ಇಂದಿನಿಂದ ಇಂಡೋನೇಷ್ಯಾ ಓಪನ್ ಬ್ಯಾಡ್ಮಿಂಟನ್: ಹಿಂದೆಸರಿದ ಸಾತ್ವಿಕ್-ಚಿರಾಗ್

New-Project-17-1
Published on

ಜಕಾರ್ತ: ಮಂಗಳವಾರ ಆರಂಭವಾಗಲಿರುವ ಇಂಡೋನೇಷ್ಯಾ ಮಾಸ್ಟರ್ಸ್‌ ಸೂಪರ್-500 ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಸಿಂಗಲ್ಸ್ ಆಟಗಾರ ಎಚ್‌ಎಸ್ ಪ್ರಣಯ್ ಭಾರತದ ಸವಾಲು ಮುನ್ನಡೆಸಲಿದ್ದು, ವಿಶ್ವ ನಂ.2 ಡಬಲ್ಸ್ ಜೋಡಿಯಾಗಿರುವ ಸಾತ್ವಿಕ್ ಸಾಯಿರಾಜ್- ಚಿರಾಗ್ ಶೆಟ್ಟಿ ಟೂರ್ನಿಯಿಂದ ಹೊರಗುಳಿಯಲಿದ್ದಾರೆ.

ಸತತ ಎರಡು ಟೂರ್ನಿಗಳಲ್ಲಿ ರನ್ನರ್ ಅಪ್ ಆಗಿರುವ ಸಾತ್ವಿಕ್-ಚಿರಾಗ್ ಜೋಡಿ ಮುಂಬರುವ ಟೂರ್ನಿಗಳನ್ನು ಗಮನದಲ್ಲಿರಿಸಿ ಕಾರ್ಯದೊತ್ತಡ ತಗ್ಗಿಸುವ ದೃಷ್ಟಿಯಿಂದ ಬ್ರೇಕ್ ಪಡೆದಿದೆ. ಈ ಜೋಡಿಯ ಅನುಪಸ್ಥಿತಿಯಲ್ಲಿ 7ನೇ ಶ್ರೇಯಾಂಕಿತ ಪ್ರಣಯ್ ಭಾರತದ ಪ್ರಮುಖ ಆಶಾಕಿರಣವಾಗಿದ್ದು, ಮೊದಲ ಸುತ್ತಿನಲ್ಲಿ ಸಿಂಗಾಪುರದ ಲೊಹ ಕೀನ್ ಯೂರನ್ನು ಎದುರಿಸಲಿದ್ದಾರೆ.

ಮತ್ತೋರ್ವ ಭಾರತೀಯ ಷಟ್ಲರ್ ಲಕ್ಷ್ಯಸೇನ್ ಆರಂಭಿಕ ಸುತ್ತಿನಲ್ಲಿ ಚೀನಾದ ವೆಂಗ್ ಹಾಂಗ್ ಯಾಂಗ್ ಅವರನ್ನು ಎದುರಿಸಲಿದ್ದಾರೆ. ಕಳೆದ ವರ್ಷ ಕೆನಡ ಓಪನ್ ಟೂರ್ನಿ ಜಯಿಸಿದ ಬಳಿಕ ಲಕ್ಷ್ಯಸೇನ್ ಸತತ ಎಂಟು ಟೂರ್ನಿಯ ಮೊದಲ ಸುತ್ತಿನಲ್ಲಿ ನಿರ್ಗಮಿಸಿದ್ದಾರೆ. ವಿಶ್ವ ನಂ. 25 ಕಿಡಂಬಿ ಶ್ರೀಕಾಂತ್, ಮಲೇಷ್ಯಾದ ಲೀ ಜಿ ಜಿಯಾ ವಿರುದ್ಧ ತನ್ನ ಅಭಿಯಾನ ಆರಂಭಿಸಲಿದ್ದಾರೆ. ಸಾತ್ವಿಕ್-ಚಿರಾಗ್ ಗೈರಿನಲ್ಲಿ ಎಂಆರ್ ಅರ್ಜುನ್-ಧ್ರುವ ಕಪಿಲ ಡಬಲ್ಸ್‌ನಲ್ಲಿ ಭಾರತದ ಸವಾಲು ಮುನ್ನಡೆಸಲಿದ್ದು, ಮಹಿಳಾ ವಿಭಾಗದಲ್ಲಿ ಒಬ್ಬರು ಭಾಗವಹಿಸುತ್ತಿಲ್ಲ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net