2ನೇ ಬಾರಿಗೆ ಕೋವಿಡ್​-19 ಟೆಸ್ಟ್​ಗೆ ಒಳಗಾದ ಷಟ್ಲರ್​ ಸಿಕ್ಕಿ ರೆಡ್ಡಿ, ಫಿಸಿಯೋ ಕಿರಣ್​

sikki reddy for web
Published on

ನವದೆಹಲಿ: ಭಾರತದ ಸ್ಟಾರ್​ ಷಟ್ಲರ್​ ಸಿಕ್ಕಿ ರೆಡ್ಡಿ ಹಾಗೂ ಫಿಸಿಯೋ ಥೆರಪಿಸ್ಟ್​ ಕಿರಣ್​ ಚಲ್ಲಾಗುಂಡ್ಲ ಶುಕ್ರವಾರ 2ನೇ ಬಾರಿಗೆ ಕೋವಿಡ್​-19 ಪರೀಕ್ಷೆಗೆ ಒಳಗಾದರು. ಸಿಕ್ಕಿ ಹಾಗೂ ಅವರ ಫಿಸಿಯೋ ಕಿರಣ್​ಗೆ ಪಾಸಿಟಿವ್​ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಹೈದರಾಬಾದ್​ನಲ್ಲಿ ಆಯೋಜಿಸಲಾಗಿದ್ದ ರಾಷ್ಟ್ರೀಯ ಬ್ಯಾಡ್ಮಿಂಟನ್​ ಶಿಬಿರವನ್ನು ಸ್ಥಗಿತಗೊಳಿಸಲಾಗಿತ್ತು. ಸಿಕ್ಕಿ ರೆಡ್ಡಿ ಹಾಗೂ ಕಿರಣ್​ ಸೇರಿದಂತೆ 21 ಮಂದಿ ಆಟಗಾರರು, ಕೋಚ್​ಗಳು ಹಾಗೂ ಸಹಾಯಕ ಸಿಬ್ಬಂದಿ ಭಾರತೀಯ ಕ್ರೀಡಾ ಪ್ರಾಧಿಕಾರದ (ಸಾಯ್​) ಆದೇಶದ ಮೇರೆಗೆ ಕೋವಿಡ್​ ಟೆಸ್ಟ್​ಗೆ ಒಳಗಾಗಿದ್ದರು. ಇಬ್ಬರ ವರದಿ ಪಾಸಿಟಿವ್​, ಉಳಿದ 21 ಮಂದಿಯ ವರದಿ ನೆಗೆಟಿವ್​ ಬಂದಿತ್ತು. ಆಗಸ್ಟ್​ 7 ರಿಂದ ಗೋಪಿಚಂದ್​ ಅಕಾಡೆಮಿಯಲ್ಲಿ ರಾಷ್ಟ್ರೀಯ ತರಬೇತಿ ಶಿಬಿರ ಆರಂಭಗೊಂಡಿತ್ತು. .

ಸಿಕ್ಕಿ ರೆಡ್ಡಿ ಹಾಗೂ ಕಿರಣ್​ ತಾವಾಗಿಯೇ ಹೈದರಾಬಾದ್​ನ ಆಸ್ಪತ್ರೆಯಲ್ಲಿ ಕೋವಿಡ್​-19 ಪರೀಕ್ಷೆಗೆ ಒಳಗಾದರು ಎಂದು ಮೂಲಗಳು ತಿಳಿಸಿವೆ. ವರದಿಯ ಫಲಿತಾಂಶ ಶನಿವಾರ ಸಿಗುವ ಸಾಧ್ಯತೆಗಳಿವೆ. ಉಳಿದ ಸದಸ್ಯರು ಕ್ವಾರಂಟೈನ್​ನಲ್ಲಿದ್ದಾರೆ. ಮುನ್ನೆಚ್ಚರಿಕೆ ಕ್ರಮವಾಗಿ ಸಿಕ್ಕಿ ರೆಡ್ಡಿ ಪತ್ನಿ ಷಟ್ಲರ್​ ಸುಮೀತ್​ ರೆಡ್ಡಿ ಕೂಡ ಕೋವಿಡ್​-19 ಪರೀಕ್ಷೆಗೆ ಒಳಗಾಗಿದ್ದಾರೆ ಎನ್ನಲಾಗಿದೆ. ಸುಮೀತ್​ ಕೂಡ ಡಬಲ್ಸ್​ ವಿಭಾಗದ ತಜ್ಞ ಆಟಗಾರನಾಗಿದ್ದು, ರಾಷ್ಟ್ರೀಯ ಶಿಬಿರದಲ್ಲಿ ಇರಲಿಲ್ಲ.

ಸಿಕ್ಕಿ ರೆಡ್ಡಿ ಡಬಲ್ಸ್​ ವಿಭಾಗದಲ್ಲಿ ಕನ್ನಡತಿ ಅಶ್ವಿನಿ ಪೊನ್ನಪ್ಪ ಜತೆಗೂಡಿ ಕಣಕ್ಕಿಳಿಯಬೇಕಿದೆ. ಅಶ್ವಿನಿ ಪೊನ್ನಪ್ಪ ಹೈದರಾಬಾದ್​ಗೆ ತೆರಳದೆ ಬೆಂಗಳೂರಿನಲ್ಲೇ ತರಬೇತಿ ಮುಂದುವರಿಸಿದ್ದಾರೆ. ಸಿಕ್ಕಿ ರೆಡ್ಡಿ ಹಾಗೂ ವಿಶ್ವ ಚಾಂಪಿಯನ್​ ಪಿವಿ ಸಿಂಧು ಅಭ್ಯಾಸ ಅವಧಿಗೆ ಬೇರೆಯಾಗಿದ್ದರೂ ಅಭ್ಯಾಸದ ಮೊದಲ ದಿನ (ಆ.7) ಫೋಟೋಗೆ ಒಟ್ಟಿಗೆ ಪೋಸ್​ ನೀಡಿದ್ದರು. ಭಾರತ ಬ್ಯಾಡ್ಮಿಂಟನ್​ ತಂಡ ಅ,3 ರಿಂದ 11 ರವರೆಗೆ ಥಾಮಸ್​ ಹಾಗೂ ಉಬೆರ್​ ಕಪ್​ನಲ್ಲಿ ಆಡಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net