ಐಪಿಎಲ್‌ನಿಂದ ಹೊರಬಿದ್ದ ದಿಗ್ಗಜ ಸಚಿನ್​ ತೆಂಡುಲ್ಕರ್ ಪುತ್ರ ಅರ್ಜುನ್

sachin arjun web
Published on

ಅಬುಧಾಬಿ: ಕ್ರಿಕೆಟ್ ದಿಗ್ಗಜ ಸಚಿನ್ ತೆಂಡುಲ್ಕರ್ ಪುತ್ರ ಹಾಗೂ ಎಡಗೈ ವೇಗಿ ಅರ್ಜುನ್ ತೆಂಡುಲ್ಕರ್ ಗಾಯದಿಂದಾಗಿ ಐಪಿಎಲ್ 14ನೇ ಆವೃತ್ತಿಯಿಂದ ಹೊರಬಿದ್ದಿದ್ದಾರೆ. ಇದರಿಂದಾಗಿ ಮುಂಬೈ ಇಂಡಿಯನ್ಸ್ ತಂಡಕ್ಕೆ ಬಲಗೈ ಮಧ್ಯಮ ವೇಗಿ ಸಿಮರ್‌ಜೀತ್ ಸಿಂಗ್ ಸೇರ್ಪಡೆಗೊಂಡಿದ್ದಾರೆ.

ಕಳೆದ ಹರಾಜಿನಲ್ಲಿ ಮೂಲಬೆಲೆ 20 ಲಕ್ಷ ರೂ.ಗೆ ಮುಂಬೈ ತಂಡ ಕೂಡಿಕೊಂಡಿದ್ದ 22 ವರ್ಷದ ಅರ್ಜುನ್, ಟೂರ್ನಿಯಲ್ಲಿ ಇದುವರೆಗೆ ಒಂದೂ ಪಂದ್ಯ ಆಡುವ ಅವಕಾಶ ಪಡೆದಿರಲಿಲ್ಲ. ಅರ್ಜುನ್ ಅಭ್ಯಾಸದ ವೇಳೆ ಗಾಯಗೊಂಡಿದ್ದು, ತವರಿಗೆ ಮರಳಿದ್ದಾರೆ ಎನ್ನಲಾಗಿದೆ. ಸಚಿನ್ ಸದ್ಯ ಮುಂಬೈ ತಂಡದ ಮೆಂಟರ್ ಆಗಿ ಯುಎಇಯಲ್ಲಿದ್ದಾರೆ.

ದೆಹಲಿಯ 23 ವರ್ಷದ ಆಟಗಾರ ಸಿಮರ್‌ಜೀತ್ ಕಳೆದ ಜೂನ್‌ನಲ್ಲಿ ನೆಟ್ ಬೌಲರ್ ಆಗಿ ಟೀಮ್ ಇಂಡಿಯಾದ ಜತೆಗೆ ಶ್ರೀಲಂಕಾ ಪ್ರವಾಸಕ್ಕೆ ತೆರಳಿದ್ದರು. ಬಳಿಕ ಕೊನೇ 2 ಟಿ20 ಪಂದ್ಯಗಳಿಗೆ ಪ್ರಧಾನ ತಂಡಕ್ಕೂ ಸೇರ್ಪಡೆಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net