ಪರ್ತ್ ಟೆಸ್ಟ್‌ಗೆ ಮುನ್ನ ಭಾರತ ತಂಡಕ್ಕೆ ಗುಡ್‌ನ್ಯೂಸ್: ನಾಯಕ ರೋಹಿತ್ ಸೇರ್ಪಡೆ ಬಹುತೇಕ ಖಾತ್ರಿ!

New Project (4)
Published on

ಪರ್ತ್: ನಾಯಕ ರೋಹಿತ್ ಶರ್ಮ ಪರ್ತ್‌ನಲ್ಲಿ ಶುಕ್ರವಾರ ಆರಂಭವಾಗಲಿರುವ ಮೊದಲ ಟೆಸ್ಟ್‌ನ 3ನೇ ದಿನದಾಟದ ವೇಳೆ ಭಾರತ ತಂಡವನ್ನು ಕೂಡಿಕೊಳ್ಳುವ ನಿರೀಕ್ಷೆ ಇದೆ. ಅಂದರೆ ಭಾನುವಾರದ ವೇಳೆಗೆ ಆಸ್ಟ್ರೇಲಿಯಾ ತಲುಪಲಿರುವ ರೋಹಿತ್, ಮೊದಲ ಟೆಸ್ಟ್‌ನ ನಡುವೆ ಭಾರತ ತಂಡದ ಡ್ರೆಸ್ಸಿಂಗ್ ರೂಮ್‌ನಲ್ಲಿ ಕಾಣಿಸಲಿದ್ದಾರೆ.

2ನೇ ಮಗುವಿನ ಆಗಮನದ ಹಿನ್ನೆಲೆಯಲ್ಲಿ ಆಸೀಸ್‌ಗೆ ತಡವಾಗಿ ತೆರಳುವುದಾಗಿ ಬಿಸಿಸಿಐಗೆ ಮಾಹಿತಿ ನೀಡಿದ್ದ ರೋಹಿತ್, ಬಾರ್ಡರ್-ಗಾವಸ್ಕರ್ ಟ್ರೋಫಿ ಸರಣಿಯ ಆರಂಭಿಕ ಪಂದ್ಯಕ್ಕೆ ಅಲಭ್ಯರಾಗಿದ್ದಾರೆ. ಮೊದಲ ಟೆಸ್ಟ್ ಬಳಿಕ ಹೊನಲು ಬೆಳಕಿನಲ್ಲಿ ನಡೆಯಲಿರುವ 2ನೇ ಪಂದ್ಯಕ್ಕೆ ಮುನ್ನ 10 ದಿನಗಳ ಬಿಡುವು ದೊರೆಯಲಿದೆ. ಈ ವೇಳೆ ಆಸೀಸ್ ಪ್ರಧಾನ ಮಂತ್ರಿ ಇಲೆವೆನ್ ವಿರುದ್ಧ ಭಾರತ 3 ದಿನಗಳ ಅಹರ್ನಿಶಿ ಅಭ್ಯಾಸ ಪಂದ್ಯ ಆಡಲಿದೆ. ಈ ಪಂದ್ಯದಲ್ಲಿ ರೋಹಿತ್ ಕಣಕ್ಕಿಳಿಯಲಿದ್ದು, ಡಿ.6ರಂದು ಅಡಿಲೇಡ್‌ನಲ್ಲಿ ಆರಂಭವಾಗಲಿರುವ 2ನೇ ಪಂದ್ಯದಲ್ಲಿ ತಂಡವನ್ನು ಮುನ್ನಡೆಸಲಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net