ಆರ್​ಸಿಬಿಗೆ ಬೇಡವಾದ ಮೊಹಮ್ಮದ್​ ಸಿರಾಜ್​! ಇಷ್ಟು ಕೋಟಿ ರೂ.ಗೆ ಗುಜರಾತ್​ ಟೈಟನ್ಸ್​ ಪಾಲಾದ ಸ್ಟಾರ್​ ವೇಗಿ | RCB

web siraj
Published on
ನವದೆಹಲಿ: ಇಂದು ನಡೆಯುತ್ತಿರುವ ಬಹುನಿರೀಕ್ಷಿತ ಐಪಿಎಲ್ ಹರಾಜು ಪ್ರಕ್ರಿಯೆಯಲ್ಲಿ ಭಾರತೀಯ ವೇಗಿ ಅರ್ಷ್​ದೀಪ್ ಸಿಂಗ್​ 18 ಕೋಟಿ ರೂ.ಗೆ ಹಾಗೂ ಬ್ಯಾಟರ್​ ಶ್ರೇಯಸ್​ ಅಯ್ಯರ್​ 26 ಕೋಟಿ ರೂ.ಗೆ ಪಂಜಾಬ್​ ಕಿಂಗ್ಸ್​ ಪಾಲಾದರು. ಇನ್ನು ಇವರೆಲ್ಲರಿಗಿಂತ ಅತ್ಯಂತ ದುಬಾರಿ ಮೊತ್ತಕ್ಕೆ ಖರೀದಿಯಾದ ರಿಷಭ್ ಪಂತ್​, 27 ಕೋಟಿಗೆ ಲಖನೌ ಸೂಪರ್ ಜೈಂಟ್ಸ್​ ತಂಡದ ಪಾಲಾದರು.
ಇನ್ನು ಭರ್ಜರಿ ಬಿಡ್ಡಿಂಗ್​ನಲ್ಲಿ ಮುನ್ನೆಲೆಗೆ ಬಂದ ಆರ್​ಸಿಬಿಯ ಮೊಹಮ್ಮದ್​ ಸಿರಾಜ್​, ಅಂತಿಮವಾಗಿ 12.25 ಕೋಟಿ ರೂ. ಗುಜರಾತ್​ ಟೈಟನ್ಸ್​ ಪಾಲಾದರು. ಈ ವೇಳೆ ನೀವು ಸಿರಾಜ್​ರನ್ನು ಉಳಿಸಿಕೊಳ್ಳಲು ಯೋಚಿಸುತ್ತೀರಾ ಎಂಬ ಪ್ರಶ್ನೆಗೆ ನಿರಾಕರಿಸಿದ ಆರ್​ಸಿಬಿ (RCB), ಸಿರಾಜ್​ರನ್ನು ಬಿಟ್ಟುಕೊಡುವ ಮೂಲಕ ಫ್ರಾಂಚೈಸಿಯ ಅಭಿಮಾನಿಗಳಿಗೆ ಬೇಸರಗೊಳಿಸಿತು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net