ಅದ್ಧೂರಿಯಾಗಿ ನಡೆದ ಸಿದ್ಧಗಂಗಾ ಪಬ್ಲಿಕ್ ಸ್ಕೂಲ್ ಸಾಂಸ್ಕೃತಿಕ ಉತ್ಸವ

siddaganga
Published on

ಬೆಂಗಳೂರು: ಬೆಳೆಯುತ್ತಿರುವ ಮಕ್ಕಳ ಬೌದ್ಧಿಕ ಬೆಳವಣಿಗೆಯ ಜೊತೆಗೆ ದೈಹಿಕ ಆರೋಗ್ಯವು ಅಷ್ಟೇ ಮುಖ್ಯ ಎಂದು ಮಲ್ಲತಳ್ಳಿ ವಿಸ್ತ ಕ್ಲಿನಿಕ್ ತಜ್ಞ ವೈದ್ಯರಾದ ಡಾ.ಸಾಯಿಕಿರಣ್ ಕಿವಿಮಾತು ಹೇಳಿದ್ದಾರೆ.

ಸಿದ್ಧಗಂಗಾ ಶ್ರೀ ಶಿವಕುಮಾರ ಸ್ವಾಮೀಜಿ ವಿದ್ಯಾಪೀಠ ಟ್ರಸ್ಟ್ ಶುಕ್ರವಾರ ಆಯೋಜಿಸಿದ್ದ ಚಂದ್ರಾ ಲೇಔಟ್‌ನಲ್ಲಿರುವ ಶ್ರೀ ಸಿದ್ಧಗಂಗಾ ಪಬ್ಲಿಕ್ ಸ್ಕೂಲ್‌ನ ನರ್ಸರಿ ಮತ್ತು ಪ್ರಾಥಮಿಕ ಶಾಲಾ ಮಕ್ಕಳ ಸಾಂಸ್ಕೃತಿಕ ಉತ್ಸವದಲ್ಲಿ ಮುಖ್ಯಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದರು.

ಮಕ್ಕಳು ಕೇವಲ ಪಠ್ಯಕ್ಕೆ ಸಬಂಧಪಟ್ಟ ಚಟುವಟಿಕೆಗಳಲ್ಲಿ ಮಾತ್ರ ಭಾಗಿಯಾಗದೇ ದೈಹಿಕ ಆರೋಗ್ಯಕ್ಕೆ ಪೂರಕವಾದ ಪಠ್ಯೇತರ ಕ್ರೀಡಾ ಚಟುವಟಿಕೆಗಳಲ್ಲೂ ಭಾಗಿಯಾಗಬೇಕು. ಈ ನಿಟ್ಟಿನಲ್ಲಿ ಸಿದ್ದಗಂಗಾ ಸಂಸ್ಥೆಯ ವಿದ್ಯಾರ್ಥಿಗಳ ಸಾಧನೆ ಹಾಗೂ ಆಡಳಿತ ಮಂಡಳಿಯ ಪ್ರೋತ್ಸಾಹ ಅನುಕರಣೀಯ ಎಂದು ಶ್ಲಾಸಿದರು.

ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಪಾಲ್ಗೊಂಡಿದ್ದ ಕಿರುತೆರೆ ನಟಿ ದಿವ್ಯಶ್ರೀ ಮಾತನಾಡಿ, ಮಕ್ಕಳಿಗೆ ಕೇವಲ ಹೆಚ್ಚಿಗೆ ಅಂಕಗಳನ್ನು ಪಡೆಯುವಂತೆ ಒತ್ತಡವನ್ನು ಹೇರದೆ, ಜೀವನದಲ್ಲಿ ಮತ್ತೆಂದೂ ಸಿಗದ ಬಾಲ್ಯವನ್ನು ಅನುಭವಿಸಲು ಬಿಡಿ ಎಂದು ಪೋಷಕರಿಗೆ ಸಲಹೆ ನೀಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲಾ ಆಡಳಿತ ಮಂಡಳಿಯ ಸದಸ್ಯರಾದ ವೈ.ತುಳಜಪ್ಪ ವಹಿಸಿದ್ದರು. ಆಡಳಿತ ಮಂಡಳಿಯ ಎಸ್. ಮೃತ್ಯುಂಜಯ, ಟಿ.ಎಸ್.ತುಳಸಿಕುಮಾರ್, ಪಾಂಶುಪಾಲರಾದ ಟಿ.ಎಂ.ಹಂಸ, ವ್ಯವಸ್ಥಾಪಕಿ ಎಂ. ಲಕ್ಷ್ಮಿ, ಇಂಜಿನಿಯರ್ ಹಿಮಾಚಲ್ ಮತ್ತಿತರರು ಪಾಲ್ಗೊಂಡಿದ್ದರು.

ಕೊನೆಯಲ್ಲಿ ಶಾಲಾ ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net