ಗ್ರಾಮೀಣ ಕ್ರೀಡೆಗಳಿಗೆ ಪ್ರೋತ್ಸಾಹ ಅಗತ್ಯ

13 Sirwar 1
Published on

ಸಿರವಾರ: ಮಕರ ಸಂಕ್ರಾಂತಿ ಪ್ರಯುಕ್ತ ಮಾಡಗಿರಿ ಗ್ರಾಮದಲ್ಲಿ ಶ್ರೀ ಮಹರ್ಷಿ ವಾಲ್ಮೀಕಿ ಯುವ ಬಳಗದಿಂದ ಶುಕ್ರವಾರ ಎತ್ತಿನ ಗಿರಿಕಿ ಬಂಡಿ ಸ್ಪರ್ಧೆ ಏರ್ಪಡಿಸಲಾಗಿತ್ತು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಕಲ್ಲೂರು ಅಡವಿಸಿದ್ದೇಶ್ವರ ಮಠದ ಶಂಭುಲಿಂಗ ಶಿವಾಚಾರ್ಯ ಸ್ವಾಮೀಜಿ, ಸಂಕ್ರಾಂತಿ ರೈತರ ಹಬ್ಬವಾಗಿದ್ದು, ಎತ್ತಿನ ಬಂಡಿ ಗಿರಕಿ ಸ್ಪರ್ಧೆ ರೈತರಿಗೆ ಖುಷಿ ನೀಡುತ್ತದೆ. ಗ್ರಾಮೀಣ ಕ್ರೀಡೆಗಳಿಗೆ ಪ್ರೋತ್ಸಾಹ, ಆರೋಗ್ಯಕರ ರಾಸುಗಳನ್ನು ಸಾಕಲು ರೈತರಿಗೆ ಉತ್ತೇಜನ ನೀಡುವ ಉದ್ದೇಶದಿಂದ ಈ ರೀತಿಯ ಕಾರ್ಯಕ್ರಮ ಅವಶ್ಯ ಎಂದರು.

ಸ್ಪರ್ಧೆಯಲ್ಲಿ 25 ಜೋಡಿ ಎತ್ತುಗಳು ಭಾಗವಹಿಸಿದ್ದವು. ವಿಜೇತ ರಾಸುಗಳ ಮಾಲೀಕರಿಗೆ ಪ್ರಥಮ ಬಹುಮಾನ 20 ತೊಲ ಬೆಳ್ಳಿ, ದ್ವಿತೀಯ ಬಹುಮಾನ 15 ತೊಲ ಬೆಳ್ಳಿ , ತೃತೀಯ ಬಹುಮಾನ 10 ತೊಲ ಬೆಳ್ಳಿ ನೀಡಲಾಗುತ್ತದೆ. ಗ್ರಾಪಂ ಅಧ್ಯಕ್ಷ ಕೆ.ಶರಣಪ್ಪ, ಉಪಾಧ್ಯಕ್ಷ ಗುಜ್ಜಲ್ ಬಸವರಾಜ ನಾಯಕ, ಕರ್ನಾಟಕ ವಾಲ್ಮೀಕಿ ನಾಯಕ ಮಹಾಸಭಾ ಜಿಲ್ಲಾಧ್ಯಕ್ಷ ಶರಣಬಸವ ಜಾನೇಕಲ್, ಪ್ರಮುಖರಾದ ನಾಗೇಶ ನಾಯಕ, ಯಲ್ಲಯ್ಯ ನಾಯಕ, ಎಂ ಹನುಮಂತ ನಾಯಕ, ತುಕಾರಾಂ ನಾಯಕ, ಎಂ.ಡಿ ಇಸ್ಮಾಯಿಲ್, ನವೀನ್ ಕುಮಾರ್ ನಾಯಕ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net