ಪ್ರೀತಿಯಲ್ಲಿ ಬಿದ್ರಾ ಟೀಮ್​ ಇಂಡಿಯಾ ಸ್ಟಾರ್​ ವೇಗಿ ಸಿರಾಜ್​? ಯಾರೀ ಜನೈ ಭೋಸ್ಲೆ? ಏನಿದು ವದಂತಿ? Mohammed Siraj

Mohammed Siraj
Published on

Mohammed Siraj : ಟೀಮ್​ ಇಂಡಿಯಾದ ಸ್ಟಾರ್​ ಬೌಲರ್​ ಮೊಹಮ್ಮದ್ ಸಿರಾಜ್ ಪ್ರೀತಿಯಲ್ಲಿ ಬಿದ್ದಿರುವಂತೆ ಕಾಣುತ್ತಿದೆ. ನಟಿ ಹಾಗೂ ಖ್ಯಾತ ಗಾಯಕಿ ಜತೆ ಡೇಟಿಂಗ್ ಮಾಡುತ್ತಿರುವುದಾಗಿ ವದಂತಿಗಳು ಹರಿದಾಡುತ್ತಿದೆ. ಇತ್ತೀಚೆಗೆ, ಸಿರಾಜ್, ಗಾಯಕಿಯ ಹುಟ್ಟುಹಬ್ಬದ ಆಚರಣೆಯಲ್ಲಿ ಕಾಣಿಸಿಕೊಂಡಿದ್ದು, ಅದಕ್ಕೆ ಸಂಬಂಧಿಸಿದ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿವೆ. ಆ ಗಾಯಕಿ ಯಾರು ಎಂಬುದನ್ನು ನಾವೀಗ ತಿಳಿಯೋಣ.

ಖ್ಯಾತ ಬಾಲಿವುಡ್ ಗಾಯಕಿ ಆಶಾ ಭೋಸ್ಲೆ ಅವರ ಮೊಮ್ಮಗಳು ಜನೈ ಭೋಸ್ಲೆ ಇತ್ತೀಚೆಗೆ ತಮ್ಮ ಹುಟ್ಟುಹಬ್ಬವನ್ನು ಅದ್ಧೂರಿಯಾಗಿ ಆಚರಿಸಿಕೊಂಡರು. ಇದಕ್ಕೆ ಸಂಬಂಧಿಸಿದ ಫೋಟೋಗಳನ್ನು ತಮ್ಮ ಇನ್‌ಸ್ಟಾದಲ್ಲಿ ಹಂಚಿಕೊಂಡಿದ್ದಾರೆ. ಫೋಟೋಗಳನ್ನು ನೋಡಿದ ನೆಟ್ಟಿಗರು ಸಿರಾಜ್ ಭಾಯ್, ಜನೈ ಭೋಸ್ಲೆ ಜತೆ ಡೇಟಿಂಗ್ ಮಾಡುತ್ತಿದ್ದಾರೆ ಎಂದು ಕಾಮೆಂಟ್ ಮಾಡುತ್ತಿದ್ದಾರೆ.

ಇದಿಷ್ಟೇ ಅಲ್ಲದೆ, ಇನ್​​​ಸ್ಟಾಗ್ರಾಂನಲ್ಲಿ ಒಬ್ಬರನ್ನೊಬ್ಬರು ಫಾಲೋ ಮಾಡುತ್ತಿರುವುದರಿಂದ ಈ ವದಂತಿಗಳು ಹೆಚ್ಚು ವೈರಲ್ ಆಗುತ್ತಿವೆ. ಆದಾಗ್ಯೂ, ಮತ್ತೊಬ್ಬ ಭಾರತೀಯ ಕ್ರಿಕೆಟಿಗ ಶ್ರೇಯಸ್ ಅಯ್ಯರ್ ಕೂಡ ಈ ಹುಟ್ಟುಹಬ್ಬದ ಆಚರಣೆಯಲ್ಲಿ ಭಾಗವಹಿಸಿದ್ದರು. ಅಲ್ಲದೆ, ಅನೇಕ ಬಾಲಿವುಡ್​ ಸೆಲೆಬ್ರಿಟಿಗಳು ಕೂಡ ಹುಟ್ಟುಹಬ್ಬ ಪಾರ್ಟಿಯಲ್ಲಿ ಸಂಭ್ರಮಿಸಿದರು.

ಸಿರಾಜ್​ ಜತೆ ಏನೋ ಮಾತನಾಡುತ್ತಿರುವ ಫೋಟೋವನ್ನು ಜನೈ ಭೋಸ್ಲೆ ಹಂಚಿಕೊಂಡಿರುವುದರಿಂದ ಡೇಟಿಂಗ್​ ವದಂತಿ ಹರಿದಾಡುತ್ತಿದೆ. ಈ ಬಗ್ಗೆ ಜನೈ ಭೋಸ್ಲೆಯಾಗಲಿ ಅಥವಾ ಸಿರಾಜ್​ ಆಗಲಿ ಈವರೆಗೆ ಪ್ರತಿಕ್ರಿಯೆ ನೀಡಿಲ್ಲ.

ಜನೈ ಭೋಸ್ಲೆ ಹುಟ್ಟುಹಬ್ಬ ಹಿನ್ನೆಲೆಯಲ್ಲಿ ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಶುಭಾಶಯಗಳನ್ನು ಕೋರಿದರು. ಜನೈ ಭೋಸ್ಲೆ ಛತ್ರಪತಿ ಶಿವಾಜಿ ಮಹಾರಾಜ್ ಚಿತ್ರದ ಮೂಲಕ ಬಾಲಿವುಡ್‌ಗೆ ಪಾದಾರ್ಪಣೆ ಮಾಡುತ್ತಿದ್ದಾರೆ. ಜನೈ ಭೋಸ್ಲೆ, ಆಶಾ ಭೋಸ್ಲೆ ಅವರ ಮಗ ಆನಂದ್ ಭೋಸ್ಲೆ ಮಗಳು. ಗಾಯಕಿಯಾಗಿ ಹೆಸರು ಮಾಡಿರುವ ಜನೈ ಭೋಸ್ಲೆ ನಾಯಕಿಯಾಗಿ ಮಿಂಚುತ್ತಾರಾ ಎಂದು ಕಾದು ನೋಡಬೇಕಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net