ಸಿಡ್ನಿ ಥಂಡರ್ಸ್‌ ತಂಡಕ್ಕೆ ಮಹಿಳಾ ಬಿಗ್ ಬಾಷ್ ಲೀಗ್ ಚಾಂಪಿಯನ್ ಕಿರೀಟ

wbbl for web
Published on

ಸಿಡ್ನಿ: ಸಿಡ್ನಿ ಥಂಡರ್ಸ್‌ ತಂಡ ಮಹಿಳಾ ಬಿಗ್ ಬಾಷ್ ಲೀಗ್‌ನಲ್ಲಿ (ಡಬ್ಲ್ಯುಬಿಬಿಎಲ್) ಶನಿವಾರ ಚಾಂಪಿಯನ್ ಪಟ್ಟ ಅಲಂಕರಿಸಿತು. ನಾರ್ಥ್ ಸಿಡ್ನಿ ಓವೆಲ್ ಮೈದಾನದಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಸಿಡ್ನಿ ತಂಡ ಮೆಲ್ಬೋರ್ನ್ ಸ್ಟಾರ್ಸ್‌ ತಂಡವನ್ನು ಸೋಲಿಸಿ ಈ ಸಾಧನೆ ಮಾಡಿತು. ಇದರೊಂದಿಗೆ ಲೀಗ್‌ನಲ್ಲಿ 2ನೇ ಬಾರಿಗೆ ಚಾಂಪಿಯನ್ ಪಟ್ಟ ಅಲಂಕರಿಸಿತು. ಲೀಗ್‌ನ ಚೊಚ್ಚಲ ಆವೃತ್ತಿ 2015-16ರಲ್ಲಿ ಮೊದಲ ಬಾರಿಗೆ ಪ್ರಶಸ್ತಿ ಜಯಿಸಿತ್ತು. ಇದಾದ 4 ವರ್ಷಗಳ ಬಳಿಕ ಸಿಡ್ನಿ ತಂಡ ಪ್ರಶಸ್ತಿ ಜಯಿಸಿತು.

ಸಿಡ್ನಿ ಥಂಡರ್ಸ್‌ ತಂಡ ಲೀಗ್ ಹಂತದಲ್ಲಿ 3ನೇ ಸ್ಥಾನ ಪಡೆದಿತ್ತು. ಸೆಮಿಫೈನಲ್ ಹಣಾಹಣಿಯಲ್ಲಿ ಬ್ರಿಸ್ಬೇನ್ ಹೀಟ್ ತಂಡವನ್ನು ಸೋಲಿಸಿತ್ತು. ಟಾಸ್ ಜಯಿಸಿ ಮೊದಲು ಬ್ಯಾಟಿಂಗ್ ಮಾಡಿದ ಮೆಲ್ಬೋರ್ನ್ ಸ್ಟಾರ್ ಮಹಿಳಾ ತಂಡ 9 ವಿಕೆಟ್‌ಗೆ 86 ರನ್ ಪೇರಿಸಲಷ್ಟೇ ಶಕ್ತವಾಯಿತು. ಬಳಿಕ ಈ ಸಾಧಾರಣ ಮೊತ್ತ ಬೆನ್ನಟ್ಟಿದ ಸಿಡ್ನಿ ಥಂಡರ್ ಮಹಿಳಾ ತಂಡ 13.4 ಓವರ್‌ಗಳಲ್ಲಿ 3 ವಿಕೆಟ್‌ಗೆ 87 ರನ್‌ಗಳಿಸಿ ಗೆಲುವಿನ ನಗೆ ಬೀರಿತು.

ಮೆಲ್ಬೋರ್ನ್ ಸ್ಟಾರ್ಸ್‌: 9 ವಿಕೆಟ್‌ಗೆ 86 (ಮೆಗ್ ಲ್ಯಾನ್ನಿಂಗ್ 13, ಸುಧರ್‌ಲ್ಯಾಂಡ್ 20, ಕ್ಯಾಥರಿನ್ ಬ್ರಂಟ್ 22*, ಶಬ್ನಿಮ್ ಇಸ್ಮೈಲ್ 12ಕ್ಕೆ 2, ಸ್ಯಾಮ್ಮಿ ಜೊ ಜಾನ್ಸನ್ 11ಕ್ಕೆ 2), ಸಿಡ್ನಿ ಥಂಡರ್ಸ್‌: 13.4 ಓವರ್‌ಗಳಲ್ಲಿ 3 ವಿಕೆಟ್‌ಗೆ 87 (ಹೀದರ್ ನೈಟ್ 26*, ರವೀಲ್ ಟ್ರೆನಾಮ್ಯಾನ್ 23, ಬಿಯಾಮೌಂಟ್ 16, ರಚೀಲ್ ಹಯೆನ್ಸ್ 21*, ಕ್ಯಾಥರಿನ್ ಬ್ರಂಟ್ 24ಕ್ಕೆ 1, ಟೆಸ್ ಫ್ಲಿಂಟಾಫ್ 6ಕ್ಕೆ 1).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net