ಪ್ಲೇಆಫ್ ಆಸೆ ಜೀವಂತವಿರಿಸಿದ ಗುಜರಾತ್ ಜೈಂಟ್ಸ್: ದೀಪ್ತಿ ಶರ್ಮ ಹೋರಾಟ ವ್ಯರ್ಥ

New-Project-9
Published on

ನವದೆಹಲಿ: ಆಲ್ರೌಂಡರ್ ದೀಪ್ತಿ ಶರ್ಮ (88* ರನ್, 60 ಎಸೆತ, 9 ಬೌಂಡರಿ, 4 ಸಿಕ್ಸರ್ ಹಾಗೂ 22ಕ್ಕೆ 2 ವಿಕೆಟ್) ಕೊನೆವರೆಗೂ ನಡೆಸಿದ ಹೋರಾಟದ ನಡುವೆಯೂ ಯುಪಿ ವಾರಿಯರ್ಸ್‌ ತಂಡ ವುಮೆನ್ಸ್ ಪ್ರೀಮಿಯರ್ ಲೀಗ್ 2ನೇ ಆವೃತ್ತಿಯಲ್ಲಿ ಗುಜರಾತ್ ಜೈಂಟ್ಸ್ ಎದುರು 8 ರನ್‌ಗಳಿಂದ ವೀರೋಚಿತ ಸೋಲು ಅನುಭವಿಸಿದೆ. ಇದರೊಂದಿಗೆ ಯುಪಿ ವಾರಿಯರ್ಸ್‌ ತಂಡ ಪ್ಲೇಆ್ ರೇಸ್‌ನಿಂದ ಬಹುತೇಕ ಹೊರಬಿದ್ದಿದ್ದರೆ, ಗುಜರಾತ್ ಜೈಂಟ್ಸ್ ತಂಡ ಟೂರ್ನಿಯಲ್ಲಿ 2ನೇ ಗೆಲುವಿನೊಂದಿಗೆ ಪ್ಲೇಆ್ ಆಸೆ ಜೀವಂತವಿರಿಸಿದೆ. ಮಂಗಳವಾರ ನಡೆಯಲಿರುವ ಆರ್‌ಸಿಬಿ ಹಾಗೂ ಮುಂಬೈ ನಡುವಿನ ಪಂದ್ಯದ ಲಿತಾಂಶ ಮಹತ್ವ ಪಡೆದುಕೊಂಡಿದೆ.

ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ಸೋಮವಾರ ನಡೆದ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಆಯ್ದ ಗುಜರಾತ್ ಜೈಂಟ್ಸ್, ಲೌರಾ ವೊಲ್ವಾರ್ಡ್ (43) ಹಾಗೂ ನಾಯಕಿ ಬೆತ್ ಮೂನಿ (74*ರನ್, 52 ಎಸೆತ, 10 ಬೌಂಡರಿ, 1 ಸಿಕ್ಸರ್) ಒದಗಿಸಿದ ಉತ್ತಮ ಆರಂಭದ ಬಲದಿಂದ 8 ವಿಕೆಟ್‌ಗೆ 152 ರನ್‌ಗಳಿಸಿತು. ಮಧ್ಯಮ ಓವರ್‌ಗಳಲ್ಲಿ ಲಯ ಕಳೆದುಕೊಂಡ ಗುಜರಾತ್ ಜೈಂಟ್ಸ್‌ಗೆ ಸೋಫಿ ಎಕ್ಲೆಸ್ಟೋನ್ (38ಕ್ಕೆ 3) ಕಡಿವಾಣ ಹೇರಿದರು. ಪ್ರತಿಯಾಗಿ 35 ರನ್‌ಗಳಿಗೆ 5 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ ಯುಪಿ ವಾರಿಯರ್ಸ್‌ಗೆ ದೀಪ್ತಿ ಶರ್ಮ ಹಾಗೂ ಪೂನಂ ಖೆಮ್ನಾರ್ (36*) ಜೋಡಿ 6ನೇ ವಿಕೆಟ್ 78 ಎಸೆತಗಳಲ್ಲಿ 109 ರನ್‌ಗಳಿಸಿ ಚೇಸಿಂಗ್ ಬಲ ತುಂಬಿತು. ಆದರೂ, ಅಂತಿಮವಾಗಿ ಯುಪಿ 5 ವಿಕೆಟ್‌ಗೆ 144 ರನ್‌ಗಳಿಸಲಷ್ಟೇ ಶಕ್ತವಾಯಿತು.

ಗುಜರಾತ್ ಜೈಂಟ್ಸ್: 8 ವಿಕೆಟ್‌ಗೆ 152 (ಲೌರಾ ವೊಲ್ವಾರ್ಡ್ 43, ಬೆತ್ ಮೂನಿ 74*, ಪೊಬಿ ಲಿಚ್‌ಫೀಲ್ಡ್ 4, ಆಶ್ಲೇ ಗಾರ್ಡ್‌ನರ್ 15, ಭಾರತಿ 1, ಕ್ಯಾಥರಿನ್ ಬ್ರೈಸ್ 11, ತನುಜಾ 1, ಎಕ್ಲೆಸ್ಟೋನ್ 38ಕ್ಕೆ 3, ದೀಪ್ತಿ ಶರ್ಮ 22ಕ್ಕೆ 2, ಚಾಮರಿ 25ಕ್ಕೆ 1).

ಯುಪಿ ವಾರಿಯರ್ಸ್‌: 5 ವಿಕೆಟ್‌ಗೆ 144 (ಅಲಿಸ್ಸಾ 4, ದೀಪ್ತಿ ಶರ್ಮ 88*, ಗ್ರೇಸ್ ಹ್ಯಾರಿಸ್ 1, ಶ್ವೇತಾ 8, ಪೂನಂ 36*, ಶಬ್ನಮ್ 11ಕ್ಕೆ 3, ಕ್ಯಾಥರಿನ್ ಬ್ರೈಸ್ 26 ಕ್ಕೆ 1).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net