ನಿಧಾನಗತಿ ಓವರ್​ಗಾಗಿ ಭಾರತಕ್ಕೆ ಸತತ 2ನೇ ಬಾರಿ ದಂಡ

Cricket 25 Dec 19
Published on

ದುಬೈ: ಐದು ವರ್ಷಗಳ ಅವಧಿಯಲ್ಲಿ 264 ಪಂದ್ಯಗಳ ಕಾಲ ನಿಧಾನಗತಿ ಓವರ್​ಗಾಗಿ ಒಮ್ಮೆಯೂ ದಂಡ ಶಿಕ್ಷೆಗೆ ಗುರಿಯಾಗದಿದ್ದ ಭಾರತ ತಂಡ ಇದೀಗ ಸತತ 2ನೇ ಬಾರಿ ದಂಡ ತೆತ್ತಿದೆ. ನ್ಯೂಜಿಲೆಂಡ್ ವಿರುದ್ಧದ ಅಂತಿಮ ಟಿ20 ಪಂದ್ಯದಲ್ಲಿ ನಿಗದಿತ ಓವರ್ ವೇಳೆ 1 ಓವರ್ ಹಿಂದುಳಿದ ಕಾರಣಕ್ಕಾಗಿ ಭಾರತ ತಂಡಕ್ಕೆ ಪಂದ್ಯ ಸಂಭಾವನೆಯ ಶೇ. 20ರಷ್ಟು ದಂಡ ವಿಧಿಸಲಾಗಿದೆ.

ಇದಕ್ಕೆ ಮುನ್ನ 4ನೇ ಟಿ20 ಪಂದ್ಯದಲ್ಲಿ 2 ಓವರ್ ಹಿಂದುಳಿದಿದ್ದ ಭಾರತ ಶೇ. 40ರಷ್ಟು ದಂಡ ತೆತ್ತಿತ್ತು. ಇದು ಕೊಹ್ಲಿ ನೇತೃತ್ವದಲ್ಲಿ ಭಾರತ ತಂಡ ನಿಧಾನಗತಿ ಓವರ್​ಗಾಗಿ ದಂಡ ಶಿಕ್ಷೆಗೆ ಗುರಿಯಾದ ಮೊದಲ ದೃಷ್ಟಾಂತವಾಗಿತ್ತು. ಅದಕ್ಕೆ ಮುನ್ನ ಭಾರತ ತಂಡ ಕೊನೆಯದಾಗಿ ನಿಧಾನಗತಿ ಓವರ್​ಗಾಗಿ ದಂಡ ತೆತ್ತಿದ್ದು, 2014ರ ಆಗಸ್ಟ್​ನಲ್ಲಿ ಇಂಗ್ಲೆಂಡ್ ವಿರುದ್ಧದ ಓವಲ್ ಟೆಸ್ಟ್​ನಲ್ಲಿ ಧೋನಿ ಸಾರಥ್ಯದಲ್ಲಿ ಆಡಿದಾಗ ಆಗಿತ್ತು. -ಪಿಟಿಐ/ಏಜೆನ್ಸೀಸ್

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net