂತ್ಯದ ರಜೆ ಹಾಗೂ ಉಚಿತ ಪ್ರವೇಶವಿದ್ದ ಕಾರಣ ಸುಮಾರು 15ರಿಂದ 20 ಸಾವಿರ ಅಭಿಮಾನಿಗಳು ನೆಚ್ಚಿನ ಭಾರತೀಯ ಸ್ಟಾರ್ ಕ್ರಿಕೆಟಿಗರನ್ನು ಕಣ್ತುಂಬಿಕೊಂಡರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net