ದೇಶೀಯ ಕ್ರಿಕೆಟ್‌ನಲ್ಲಿ ಒಂದೇ ಓವರ್‌ನಲ್ಲಿ ಆರು ವಿಕೆಟ್ ಸಾಧನೆ!: 5 ರನ್‌ಗಳಿಂದ ಸೋತ ಸಫರ್ಸ್

New-Project-16
Published on

ಗೋಲ್ಡ್ ಕೋಸ್ಟ್: ಆಸ್ಟ್ರೇಲಿಯಾ ಕ್ಲಬ್ ಕ್ರಿಕೆಟ್‌ನ 3ನೇ ಡಿವಿಷನ್ ಕ್ಲಬ್‌ನ ಗೋಲ್ಡ್ ಕೋಸ್ಟ್ ಪ್ರೀಮಿಯರ್ ಲೀಗ್‌ನಲ್ಲಿ ಮುಗೀರಬ ನೇರಂಗ್ ಮತ್ತು ಜಿಲ್ಲಾ ಕ್ರಿಕೆಟ್ ಕ್ಲಬ್‌ನ ನಾಯಕ ಗರೆಥ್ ಮಾರ್ಗನ್ (16ಕ್ಕೆ 7) ಓವರ್ ಎಲ್ಲ ಆರು ಎಸೆತಗಳಲ್ಲಿ ವಿಕೆಟ್ ಪಡೆಯುವ ಮೂಲಕ ವಿಶೇಷ ದಾಖಲೆ ರಚಿಸಿದ್ದಾರೆ. ಮೊದಲ ಬ್ಯಾಟಿಂಗ್ ನಡೆಸಿದ ಮುಗೀರಬ ನೇರಂಗ್ ಮತ್ತು ಜಿಲ್ಲಾ ಕ್ರಿಕೆಟ್ ಕ್ಲಬ್ 40 ಓವರ್‌ಗಳಲ್ಲಿ 178 ರನ್‌ಗಳಿಸಿತು. ಚೇಸಿಂಗ್ ನಡೆಸಿದ ಸರ್ರ್ಸ್‌ ಪ್ಯಾರಾಡೇಸ್ ತಂಡ 40 ಓವರ್‌ಗಳಲ್ಲಿ 174 ರನ್‌ಗಳಿಗೆ ಸರ್ವಪತನ ಕಂಡಿದೆ. ಅಂತಿಮ ಓವರ್‌ನಲ್ಲಿ 6 ರನ್ ಅಗತ್ಯವಿದ್ದಾಗ ದಾಳಿಗಿಳಿದ ಗರೆಥ್ ಮಾರ್ಗನ್, ಸತತ ಆರು ಎಸೆತಗಳಲ್ಲಿ ವಿಕೆಟ್ ಕಬಳಿಸಿ ತಂಡಕ್ಕೆ ರೋಚಕ ಗೆಲುವು ತಂದುಕೊಟ್ಟಿದ್ದಾರೆ. 2019ರಲ್ಲಿ ಕರ್ನಾಟಕದ ಅಭಿಮನ್ಯ ಮಿಥುನ್ ಹರಿಯಾಣ ಎದುರು ಓವರ್‌ನಲ್ಲಿ 5 ವಿಕೆಟ್ ಉರುಳಿಸಿದ್ದು ಹಿಂದಿ ದಾಖಲೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net