ಆರ್‌ಸಿಬಿ ಸಿಡಿಸಿದ ಗರಿಷ್ಠ ಸಿಕ್ಸರ್‌ಗಳ ದಾಖಲೆ ಮುರಿದ ಪಂಜಾಬ್ : ಟಿ20ಯಲ್ಲಿ 275 ರನ್ ದಾಖಲು

New-Project-2-3
Published on

ರಾಂಚಿ: ಬ್ಯಾಟರ್ ಅಭಿಷೇಕ್ ಶರ್ಮ (112 ರನ್, 51 ಎಸೆತ, 9 ಬೌಂಡರಿ, 9 ಸಿಕ್ಸರ್) ಬಿರುಸಿನ ಶತಕದ ನೆರವಿನಿಂದ ಸಯ್ಯದ್ ಮುಷ್ತಾಕ್ ಅಲಿ ಟಿ20 ದೇಶೀಯ ಟೂರ್ನಿಯಲ್ಲಿ ಪಂಜಾಬ್ ತಂಡ ಗರಿಷ್ಠ ಮೊತ್ತ ದಾಖಲಿಸಿ, ಆಂಧ್ರ ತಂಡದ ಎದುರು 69 ರನ್‌ಗಳ ಗೆಲುವು ದಾಖಲಿಸಿದೆ.

ಮಂಗಳವಾರ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ಪಂಜಾಬ್, ಅಭಿಷೇಕ್ ಶರ್ಮ ಹಾಗೂ ಅನ್ಮೋಲ್‌ಪ್ರಿತ್ ಸಿಂಗ್ (87 ರನ್, 26 ಎಸೆತ, 6 ಬೌಂಡರಿ, 9 ಸಿಕ್ಸರ್) ಸ್ಫೋಟಕ ಬ್ಯಾಟಿಂಗ್ ನೆರವಿನಿಂದ 6 ವಿಕೆಟ್‌ಗೆ 275 ರನ್ ದಾಖಲಿಸಿತು. ಇದು ಭಾರತೀಯ ಟಿ20ಯಲ್ಲಿ ತಂಡವೊಂದರ ಗರಿಷ್ಠ ಮೊತ್ತ ಎನಿಸಿತು. 2013ರ ಐಪಿಎಲ್‌ನಲ್ಲಿ ಪುಣೆ ವಾರಿಯರ್ಸ್‌ ಎದುರು ಆರ್‌ಸಿಬಿ ತಂಡ 263 ರನ್‌ಗಳಿಸಿದ್ದು ಹಿಂದಿನ ದೊಡ್ಡ ಮೊತ್ತವಾಗಿತ್ತು. ಜತೆಗೆ ಟಿ20 ಪಂದ್ಯವೊಂದರಲ್ಲಿ ಆರ್‌ಸಿಬಿ (21) ಸಿಡಿಸಿದ ಗರಿಷ್ಠ ಸಿಕ್ಸರ್‌ಗಳ ದಾಖಲೆಯನ್ನು ಪಂಜಾಬ್ (22)ಮುರಿಯಿತು. ಪ್ರತಿಯಾಗಿ ಆಂಧ್ರ ರಿಕಿ ಭುಯ್ (104*ರನ್, 52 ಎಸೆತ, 6 ಬೌಂಡರಿ, 9 ಸಿಕ್ಸರ್) ಶತಕದ ಪ್ರತಿರೋಧ ನಡುವೆಯೂ 7 ವಿಕೆಟ್‌ಗೆ 170 ರನ್‌ಗಳಿಸಲಷ್ಟೇ ಶಕ್ತವಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net