ಏಷ್ಯನ್ ಗೇಮ್ಸ್ 2023: ಭಾರತಕ್ಕೆ ಡಬಲ್ ಸಂತೋಷ.. ಸಿಫ್ಟ್ ಕೌರ್ ಸಮ್ರಾಗೆ ಚಿನ್ನ, ಆಶಿಗೆ ಕಂಚಿನ ಪದಕ

sift
Published on

ಚೀನಾ: ಚೀನಾದ ಹ್ಯಾಂಗ್‌ಝೌನಲ್ಲಿ ನಡೆಯುತ್ತಿರುವ ಏಷ್ಯನ್ ಗೇಮ್ಸ್ 2023 ರ ನಾಲ್ಕನೇ ದಿನದಂದು ಅನೇಕ ಸ್ಪರ್ಧೆಗಳು ನಡೆಯಲಿದ್ದು, ಇದುವರೆಗೆ ಭಾರತ ತಂಡ 5 ಚಿನ್ನ ಸೇರಿದಂತೆ ಒಟ್ಟು 18 ಪದಕಗಳನ್ನು ಗೆದ್ದುಕೊಂಡಿದೆ.

22 ವರ್ಷದ ಶೂಟರ್​​​​ ಸಿಫ್ಟ್ ಕೌರ್ ಸಮ್ರಾ ಇಂದು ಮಹಿಳೆಯರ 50 ಮೀಟರ್ ರೈಫಲ್‌ 3 ಪೊಸಿಷನ್ಸ್ ಸ್ಪರ್ಧೆಯಲ್ಲಿ ಚಿನ್ನದ ಪದಕ ಗೆದ್ದಿದ್ದಾರೆ. ಸಿಫ್ಟ್ 469.6 ಅಂಕಗಳೊಂದಿಗೆ ಈ ಸ್ಪರ್ಧೆಯಲ್ಲಿ ಗೆದ್ದಿದ್ದಾರೆ. ಹಾಗೆಯೇ ಭಾರತದ 21 ವರ್ಷದ ಶೂಟರ್ ಆಶಿ ಚೌಕ್ಸೆ ಭಾರತಕ್ಕೆ ಕಂಚಿನ ಪದಕವನ್ನು ಗೆದ್ದುಕೊಟ್ಟಿದ್ದಾರೆ.

ಏಷ್ಯನ್ ಗೇಮ್ಸ್ 2023 ರ ಪಾಯಿಂಟ್ ಪಟ್ಟಿಯಲ್ಲಿ ಭಾರತ ಪ್ರಸ್ತುತ ಆರನೇ ಸ್ಥಾನದಲ್ಲಿದೆ. ಭಾರತದ ಕ್ರೀಡಾಪಟುಗಳು ಸಾಧ್ಯವಾದಷ್ಟು ಪದಕಗಳನ್ನು ಗೆದ್ದು ದೇಶಕ್ಕೆ ಹೆಮ್ಮೆ ತರುವ ಪ್ರಯತ್ನ ಮಾಡುತ್ತಿದ್ದಾರೆ, ಭಾರತ ತಂಡ ಬುಧವಾರ ಹಲವು ಪದಕಗಳನ್ನು ತನ್ನ ಖಾತೆಗೆ ಸೇರಿಸುವ ಮೂಲಕ ಪಾಯಿಂಟ್ ಪಟ್ಟಿಯಲ್ಲಿ ತನ್ನ ಸ್ಥಾನವನ್ನು ಸುಧಾರಿಸಲು ಪ್ರಯತ್ನಿಸುತ್ತಿದೆ. ಮನು ಭಾಕರ್ ಸೇರಿದಂತೆ ಹಲವು ಅಥ್ಲೀಟ್‌ಗಳಿಂದ ಭಾರತ ಪದಕ ಗೆಲ್ಲುವ ಭರವಸೆಯಲ್ಲಿದೆ.

ಸ್ಕ್ವಾಷ್‌ನಲ್ಲಿ ಭಾರತ ಪುರುಷರ ತಂಡ ಕುವೈತ್ ವಿರುದ್ಧ ಜಯ ಸಾಧಿಸಿತು. ಇದೀಗ ಭಾರತ ಫೈನಲ್‌ನಲ್ಲಿ ಪಾಕಿಸ್ತಾನವನ್ನು ಎದುರಿಸಲಿದೆ. ಸಿಂಗಾಪುರ ವಿರುದ್ಧದ ಪಂದ್ಯದಲ್ಲಿ ಭಾರತ ಮಹಿಳಾ ಹಾಕಿ ತಂಡ ಆರಂಭದಿಂದಲೂ ಪ್ರಾಬಲ್ಯ ಮೆರೆಯುತ್ತಿದ್ದು, ಎರಡನೇ ಕ್ವಾರ್ಟರ್‌ನಲ್ಲಿ ತಂಡ 8-0 ಮುನ್ನಡೆಯಲ್ಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net